
ಬೆನ್ನಿನ್ ಮೇಗಿನ್ ಸರಟ್ ಓದ್ರೋಯ್ತು ಬೆನ್ ಮ್ಯಾಗ್ ಐತೆ ಚಮ್ಡ! ಯೆಂಡ ತತ್ತ! ಚಮ್ಡ ಓದ್ಮೇಲ್ ಉಟ್ತೈತಾ ಒಂದ್ ದಮ್ಡಿ? ೧ ಬಡವೊರ್ ಬದಕೋ ದಾರೀಂತಂದ್ರೆ- ಈ ಮಾತ್ನಾಗ್ ಐತ್ ಮರ್‍ಮ! ಕುಡಕನ್ ಮಾತ್ ಅಂದ್ರ್ ಎಂತಾದ್ದಣ್ಣ- ಕಾಣದ ಕಣ್ಣೀರ್ ಸುರ್‍ಮ! ೨ ...
ಬಾಗಿ ಬಾಗದ ಹಠದ ದಿಟದ ಸಾಧನೆಯ ಸಾ- ಹಸದಲ್ಲಿ, ಜೋಕೆ ತೂಕಗಳಿಂದ ವಿಷವ ಹಿಳಿ- ದೆಳೆದು, ಜೀವನದ ಸವಿ ಬೆರಿಸಿ, ರಸವನ್ನು ತೊರೆ- ಯಿಸಲೆಳಸಿ, ನಿನ್ನ ಜೀವನ ಚಂದ್ರಕಲೆ ಮಿತ್ರ- ತಾಪವನ್ನು ನುಂಗಿ ನಗೆಗೂಡಿ, ಬಡತನ ನೀಗಿ, ತಾಯಿ ನೆಲವನೆ ಸುತ್ತಿಯೊಳಗೊಂ...
ಯಾಕೆ ದೂಷಿಸಬೇಕು ನಾನು ಅವಳನ್ನು ನನ್ನ ಬಾಳನ್ನು ವ್ಯಥೆಯಿಂದ ತುಂಬಿದಳೆಂದು? ಅರಿಯದವರಿಗೆ ಬೋಧಿಸಿದಳೆಂದು ಇತ್ತೀಚೆ ಸಲ್ಲದ ಅತ್ಯುಗ್ರ ಮಾರ್‍ಗಗಳನ್ನು, ಇಲ್ಲವೇ ಹಿರಿಜೀವಗಳಿಗೆ ಕಿರುದಾರಿ ಒಡ್ಡಿದಳೆಂದು? ಕಾಮನೆಗೆ ತಕ್ಕಂಥ ಕೆಚ್ಚು ಅವರಲ್ಲಿತ್ತೆ...
ಅಯ್ದಯ್ದರನಿತಯ್ದು ತಯ್ದಿತಾ ಕಾಲಂ ನಿನ್ನ ನಿನ್ನವರಂದು ನನಗಿತ್ತ ದಿನದಿಂ; ವಿಧಿ ನಿನ್ನ ತುಡುಕಲಿಂದೆನ್ನ ಬಾಳ್ತನದಿಂ ಕತ್ತಲಿಸಿತೊಡನೆ ಮುಂದಣ ಚಕ್ರವಾಲಂ! ೪ ನಿನಗಾದುದಿಲ್ಲ ನಾ, ನೀನೆ ನನಗಾದೆ- ನನ್ನ ಕೆಯ್ವಿಡಿದೆ ನೀನಳಲನನುಭವಿಸೆ! ನಿನ್ನ ಚೆಲು...
ನನ್ನ ಹರೆಯದ ಆ ದಿನಗಳಲ್ಲಿ ಅವಳತ್ತ ಗಂಡೊಂದು ಸುಳಿದರೆ, ಪ್ರೀತಿಸುತ್ತಿದ್ದಾನೆ ಅನ್ನಿಸಿ ಭಯ ದ್ವೇಷ ಉಕ್ಕಿ ತಲ್ಲಣಿಸುತ್ತಿದ್ದೆ. ನೋಡಿಯೂ ಅವಳತ್ತ ತಿರುಗದೆ ದಾಟಿ ಹೋದರೆ ಅವನು ‘ಅಯ್ಯೋ ಘೋರ ಅಪರಾಧ’ ಎಂದೆನ್ನಿಸಿ ಒಳಗೊಳಗೆ ಒದ್ದಾಡುತ್ತಿದ್ದೆ. ಆ...
ಕೈ ಮುಗದು ಕರ್‍ಪೂರ ಅಚ್ಚಿ ಕಾಸ್ಕೊಟ್ಟು ತಂಗನಕಾಯ್ ಚಚ್ಚಿ ಅಡ್ಬಿದ್ರೆ ಕಲ್ಲೆಲ್ಲ ದೇವ್ರೆ! ಇಲ್ದಿದ್ರೆ-‘ಜಾಕರ್ರ್ ಆವ್ರೆ!’ ೧ ‘ಮುನ್ಯಣ್ಣ!’ ಅಂದ್ಕೊಂಡಿ ಬಂದಿ ಝಲ್ ಝಲ್ನೆ ರೂಪಾಯ್ಗೋಳ್ ತಂದಿ ಸುರಿತಿದ್ರೆ ಕೊಡತೌನೆ ಯೆಂಡ! ಇಲ್ದಿದ್ರೆ ತರತೌನೆ ...













