Home / Ananthanarayana S

Browsing Tag: Ananthanarayana S

ಕೈಯ ಕೈಯಲಿ ಇಟ್ಟು ಕಣ್ಣ ಕಣ್ಣಲಿ ನಟ್ಟು ಮುಂದಕ್ಕೆ ಸಾಗೋಣ, ನೋಡೋಣ ಬಾ; ನಾನು ನೀನೂ ಕೂಡಿ ವಿಧಿಯೊಡನೆ ಹೆಣಗಾಡಿ ಜೀವನದ ರೂಪನ್ನೆ ಬದಲಿಸುವ, ಬಾ! ನದಿಯ ತಣ್ದುಟಿ ಮೇಲೆ ಶಶಿಯ ಒಲವಿನ ಓಲೆ ಕೊರೆಸಿ ಕುಣಿವುದನು ಓದೋಣ ಬಾ; ಬಾಳಿನಂಗಳದಲ್ಲಿ ಸಾವ ಪಂಜ...

ಹಳೆಯ ವರ್ಷವಿಂದಳಿಯಿತು, ಗೆಳತಿ, ಅದರೊಡಲಿನ ಸುಖದುಃಖದ ಪ್ರಣತಿ ಆರಿತು, ಹೊಸ ವರ್ಷಕೆ ಆರತಿ ನೀಡಿ, ಸ್ವಾಗತಿಪ, ಬಾ, ಗೆಳತಿ. ಹೊಸ ವರ್ಷವು ಬಂದಿದೆ, ಗೆಳತಿ! ಯುಗ ಕಳೆಯಿತು, ಬಾಳೆದೆಯೊಳ ಪ್ರೀತಿ ಆಸೆ ಅಡಗಿದಭಿಲಾಷೆಯನೆಲ್ಲ ಮಣ್ಣು ಮಾಡುವುದೆ ಹೊಸದ...

ನೀವು ಹೆಂಗಸರಂತು ಎಳೆಯ ಮಕ್ಕಳಹಾಗೆ ಹಿಡಿದ ಹಟವನು ಬಿಡದೆ, ಬೇಡಿದುದು ದೊರೆವನಕ ಕಾಡುವುದು ಮುನಿಯುವುದು, ಬೇಡಿದುದು ದೊರಕಿದೊಡೆ ಹಿಗ್ಗಿಗೆಣೆಯೇ ಇಲ್ಲ. ಕುಣಿ ಕುಣಿದು ಆಡುತ್ತ ನಿಮ್ಮನೇ ಮೈಮರೆತು ನವಿಲಂತೆ ನಲಿಯುವಿರಿ. ನಿಮ್ಮದಾದುದ ಮತ್ತೆ, ಎಲ್...

ಹೃದಯ ಒಲವಿಗೆ ಅಲ್ಲದಿನ್ನೇತಕೆ? ಬಾನಿನಲಿ ತಾರೆಗಳ ಮಾಲೆಯೇಕೆ? ಆ ಮೂರು ಮೋಡಗಳ ನಡುವೆ ಚೆಂಡಿನಹಾಗೆ ಕೇಸರಿಯ ಕಿರಣಗಳ ಮಂಜಮೇಲೆ ಹರಹುತ್ತ ಏರುತಿಹ ಚಂದಿರನ ಬೆಳ್ಳಿಯಲಿ ನೀ ಬಾರದಿರೆ ನನ್ನ ಹಾಡಿದೇಕೆ? ಓ ನನ್ನ ಉಷೆ, ನಿನ್ನ ‘ಓ’ ದನಿಯೆ ಕೇಳದಿದೆ, ಎ...

ಓ ತಾಯಿ! ಭೂತಾಯಿ! ನೀ ಬರಿಯ ನೆರಳಂತೆ, ನಾವೆಲ್ಲ ಅವ್ಯಕ್ತ ಛಾಯೆಯಂತೆ. ಸತ್ಯ ಸತ್ವವು ಬೇರೆ ಜಗದೊಳಗೆ ಇಹುದಂತೆ, ಅದಕಾಗಿ ಅಳಿದವರೆ ಉಳಿದರಂತೆ! ಈ ಮಾತ ಮಾಯೆಯಲಿ ಸಿಕ್ಕಿ ಸೋತರ ಕಂಡು, ನಿನ್ನೆದೆಯ ಉರಿಬೆಂಕಿ ನಂದಿತೇನು? ನಾಡೆಲ್ಲ ಇಂತಾಗಿ ನಿನ್ನನ...

ಮಲಗು ಮಲಗೆನ್ನೆದೆಯ ಮಂಟಪದ ಮೂರ್ತಿ ಮುಗಿಲಿನಲಿ ಮೋಡಗಳು ಕೂಡುತಿವೆ ಭರದಿ! ಜಗದ ಕೊನೆಯನು ತಂದ ದೂತರಂತೆ ಪ್ರಳಯ ರುದ್ರನ ಅಂಶ ತಾಳ್ದರಂತೆ ಗುಡುಗು ಸಿಡಿಲುಗಳೆರಗಿ ಜಗವ ನಡುಗಿಸುತಿಹವು. ನೀನೇಳಬೇಡ, ಮಗು, ಉಷೆಯೆ ಮಲಗಿನ್ನು! ನಾಳೆಯಂತೊ ಏನೊ ಎಂಬುದ...

ನಾಲ್ಕು ದಿನಗಳ ಕಾಲ ಬೇರೆಯೂರಿಗೆ ಸಾಗಿ ನಿನ್ನ ಕನಸನು ಮರೆತು ನನ್ನಂತೆ ನಾನಿದ್ದು ಮತ್ತೆ ಹಿಂದಿರುಗುವೆನು, ಅಗಲಿಕೆಯ ದಿನಗಳಲ್ಲಿ ಇನಿತಾದರೂ ನಿನ್ನ ನೆನಪುಗಳು ಭುಗಿಲೆದ್ದು ಮನವ ಕೆರಳಿಸದಿರಲಿ, ವಿರಹ ಮಾಡಲಿ ನಿದ್ದೆ! ಮೌನ ಮಸಣದಲೆನ್ನ ಮನದಳಲ ಮಣ...

ಸುಖದುಃಖಗಳ ನಡುವೆ ಸಿಕ್ಕಿ ಸಂತಾಪದಲಿ ಕಾವಿನಲಿ ಬೇಯುತಿದೆ ನನ್ನ ಬಾಳು; ಇದನೆಲ್ಲ ಮರೆಸುತ್ತ ಒಲವ ಬೆಳಕಿನಲಿನ್ನ ಹೃದಯವನು ಅರಳಿಸುತ ಬೆಳಗು ನನ್ನ ಉಷೆ! ಬಾಳ ಭೀಕರ ಇರುಳ ಕಾತರದಿ ಕೂಗಿದೆನು ಹೃದಯ ಬರಿದಾಗಿಹುದು ಮಂಜು ನಂಜು ಜೀವ ಹಿಂಡುತಲಿಹುವು! ...

ತೋಟದಲಿ ಬಳುಕುತಿಹ ಬಳ್ಳಿಯೊಳಗರಳುತಿಹ ಎಳೆಮೊಗ್ಗುಗಳಿಂದ ಚಿವುಟಿ ಕೈಯಲಿ ಹಿಡಿದು ಹಸುಗೂಸ ಹಾಲ್ಕೆನ್ನೆಯಂತೆ ಮಿದುವಾಗಿರುವ ದನಗಳನು ಕೆನ್ನೆಗಳಿಗೊತ್ತಿಕೊಂಡೆ ! ಗಳಿಗೆಗಳು ಉರುಳಿದುವು. ಕಾವಿನಲಿ ಎಳೆಮೊಗ್ಗು ಬಸವಳಿದು ಬಾಡುತಲಿ ನಿರ್ಜೀವ ತರಗಾಯ್ತ...

ಆ ಸಮುದ್ರದಾಚೆಯಲ್ಲಿ ಮುಗಿಲು ನೆಲವ ಕೂಡುವಲ್ಲಿ ಹಿರಿಯಲೆಗಳ ಮಡಿಲಿನಲ್ಲಿ ದೀಪವೊಂದಿದೆ ನಿನ್ನ – ಜೀವವಲ್ಲಿದೆ ! ನೆಲವಾಗಸ ಸೇರುವಂತೆ ನಮ್ಮಿಬ್ಬರ ಒಲವಿನ ಜತೆ ಆ ಕೊನೆಯಲ್ಲಿ ಒಂದೆ ಅಂತೆ ನನ್ನ ಕನಸದು ಬರಿಯ – ಹೊನ್ನ ಕನಸದು ಅಂತು ಅ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...