ಅಂದುಕೊಂಡಷ್ಟು…..

ಕೊನೆಗೂ ಮರುಭೂಮಿ ದಾಟಿ ಬ೦ದದ್ದಾಯಿತು- ಎಂದುಕೊಂಡದ್ದು ಎಷ್ಟರಮಟ್ಟಿಗೆ ನೆಮ್ಮದಿ. ಮಳೆಯೊಳಗೆ ತೇಲಿಬಿಡುವ ಕನಸುಕಂಡು ಹಸಿರುನಾಡಿನಲ್ಲಿದ್ದದ್ದೇನೋ ನಿಜ. ರಸ್ತೆ ತುಂಬ ಹೊಗೆ ಗಂಟುಮುಖ ಗಬ್ಬುವಿಚಾರಗಳ ಮೂಟೆ ಎಲ್ಲೆಲ್ಲೂ ದೊಡ್ಡವರ ದಡ್ಡತನ ಸಣ್ಣತನಗಳ ಕೂಪ ವಿಶಾಲತೆ ಕಾಣದ...

ನೆನಪು ನೆನಪು ನೆನಪು

ಕೆಂಪುಸಮುದ್ರದ ಕಡಲಿನೊಳಗಿನ ಮೀನುಗಳಿಗೆ ಮುತ್ತಿಟ್ಟ ನೆನಪು, ಮರುಭೂಮಿಯ ಬಿಸಿ ಉಸುಕಿನೊಳಗೆ ಹೆಸರು ಬರೆದು ಓಡಾಡಿದ ನೆನಪು, ಸೊಕ್ಕಿನ ಸೂರ್ಯ ಒರಟು ಕ್ಯಾಕ್ಟಸ್‌ ತರಚಿ ಉರಿಸಿದ ನೆನಪು. ಬುರ್ಕಾದೊಳಗಿನ ಕಥೆ ಕನಸುಗಳು ಹೇಳುವ ಕಣ್ಣುಗಳ ನೆನಪು,...

ಮುಖವಾಡ

ಅಂತರಂಗ ಬಹಿರಂಗಕ್ಕೊಂದೊಂದು ಆಕಾರ ವಿಕಾರ ಆದರೂ ಸಾಕ್ಷಾತ್ಕಾರಿಯ ಮಾತು ದುರಹ೦ಕಾರಿಯ ವರ್ತನೆ ಮನಸೇ, ನಿನಗೆಷ್ಟೊಂದು ಮುಖಗಳು! ಮನ ಮನಸಿನೊಳಗೆ ಸ್ಪರ್ಧೆಗಿಳಿಸಿ ಬೆಂಕಿ ನಾಲಿಗೆಗೆ ಎಲ್ಲವನೂ ಎಲ್ಲರನೂ ಕರಕಲಾಗಿಸಿ ಮೃತ್ಯು ಮಂಟಪಕೆ ಹೂಮಾಲೆ ಹಾಕುವ ಕೈಗಳು....

ಬ್ರಿಗೇಡ್ ರಸ್ತೆ

ಎದೆಗುಂಡಿಗೆ ಬಣ್ಣ ಬಣ್ಣ ತುಂಬಿ ಮೌನ ಮಾತನಾಡಿಯೇ ಬಿಡುವ ನವಿಲುಗರಿಯೂ ಚಿತ್ತಾರಕೆ ಚಿಗುರಿ ಮುದುಕರೂ ಹರಯರಾಗುವ ಬೆಂಗಳೂರಿನ ಬ್ರಿಗೇಡ್ ರಸ್ತೆಗೆ ಮುಪ್ಪಿಲ್ಲ- ಹದಗೊಳ್ಳುವ ಮನಸುಗಳ ತು೦ಬೆಲ್ಲ ಕನಸಿನ ಸಾಮ್ರಾಜ್ಯದ ಲಗ್ಗೆ ದಶದಿಕ್ಕು ದಶಾವತಾರದ ಚಿತ್ತ...

ವಾಸ್ತವ

ಮರುಳು ಮಾಡುವ ಹೆಜ್ಜೆಗಳು ಎದೆಯಲ್ಲಿ ಹುದುಗಿಕೊಳ್ಳದೆ ತೇಲುತ್ತವೆ ಭ್ರಮೆಬೇಡ ಪ್ರಮಾಣಪತ್ರ ಬೇಕೆ ಗೊತ್ತು ಗುರಿ ಇಲ್ಲದ ಹೊತ್ತಿಗೆ ಬೆಂಕಿ ಹಚ್ಚುತ ನುಸುಳುವಾಕೆ ನಕ್ಕಳು. ಕೋಳಿಕೂಗಿನ ಶಬ್ದ ಗಂಟೆ ಎಲ್ಲ ನಿಶ್ಶಬ್ಧ ಒಳಗೊಳಗೇ ಕೊರೆವ ಚಳಿ...

ಹೊನ್ನಹೊಳೆಯ ಸೂಜಿಗಲ್ಲು

ಸುರಿವ ಧಾರಾಕಾರ ಮಳೆಯೊಳಗೆ ತೊಯ್ಸಿಕೊಂಡು ನೆನೆದು ನಡುಗಿದ್ದು- ಬಿಸಿನೀರಿನ ಶವರ್ ಕೆಳಗೆ ಕುಳಿತು ಬೆಚ್ಚಗಾಗಿ ಹೊರಬಿದ್ದರೂ ಕಾಫಿ ಸಿಪ್‌ಗೆ ದೌಡಾಯಿಸಿದ ಸೂಜಿಗಲ್ಲು ಕೊರೆವ ಚಳಿ ಮಳೆ. ವರುಷ ವರುಷ ವಸಂತೋನ್ಮಾದದ ಚಿಗುರು ಹೂವುಗಳ ದಾಂಗುಡಿ...