
ಕೃಷಿಯೆಂದರೊಂದೇ ಹೆಸರಿತ್ತಂದು ರಾಶಿ ಹೇಳುವರಿಂದು ಹೆಸರ ನೂರೊಂದು ಹುಸಿ ಹೆಸರುಗಳಲ್ಲಲ್ಲೇ ಹಿಂದು ಮುಂದು ಕಾಸಿನವಸರವೆಂದು, ಅಧಿಕ ಇಳುವರಿಗೆಂದು ಹೊಸ ಘಾಸಿ ತಂತ್ರದೊಳೆಲ್ಲ ಜಗ ಬರಿದಿಂದು – ವಿಜ್ಞಾನೇಶ್ವರಾ *****...
ಏರಲಾರದದು ಆಕಾಶದೆತ್ತರಕಾದೊಡಂ ಹೋರಿ ಬಾಳ್ವುದದು ಮಣ್ಣಿರುವ ತನಕ ತರತರದ ಹೂ ಹಣ್ಣು ಕೊಡದಾದೊಡಂ ನೊರೆ ಹಾಲ್ ಬೆಣ್ಣೆಯಪ್ಪುದಾ ಹಸುತಿನುವ ಗರಿಕೆಯಂತೆನ್ನ ಕವನ ಸಂಗ್ರಹವು – ವಿಜ್ಞಾನೇಶ್ವರಾ *****...
ಬುದ್ಧಿಯನ್ನು ತಿದ್ದಲಿಕೆಂದು ಲೋಕವನೆ ತಾ ಬಯ್ದು ಭರದೊಳಂತೆ ತಿರುಗಿ ಬಯ್ದವರೆನ್ನ ಬಂಧುಗಳೆಂದು ಬರೆದೊರದೊದೆಸಿಕೊಂಡವರೆಷ್ಟೋ ಜನರಾಗಿಹರು ಹಿಂದು ಬಲಕಪ್ಪ ಅನ್ನದೊಳು ಜೊತೆಗೂಡಿ ನಾರಿರ್ಪಂತೆನ್ನ ಬರಹಗಳಿವ್ ಹಿಂದಾದವರ ಜೊತೆಗೊಂದು ಬಿಂದು – ...
ಮಲ ಶೋಧನೆಯ ವೇಳೆ ವ್ಯರ್ಥವಾಗದಂದದಲೆನ್ನ ಒಳ ಮನವೆನ್ನ ಜೀವನವನವಲೋಕಿಸುತಿರಲಾಗ ತಳೆದಿರ್ಪ ಕವನಗಳಿವ್ ಗೊಬ್ಬರವೆಂದವಗಣಿಸದಿರಿ ಫಲವಂತ ಮರಕೆಲ್ಲದಕು ಮೂಲ ಗೊಬ್ಬರವಲಾ ಬೆಲೆಬಾಳ್ವಾರೋಗ್ಯಕ್ಕೆ ಮೂಲ ಮಲ ಶೋಧವಲಾ – ವಿಜ್ಞಾನೇಶ್ವರಾ *****...
ಕಳಿತ ಹಣ್ಣನಿಕ್ಕುವುದೆನ್ನ ಕವನದ ಬಯಕೆ ಹುಳಿತವಾದೊಡಂ ಉಣಲಕ್ಕು ಹುಳಿಗೊಜ್ಜಿಗಕ್ಕು ಕೊಳೆತೊಡದುವೇ ಬಿತ್ತಾಗಿ ಹೊಸ ಮರ ಬಕ್ಕು ಕಳಿತ ಗೊಬ್ಬರಕು ಕಳಿತ ಹಣ್ಣಿನಾ ಬೆಲೆ ಇಕ್ಕು ಫಲಿತದೊಳು ತಿಪ್ಪೇಶನಾರಾಧನೆಗೆ ಮಹತಿಕ್ಕು – ವಿಜ್ಞಾನೇಶ್ವರಾ **...
ಅಟ್ಟುಣಲಪ್ಪಂತ ಕುಂಭಕಾರಿಕೆ ಎನ್ನೊಲವು ಎಷ್ಟು ಮಾಡಿದರೆನಗೆ ಸಂದಿಲ್ಲವಾ ಕೌಶಲವು ಕಷ್ಟ ಪಟ್ಟೋಡಿಷ್ಟ ಸಿದ್ಧಿಯಲಾ? ಎನಗಾ ಛಲವು ಅಷ್ಟು ಮಾಡಲೊಂದೆರಡು ದಕ್ಕಿದರು ನಲಿವು ಒಟ್ಟೆಲ್ಲ ಕುಂಡವಾದೊಡಷ್ಟೆನಗೆ ನೂಕು ಬಲವು – ವಿಜ್ಞಾನೇಶ್ವರಾ *****...
ಏನಿದೇನಿದೆಲ್ಲರೊಳೆಲ್ಲದರೊಳ್ ತಪ್ಪು ಕಾಣುವಿರೆನ್ನದಿರಿ ಎನ್ನ ತಪ್ಪಲ್ಲವಿದು ಎಮ್ಮಾಯುರ್ವೇದದರಿವಿರ್‍ಪುದಿಂತು ಏನಾದರಾಗಲೆನ್ನ ಮನವೊಪ್ಪದಾ ದಾರಿಯನು ಎಂತು ಅನುಸರಿಪುದೆನ್ನದಿರಿ. ಎಲ್ಲೆಡೆಯೊಳಿಳೆಯಾರೋಗ್ಯ ಕುಂದಿರಲು ಆನೇನ ಮಾಡಲೆಲ್ಲಿ ಪೋದರು ಪೊ...
ಬಲು ಜಟಿಲವಿಹುದೆಮ್ಮಾಯುರ್ವೇದ ಸೂತ್ರಗಳ ಪಾಲಿ ಸಲೆಂದದನು ಛೀತ್ಕರಿಸಿ ಸುಖವೆಂದೇನೇನೋ ಮಾಡಿ ರಲಾ ದೋಷಗಳೊಂದಾಗಿ ಇಳೆಯ ಕಳೆ ಕಳೆಯುತಿ ರಲೆಮಗಿನ್ನು ಆಯ್ಕೆಯುಳದಿಲ್ಲ, ಬದುಕುಳಯ ಲೆಲ್ಲ ತರ ಪಥ ಪಥ್ಯ ದರ್ಶನವನಿವಾರ್‍ಯ – ವಿಜ್ಞಾನೇಶ್ವರಾ ***...
ಅರ್ಜುನನ ಪಾಡಿಂದೆನಗೆನ್ನ ಕೃಷಿಯ ಪರ ಬರೆವೀ ಹೊತ್ತಿನಲಿ, ಶಲ್ಯ, ಭೀಷ್ಮ, ದ್ರೋ ಣರಂಥವರೆಷ್ಟೊಂದು ಸಜ್ಜನ ಬಂಧುಗಳೆನ್ನ ವರಿಂದು ಪೇಟೆಯ ಪಕ್ಷದೊಳಿರುತಿಹರು ಪರಿಸರದ ಪರವಿತ್ತ ಕೃಷಿಗೆ ಬರಲೆಡೆ ಕಾಣದವರು – ವಿಜ್ಞಾನೇಶ್ವರಾ *****...
ಪಕ್ಕದೊಳು ಕುಳಿತಪ್ಪ ಆತಂಕದೊಳಾಗಾಗ ಚಾ ಲಕ ಮಗನ ವೇಗವತಿಯಾಯ್ತೆಂದು ಬ್ರೇಕೊತ್ತುವಂತೆನ್ನ ಕವನ ಸಾಲುಗಳಿಲ್ಲಿ ಲೋಕ ತಿದ್ದುವೆನೆಂದಲ್ಲ ಕೋಪವಾರಲು ಇಲ್ಲ ಯಾಕದೇನೋ ಅಂತೆ ಕೂಡ್ರಲರಿಯದೊದರಿದಲಾ – ವಿಜ್ಞಾನೇಶ್ವರಾ *****...














