Home / Kannada Poems

Browsing Tag: Kannada Poems

ಹಿಂದೆ- ನಿನ್ನ ಅಂಗಅಂಗಗಳ ಅಂದವ ಆರಾಧಿಸುತ್ತಾ ಶೋಷಿಸಿದರು; ನಿನ್ನ ಪೂಜಿಸುತ್ತಾ ಶೋಷಿಸಿದರು. ಗೋಡೆ ಮೇಲಿನ ಚಿತ್ರವಾಗಿಸಿದರು ಮನೆಯೊಳಗಿನ ಗೃಹಲಕ್ಷ್ಮಿಯಾಗಿಸಿದರು. ಇಂದು- ನಿನ್ನ ಉಬ್ಬುತಗ್ಗುಗಳ ಅಳೆಯುತ್ತಾ ಶೋಷಿಸುತ್ತಿದ್ದಾರೆ. ನಿನ್ನ ದೇಹದ ಬ...

ನಾನು ವಸುಮತಿ ನಿನ್ನ ಶ್ರೀಮತಿ ದಿವ್ಯಾಲಂಕಾರಭೂಷಿತೆ ನಿನ್ನ ಹೃದಯ ವಿರಾಜಿತೆ ಸಸ್ಯಶ್ಯಾಮಲೆ, ನವರತ್ನ ಕೋಮಲೆ ಆಗಿದೆನಿಂದು ಅಂಗಾಂಗ ವಿಕಲೆ. ದಾನವನೊಬ್ಬನ ಕೈಯಿಂದ ಅಂದು ಉಳಿಸಿದೆ ವರಾಹರೂಪದೆ ಬಂದು ನೂರಾರು ದಾನವರಿಂದು ಎಳೆದಾಡುತಿಹರು ಬಳಿ ನಿಂದು...

ಕಲಿಯಲಿಲ್ಲ ನಾವು ಕೃಷ್ಣ, ಕ್ರೈಸ್ತ, ಪೈಗಂಬರ, ಬುದ್ಧ, ಮಹಾವೀರ, ಸಂತರೆಲ್ ಬೋಧಿಸಿರುವ ಶಾಂತಿ ಮಂತ್ರ, ಕಲಿಯಲಿಲ್ಲ ನಾವು ಗೀತೆ ಬೈಬಲ್ ಕುರಾನಿನಿಂದ ಒಬ್ಬರನ್ನೊಬ್ಬರು ಪ್ರೀತಿಸುವ ಹೃದಯವಂತಿಕೆ, ವಿಶ್ವಶಾಂತಿಯ ಕಾಯ್ವ, ಧೀಮಂತಿಕೆ! ಮಾರಿಕೊಂಡೆವು ...

ಶಿಲಾಮೂರ್ತಿಯಲಿ ದೇವರನು ಕಾಣುವ ಹುಚ್ಚು ಹಂಬಲವೇಕೆ? ಕಣ್ಣಿಗೆ ಕಾಣುವ ದೇವರನು ಅರಿಯದೆ ಕೈಬಿಟ್ಟೆಯೇಕೆ? ಕಲ್ಲಿನಲಿ ಮಣ್ಣಿನಲಿ ಗಾಳಿಯಲ್ಲಿ ನೀರಿನಲ್ಲಿ ಪಶುಪ್ರಾಣಿ ಸಂಕುಲದಲಿ ಪ್ರಕೃತಿಯ ಜೀವಜಂತುಗಳಲ್ಲಿ ಅಣುರೇಣು ತೃಣಕಾಷ್ಠಗಳಲ್ಲಿ ಎಲ್ಲೆಂದರಲ್ಲ...

ಜೀವನದ ಹೆಜ್ಜೆಗಳು ಭಾರವಾದಾಗ, ಅಕ್ಕನಂತೆ ನಾನೂ ಎಲ್ಲ ಬಿಟ್ಟು, ಹೋದರೇನು ಎಂದನಿಸಿತ್ತು ಹಲವು ಬಾರಿ. ಆದರೆ ನಾನು ಹೋಗಲಿಲ್ಲ. ಬಂಧನಗಳ ಕಳಚಿ ಹೋಗುವುದು ಅಷ್ಟು ಸುಲಭವಿಲ್ಲ. ನನ್ನವರನ್ನುವ ವ್ಯಾಮೋಹ ನನ್ನ ಬಿಡಲಿಲ್ಲ. ಅರಸಿಕೊಂಡು ಹೋಗಲು ನನ್ನನ್ನ...

ಹುಟ್ಟು ಸಾವುಗಳ, ನೋವು ನಲಿವುಗಳ ಬದುಕಿದು ಬರೀ ಭ್ರಾಂತಿ ಆಸೆನಿರಾಸೆಗಳ ನಡುವೆ ತೂಗಿದೆ ಸಂತಸದ ಸಂಕ್ರಾಂತಿ ಮಾಗಿಯ ಪೊರೆಯದು ಕಳಚುತ್ತಾ ತೆರಳಿದೆ ಕಾಣಲು ಹೊಸ ವರುಷ ಸಿಹಿ ಸಿಹಿ ಮಾತಿನ ತೋರಣ ಕಟ್ಟಿದೆ ಸಂಕ್ರಾಂತಿಯ ಹರುಷ ಹೂಬನವೆಲ್ಲಾ ಉದುರಿ ಚಿಗ...

ನಾವನ್ನುತ್ತೇವ ವೇದಾಂತಿಗಳಂತೆ ನಮ್ಮ ಜೀವನದ ಹರಿಕಾರರು ನಾವೇ ಎಂದು, ಬೀಗುತ್ತೇವೆ ಯಾರ ಕೈವಾಡವೂ ಅಲ್ಲಿಲ್ಲ ಎಂದು. ಕಾಣದಿರುವ ಕೈಯದೊಂದು ನಮ್ಮ ಕತ್ತಿಗೆ ದಾರ ಹಾಕಿ ಎಳೆಯುವಾಗ ಅದು ಎಳೆದಂತೆ ನಾವು ಕುಣಿಯುವಾಗ ನಾವನ್ನುತ್ತೇವ ಸ್ಥಿತಪ್ರಜ್ಞರಂತೆ ...

ಚೈತ್ರ ಬಂದರೇನು? ಚಿಗುರಿಲ್ಲವಲ್ಲ ವಸಂತ ಬಂದರೇನು ಹೂ ಅರಳಿಲ್ಲವಲ್ಲ. ಯುಗಾದಿ ಬಂದರೇನು? ಹರುಷವಿಲ್ಲವಲ್ಲ ಕಟ್ಟಿದ ಕನಸುಗಳು ನನಸಾಗದೆ ಬಂಧಿಯಾಗಿವೆ ಭೂತದ ಪಂಜರದಲ್ಲಿ ಆಸೆ ಭರವಸೆಗಳು ದಹಿಸಿವೆ ಅಂತರಂಗದ ಅಗ್ನಿಕುಂಡದಲ್ಲಿ ಹೃದಯ ಮನಸ್ಸುಗಳೆರಡು ಶ...

ಐವತ್ತಾರರ ಹರಯದಲ್ಲಿ ಜೀವನ ಮೌನವಾಗಿದ್ದಾಗ ನನ್ನ ಮನವನೊಬ್ಬ ಕದ್ದನಮ್ಮ ಅಪರೂಪದ ಚೆಲುವನಮ್ಮ! ಅವನು ಮಡಿಲಲ್ಲಿ ಮಲಗಿದಾಗ ಸ್ವರ್ಗವೇ ಧರೆಗಿಳಿದಂತೆ ನಾನೆಲ್ಲ ಮರತೆನಮ್ಮ! ಅವನು ಮುಖನೋಡಿ ನಕ್ಕಾಗ ತಂಪಾದ ಹವೆಯಲ್ಲಿ ಮಿಂದಂತೆ ಪುಳಕಿತಗೊಂಡೆನಮ್ಮ! ಅವ...

ಚೈತ್ರ ಬಂತು ಚೈತ್ರ ಬದುಕು ಬವಣೆಯಾತ್ರೆ ಅಳುವಿರಲಿ, ನಗುವಿರಲಿ ಕಥೆಗೆ ತಕ್ಕ ಪಾತ್ರ ಅಪ್ಪ ಅಮ್ಮ ಅಣ್ಣ ತಂಗಿ ಜೊತೆಯಾದರು ಪಯಣಕೆ ನಲಿವಿನಿಂದ ನೋವು ನುಂಗಿ ನಡೆದೆವು ದೂರ ತೀರಕೆ ತೀರ ದೂರ ಬದುಕು ಭಾರ ಸೋಲುಂಡವು ಮೈಮನ ಉರಿಯೋ ಬಿಸಿಲು ಸುರಿಯೋ ಮಳೆ...

1...34567...14

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...