ಎದ್ದೇಳಿ ಎದ್ದೇಳಿ ಎದ್ದೇಳಿ ಎಲ್ಲ
ಕನ್ನಡದ ತನವಿರುವ ಕನ್ನಡಿಗರೆಲ್ಲ
ಬೆಳಗಾವಿ ನಮ್ಮಿಂದ ಸರಿಯುವ ಮುನ್ನ
ಬೆಂಗ್ಳೂರು ದೆಹಲಿಯ ವಶವಾಗೊ ಮುನ್ನ
ಕನ್ನಡವೆ ಮರೆಯಾಗಿ ಹೋಗುವ ಮುನ್ನ
ಎದ್ದೇಳಿ ಕನ್ನಡಿಗರೇ ತೆರೆದು ಕಣ್ಣ
ಕಾವೇರಿ ಕರುನಾಡ ತೊರೆಯುವ ಮುನ್ನ
ಅನ್ಯಾಯ ಸಂಪೂರ್‍ಣ ಆಗುವ ಮುನ್ನ
ಶಕ್ತಿಹೀನರು ನಾವು ಎಂದೆನಿಸೊ ಮುನ್ನ
ಎದ್ದೇಳಿ ಅಳಿಸುತ್ತ ನಮ್ಮೊಳಗಿನ ಖಿನ್ನ
ಕರುನಾಡು ತಾಯ್ನೆಲವೆ ನಮ್ಮುಳಿವು ಎಂದು…
ನುಡಿವಂತ ತಾಯ್ನುಡಿಯೆ ನಮ್ಮುಸಿರು ಎಂದು…
ಜಲಧಾರೆ ಕಾವೇರಿ ನಮ್ಮ ಸಿರಿ ಎಂದು…
ಎಚ್ಚೆತ್ತು ಎದ್ದೇಳಿ ಕನ್ನಡ ಉಳಿಸೇಳಿ
ಅಭಿಮಾನದ ಕಿಚ್ಚ ಹಚ್ಚುತ್ತ ಏಳಿ
*****