
ಈಗ ಯಾರು ಸಿಗುವುದಿಲ್ಲ ಲಂಚ್(ಅ) ತಿನ್ನುವ ಸಮಯ ಎಲ್ಲರೂ ಅವರವರ ಪಾಲಿನ ಲಂಚ್(ಅ) ತಿನ್ನುತ್ತಿರುತ್ತಾರೆ ಕಾರಖೂನರು ಬಹಿರಂಗದಲ್ಲಿ ಅಧಿಕಾರಿಗಳು ಆಂಟಿ(ಯ) ರೂಂನಲ್ಲಿ. *****...
ಕೃತಯುಗದಲ್ಲಿ ಒಂದೇ ರಾಮಾಯಣ ದ್ವಾಪರಯುಗದಲ್ಲಿ ಒಂದೇ ಮಹಾಭಾರತ ಕಲಿಯುಗದಲ್ಲಿ ಪ್ರತಿದಿನವೂ ಒಂದಲ್ಲ ಒಂದು ರಾಮಾಯಣ ದಿನಬೆಳಗಾದರೆ ಮಹಾಭಾರತ *****...
ನಮ್ಮ ಪಂಚಾಂಗದ ಪ್ರಕಾರ ಹೊಸ ವರ್ಷದಲ್ಲಿ ಯು ಗಾದಿಯ ಮೇಲಿದ್ದರೆ ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಜನ ವರ್ರಿ ಯಲ್ಲಿರುತ್ತಾರೆ. *****...
ನಾವು ಯಾವಾಗಲಾದರೊಮ್ಮೆ ನೋಡುತ್ತೇವೆ ಕ್ಯಾಲೆಂಡರ್ ಆದರೆ ಅದನ್ನು ದಿನವು ನೋಡಿ ಬಡ್ಡಿ ಎಣಿಸುತ್ತಾನೆ ಪಾನ್ ಬ್ರೋಕರ್, ಮನಿಲೆಂಡರ್. *****...
ಅಲ್ಲಿಗೆ ಅಲ್ಲಿಗೆ ಎಂದು ನಾನಂದದ್ದು ನಿಜ ಮಹರಾಯ ಆದರೆ ಯಾಕೆ ಎಲ್ಲಿಗೆ ಎಂದೊಂದು ಮಾತನ್ನೂ ಕೇಳದೆ ನೀನು ಸದ್ದಿಲ್ಲದಂತೆದ್ದು ಬಿಡುವುದೇ ದಿಲ್ಲಿಗೆ? *****...













