K Sharifa

ನೀರ ಮೋಡಗಳ ರಥವೇರಿ

ಬಿರುಗಾಳಿಯ ಎದುರು ಉರೀದಿತು ಯಾವ ದೀಪ? ಸಮುದ್ರದಲೆಗಳ ಎದುರಿಸಿ ಯಾವ ಗೋಡೆ ತಾನೆ ನಿಂತೀತು? ಭಯಂಕರ ಅಲೆ ಬಿರುಗಾಳಿಗೆ ಬೆದರದೇ ಬೆಚ್ಚದ ಉರಿಯುತ್ತಿದೆ ನೋಡು ಪ್ರೀತಿಯ ದೀಪ. […]

ಆ ಪುಟ್ಟ ಹುಡುಗಿ

ಸೂರ್‍ಯ ಹುಟ್ಟುವ ಮುನ್ನ ಆ ಪುಟ್ಟ ಹುಡುಗಿಯ ಬರಿಗಾಲಿನ ನಡೆಗೆ ಆರಂಭ ಹರಡಿದ್ದ ತಲೆಗೂದಲು ಬಾಚಿಕೊಳ್ಳುವ ಗೊಡವೆಯಿಲ್ಲ ತಡವಾದರೆ ಚಿಂದಿ, ಪ್ಲಾಸ್ಟಿಕ್ ಬೇರೆಯವರು ಆಯ್ದುಕೊಂಡಾರು ಕಣ್ಣುಜ್ಜಿಕೊಳ್ಳುತ್ತಲೇ ಎದ್ದು […]

ಮಿಥಿಲೆಯ ಸೀತೆಯರು

ಭಾಗ ೧ ಕೂಗಬೇಕೆಂದರೆ ಹಾಳಾದ್ದು ಧ್ವನಿಯೇ ಹೊರಡುತ್ತಲಿಲ್ಲ ಧ್ವನಿಪೆಟ್ಟಿಗೆ ಸ್ಟ್ರಕ್ ಆಯಿತೇ? ಒಡಲಾಳದಲ್ಲಿ ಹುಗಿದಿಟ್ಟ ಅದೆಷ್ಟೋ ಇತಿಹಾಸದ ಪುಟಗಳು ತೊಟ್ಟ ದಾಗೀನ ಆಭರಣ ಸಹಿತ ಸಂಸ್ಕೃತಿಯ ಗೋರಿಯೊಳಕ್ಕೆ […]

ಸಮನ್ವಯ ಸಂತ

ಮುರಿದ ಮೀನಾರುಗಳು, ಕಡಿದ ಮಂದಿರಗಳು ಹಾಳು ಗೋಡೆ ಅವಶೇಷ ಕೋಟೆ ಕೊತ್ತಳಗಳು ಗತ ಮರೆತ ಇತಿಹಾಸದ ಪುಟಗಳು ಸರಸ ಜನನ, ವಿರಸಮರಣವೆಂದೆ ಸಮರಸವೇ ನಿನ್ನ ಬದುಕಾಯ್ತು ಗೆಳೆಯಾ! […]

ಫತ್ವಾಗಳ ಸುಳಿಯಲ್ಲಿ

ಆಗಸದ ಝಗಝಗಿಸುವ ನಕ್ಷತ್ರಗಳು ಸಾಮೂಹಿಕ ರಜೆ ಹಾಕಿ ಹೋಗಿದ್ದವು. ವಸುಂಧರೆಯ ಮೇಲೆ ಚಿಗರೆಯಂತೆ ಪಟಪಟನೆ ಪುಟಿನಗೆಯುವ ಒಂದೇ ಒಂದು ನಕ್ಷತ್ರ ಮಿನುಗುತ್ತಿತ್ತು. ಪ್ರಖರವಾಗಿ ಹೊಳೆಯುತ್ತಿತ್ತು ಮೂಗುತಿ ಸುಂದರಿ […]

ಬುದ್ಧನ ಹುಡುಕಾಟ

ಬುದ್ಧನ ಹುಡುಕಿದೆ. ಉಸಿರುಗಟ್ಟಿಸುವ ನಾಗರೀಕ ತಾಣಗಳಲ್ಲಿ ಚಿತ್ರಹಿಂಸೆಯ ಗ್ಯಾಸ್ ಛೇಂಬರ್‌ಗಳಲ್ಲಿ ತೊಟ್ಟಿಲಲ್ಲಿ ಮಲಗಿದ ಮುದ್ದು ಕಂದನ ಮುಗ್ಧ ಮುಗುಳು ನಗೆಯ ಬೆಳಕಲ್ಲಿ ದ್ವೇಷವಿಲ್ಲ, ಮಗುವಿನ ಮುಗ್ಧತೆಯಲ್ಲಿ. ಬುದ್ಧನ […]

ಮೆಹರ್

ಒಂದೇ ಉಸುರಿನಲ್ಲಿ ಹೇಳಿ ಮೂರು ತಲ್ಲಾಖ್ ಹೊರಟೆ ನೀನು ಎಲ್ಲಿಗೆ? ಬದುಕಿನ ಏರುಪೇರುಗಳಲಿ ಬಹಳ ಸಹಿಸಿಹೆನು ಪೀಡನೆ ಸಾಕು ಹೋಗು ನಿನ್ನ ದಾರಿಗೆ. ಮೆಹರ್‌ನ ಮೊತ್ತ ಇಟ್ಟು […]

ಪ್ರಾರ್‍ಥನೆ

ನಾನು ಯಾವ ನೆಲದಲ್ಲಾದರೂ ನಡೆದಾಡಲಿ ನನ್ನ ಮಾತೃಭೂಮಿಯ ಮಣ್ಣವಾಸನೆಯೇ ಸೂಸಿಬರಲಿ ನಾನು ಕಾಶ್ಮೀರ ಕಣಿವೆಯ ಸುವಾಸನೆ ಮೂಸಿರುವೆನು. ದ್ವೇಷದ ವಿಷಗಾಳಿ ವರ್‍ಜವಾಗಿದೆ ನನಗೆ ಸ್ಫೋಟಕ ಮದ್ದಿನ ಘಮಟು […]

ಈ ಗುಬ್ಬಿಯೂ ಹಾಗೇ

ಈ ಗುಬ್ಬಿಯೂ ಹಾಗೇ ನನ್ನ ಮಗಳಂತೆಯೇ ಎಷ್ಟೊಂದು ಹೋಲುತ್ತದೆ? ಟೊಂಗೆಗಳ ಕಂಡರೆ ಸಾಕು ಜೋಕಾಲಿ ಹಾಕುತ್ತಾಳೆ ಈ ಗುಬ್ಬಿಯೂ ಹಾಗೇ ನನ್ನ ಮಗಳಂತೆಯೇ ಎಷ್ಟೊಂದು ಹೋಲುತ್ತದೆ. ಜಿಟಿ […]