ಸುಖದುಃಖಗಳ ನಡುವೆ ಸಿಕ್ಕಿ ಸಂತಾಪದಲಿ
ಕಾವಿನಲಿ ಬೇಯುತಿದೆ ನನ್ನ ಬಾಳು;
ಇದನೆಲ್ಲ ಮರೆಸುತ್ತ ಒಲವ ಬೆಳಕಿನಲಿನ್ನ
ಹೃದಯವನು ಅರಳಿಸುತ ಬೆಳಗು ನನ್ನ ಉಷೆ!
ಬಾಳ ಭೀಕರ ಇರುಳ ಕಾತರದಿ ಕೂಗಿದೆನು
ಹೃದಯ ಬರಿದಾಗಿಹುದು ಮಂಜು ನಂಜು
ಜೀವ ಹಿಂಡುತಲಿಹುವು! ಹೊರಗೆಲ್ಲ ಹಗಲಾಗಿ
ಗವಿಯೊಳಗೆ ಇರುಳಂತೆ! ಅಂತೆ ನನ್ನೊಲವು!
ಚಂಚಲತೆ ಚಪಲತೆಯ ಹೊಂಚಿ ಹೊತ್ತಿಸಿ ಹಿಡಿದು
ತಾರೆಯೊಲು ಬೆಳಗುವೊಲು ಕವಿಯ ಕಾವ್ಯ,
ನನ್ನೊಲವ ನಡುನೀರಿನೊಳ ಮುತ್ತ ಹೊರಗೆತ್ತಿ
ಅದರೊಳಗ ಕಿರು ಪ್ರಣತಿ ಬೆಳಗು ನನ್ನ ಉಷೆ!
*****
Latest posts by ಅನಂತನಾರಾಯಣ ಎಸ್ (see all)
- ಕನಸೊಂದ ಕಂಡೆ - May 13, 2019
- ಸುಂದರ ಉಷಾ ಸ್ವಪ್ನ - May 6, 2019
- ಜೈಲಿನ್ಕಂಡಿ - April 29, 2019