ಕವಿತಾವತಾರ

‘ಎಲವೊ ದುರುಳ ನಿಷಾದ, ಕೊಂಚೆಯೆಣೆಯಿಂದಂ ಕಾಮಮೋಹಿತನಿನೆಯನನ್ನೆಸೆದೆ ಎಂದು, ನೀಂ ಪ್ರತಿಷ್ಠೆಯನೊಂದದಿರು ಧರೆಯೊಳೆಂದುಂ!೧ ಕನಿಕರಂ ಕನಲಲಿಂತಾದಿಕವಿ ಎಂದಂ.   ೪ ಗದ್ಗದಿಸಿತೊಡನೆ ವಾಣಿಯ ವೀಣೆ, ಮುಂತೇ ಲಿತು ಬಾಷ್ಪಗಾನ! ವಲಮದರ ಮಧುರಿಮೆಯಿಂ ನಿಮ್ಮುಸಿರ ಸೌಸವಂ! ರಜನಿಯಿಮೆಯಿಮೆಯಿಂ೨ ಮಧುದಿನಾಂಶದ...

ಹಳೆಯ ನಾಣ್ಯ

ಇನ್ನುಮೇತಕೆ ನಿನ್ನ ಮುಸುಕು ಮೌನವ ತೊರೆಯೆ? ಮುಚ್ಚಾಲೆಯಾಡಿ ದೊಲ್ಲಯಿಸುವೇಕೆನ್ನ? ತಳಮಳಿಪುದೆನ್ನ ಮನ ನಿನ್ನ ತೆರೆಯಂ ಹರಿಯೆ- ನಿಲುಕದಲೆ ತಡೆವೆ; ಬುಲ್ಲಯಿಸುವೇಕೆನ್ನ? ೪ ಸೊಲ್ಲಿಲ್ಲದುಲಿಗಳಿಂದುಲಿವ ನಿನ್ನಯ ಸೊಲ್ಲ ಸೆಲೆಯಿಂದ ಹಾಡುಲಿಯ ಬಲ್ಲುದೇನೆನ್ನ? - ಸರಿಗೆ ಕುಕಿಲಿನ...

ವಿಶ್ವಾಂಜಲಿ

ರಾಗ ದೇಶ ಜಿಲ್ಲಾ-ತ್ರಿತಾಲ ಏನೆದ್ಭುತ ಮಹಿಮೆಯೊ ನಿನ್ನ ಪ್ರಭೋ ಪೊಗಳಲಳವೆ ಎನ್ನ || ಪಲ್ಲ || ತಡೆಯರಿಯದೆ ಹರಿಯುವ ಗಗನತಲಂ ನಿನ್ನೊಡೆತನದ ಪತಾಳೆಯೊಲು ವಲಂ ನೆಳಲಿಸಿ ಹೊದಿಪುದು ವಸುಮತಿಯಗಲಂ ನಿನ್ನ ಪ್ರಭಾವವನು || ೧...

ಕವಿತೆ

ಕವಿತೆ ಮತಿಜಲ ನಲಿನ, ವ್ಯಸನ ವನಧಿಯ ಪುಲಿನ, ಕವಿತೆ ಗಾನದ ಸುಗ್ಗಿ, ಸೊಬಗ ತೆನೆಸೂಡಿ, ಕವಿತೆ ನವರಸ ರಂಗ ವದು ತ್ರಿವೇಣಿಯ ಸಂಗ ಮಿದೊ ನೆನಸು ಕನಸು ಮನಸಿನ ತ್ರಿತಯಮೊಡಗೂಡಿ ೬ ಧ್ಯಾನ ಗನಿಗಳ...

ತುರ್‍ಕಿಯ ಪರವಾಗಿ ದೇವರೊಡನೆ ಪ್ರಾರ್ಥನೆ

ಭೂಪಾಳಿ-ಝಂಪೆ ನೋಡು ನೋಡೆಲೊ ದೇವ! ಗತಿವಿಹೀನರ ಕಾವ, ನೋಡು ನಿನ್ನಯ ರಾಜ್ಯದೊಳರಾಜಕತೆಯ! ನೋಡು ಪಡುವಣ ದಿಕ್ಕ, ನೋಡು ಇತಲಿಯ ಸೊಕ್ಕ, ನೋಡು ದೀನ ತುರುಷ್ಕ ತ್ರಿಪಲಿಯರ ಕತೆಯ! ||೧|| ಬಡ ತ್ರಿಪಲಿಯನ್ನಿತಲಿ ಪಿಡಿದಿರುವುದೆನ್ನುತಲಿ ಮೊರೆಯಿಡುವ...

ಹೊಲೆಯನು ಯಾರು?

ಹೊಲೆಯನಾರೂರ ಹೊರಗಿರುವವನೆ ಗೆಳೆಯ? ಜಾತಿಯಿಂದಲ್ಲ ಗುಣದಿಂದಹನು ಹೊಲೆಯ ||ಪಲ್ಲ|| ಇಬ್ಬರಾಡುವ ಗುಟ್ಟು ಕದ್ದು ಕೇಳುವ ಹೊಲೆಯ, ಗಂಡಹೆಂಡಿರ ಬೇರೆ ಮಾಡುವವ ಹೊಲೆಯ| ಚಾಡಿ ಮಾತಾಡಿ ಭೇದವ ಕಲ್ಪಿಪನೆ ಹೊಲೆಯ, ಒಣಹರಟೆಯಿಂ ಕಾಲ ಕಳೆಯುನವ ಹೊಲೆಯ...

ವಿದಾಯ

(೧೯೧೧ನೆಯ ಏಪ್ರಿಲ್‌ ತಿಂಗಳ `Modern Review' ಮಾಸಪತ್ರಿಕೆಯಲ್ಲಿ ಪ್ರಕಟವಾದ ಶ್ರೀ ರವೀಂದ್ರನಾಥ ರಾಕೂರರ "Farewell"ಎಂಬ ಕವಿತೆಯನ್ನು ಅನುವರ್ತಿಸಿ ಬರೆದುದು) ಪೋಗಗೊಡೆನ್ನನು ತಾಯೆ ಬಿಡು, ಮುದ್ದಿನ ತಾಯೇ ಪೋಗಗೊಡು! ಮಬ್ಬ ಮರೆಯ ಮುಂಜಾನೆಯಲಿ ಬರಿತೋಳ್ಗಳ ನಿಡುಚಾಚುತಲಿ,...

ಹಿಂದುಸ್ತಾನ್‌ ಹಮಾರಾ

(ಲಾಹೋರಿನ ಡಾ ಶೇಖ್‌ ಮಹಮ್ಮದ್‌ ಇಖ್ಬಾಲರ ಉರ್ದು ಘಜಲನ್ನು ಅವಲಂಬಿಸಿ ಬರೆದುದು) ನಮ್ಮವಳೀ ಭಾರತ ಜನನಿ ||ಧ್ರುವ|| ಭೂಮಂಡಲದಿ ರಮಣೀಯಂ ಈ ಭಾರತವೆಮ್ಮಯ ನಿಲಯಂ, ನಾವೀಕೆಯ ಮರಿದುಂಬಿಗಳು, ಈಕೆಯೆಮ್ಮ ಜೀವನನಳಿನಿ ||೧|| ನಾವೆತ್ತಲಲೆದರು ಮುದದಿ...

ಚಿಟ್ಟೆಗೆ

(Wordsworth ಎಂಬ ಅಂಗ್ಲ ಕವಿಯ ಕವಿತೆಯನ್ನು ಅವಲಂಬಿಸಿ ಬರೆದುದು) ನಿಂದಿರು ಕುಲುಂಕದಿರೆರಂಕೆಗಳ ನಿನ್ನ, ಮುಂದು ಬಳಿಸಂದು ಕುಣಿ ಕಣ್ಣೆದುರೊಳೆನ್ನ, ನಿನ್ನ ನಿರುಕಿಸಲೊರೆವೆನೊರೆವ ಕಳೆನುಡಿಯ ನನ್ನೆಳೆಯ ಬಣ್ಣಿಸುವ ಚಿಣ್ಣ ಕವಿಯೊಡೆಯ! ೪ ಹೊನ್ನಿನಂಬಿಯ ಗಾಡಿಯಿಂದ ತೇಲಾಡು,...

ಗಿಳಿವಿಂಡು

ನನ್ನವೀ ನುಡಿಗಳಿರ! ಕಾಲದಲೆಗಳಲಿ ನಿಮ್ಮನುರಿಹಣತೆಯಂತಿದೊ ತೇಲಬಿಡುವೆ, ಅನುಗೊಳಲಿ ಜಗದುಸಿರು ನಿಮಗೆದುರುಗೊಳಲಿ, ಆಳ್ವಿನಂ ಬಾಳ್ವುದೆಂಬುದೆ ನಿಮ್ಮ ಗೊಡವೆ. ತನ್ನ ಮರಿಗಳೊಳೊಮ್ಮೆ ಕಟ್ಟೆರಕೆ ಮೂಡಿ ದನಿತುಮಂ ಪೊರಮಡಿಸಿದುಲಿನಕ್ಕಿಯಮ್ಮ ಸಂಜೆಯೊಳವಂ ಗೂಡುಗೊಳಿಪಂತೆ ಕೂಡಿ ಸಿಡುವೆನಾನೀ ಹೊತ್ತಗೆಯೊಳೆನ್ನ ನಿಮ್ಮ. ನನ್ನವೆಂದೆನೆ...