ಮುಖವಾಡ

ಅಂತರಂಗ ಬಹಿರಂಗಕ್ಕೊಂದೊಂದು ಆಕಾರ ವಿಕಾರ
ಆದರೂ ಸಾಕ್ಷಾತ್ಕಾರಿಯ ಮಾತು
ದುರಹ೦ಕಾರಿಯ ವರ್ತನೆ
ಮನಸೇ, ನಿನಗೆಷ್ಟೊಂದು ಮುಖಗಳು!

ಮನ ಮನಸಿನೊಳಗೆ ಸ್ಪರ್ಧೆಗಿಳಿಸಿ
ಬೆಂಕಿ ನಾಲಿಗೆಗೆ ಎಲ್ಲವನೂ
ಎಲ್ಲರನೂ ಕರಕಲಾಗಿಸಿ ಮೃತ್ಯು
ಮಂಟಪಕೆ ಹೂಮಾಲೆ ಹಾಕುವ ಕೈಗಳು.

ದಿನನಿತ್ಯ ಶುಭ್ರಬಟ್ಟೆ ಖಾದಿ ಟೋಪಿ
ಬೆಡ್‌ರೂಂ ಕಿಡಕಿಯ ಆಚೆ
ಚಿಂದಿ ಆರಿಸುವ ಹುಡುಗಿಯರ
ಮೈಗೆ ಜೊಲ್ಲುಬಿಡುವ ರಸಿಕ

ಪಾರಿವಾಳಗಳ ಗುಟುರು ಗುಟುರುವಿಕೆ
ಕಾಗೆಗಳ ಕಾಕಾಕಾ ಏನೋ ಮಾತುಗಳು
ಕರಿ ಬಿಳಿಯ ಬಣ್ಣಗಳು ಹತ್ತಿರ
ಎಷ್ಟೊಂದು ಅಂತರ ಒಳತೋಟಿಗಳಿಗೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಮೆ
Next post ಪಂಚಾಮೃತ

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…