ಅಮೃತಕೆ – ಮಂಥನ

ಹೆಪ್ಪಿಟ್ಟ ಕೆನೆ ಮೊಸರು ಹುಳಿಯಾಗುವ ಮುನ್ನ ನಿರಂತರ ಕಡೆಯಬೇಕು! ಉಕ್ಕಲಿ ನೊರೆನೊರೆಯ ಹಾಲಾಹಲ! ಏಕೆ ಕೋಲಾಹಲ? ಮೇಲೆಲ್ಲವೂ ಕಾರ್ಕೋಟಕ ವಿಷವೇ ಆಳಕ್ಕಿಳಿದಷ್ಟೂ ಅಮರತ್ವದ ಅಮೃತವೇ! ಎಷ್ಟು ಮಹಾ ಉಕ್ಕೀತು ವಿಷ? ಆಪೋಶಿಸಿದರೊಂದೇ ಗುಟುಕು ಕಣ್ತೆರೆಯಲು...

ಎಚ್ಚರ

ಯಾರೋ ಒದ್ದು ಚೆಲ್ಲಾಪಿಲ್ಲಿ ಹರಡಿದ ತನ್ನ ಕನಸುಗಳನೆಲ್ಲಾ ಬಾಚಿ ಗುಡ್ಡೆ ಹಾಕಿ ಗಂಟು ಕಟ್ಟಿ ಬೆನ್ನಿಗೇರಿಸಿ ಹೊರಟುಬಿಡುತ್ತಾಳೆ ಎಲ್ಲಾ ಧಿಕ್ಕರಿಸಿ! ಕಾಡು, ಕಂದರ, ಪರ್ವತ ಸಮುದ್ರ, ನದೀ ತಟ ಬಿಚ್ಚಿದ ಆಕಾಶ ಮುಚ್ಚಿದ ಭೂತಟ...

ಗೋಡೆಗಳು

ಅವರಿವರ ಕೈಜಾರಿ ಇಟ್ಟಿಗೆ ಬಿದ್ದಲ್ಲೆಲ್ಲಾ ಧುತ್ತನೆ ಎದ್ದು ನಿಂತ ನನಗೆ ನಾನೇ ನಿರ್ಮಿಸಿಕೊಂಡ ಎತ್ತರೆತ್ತರ ಗೋಡೆಗಳು ನಿಜ ಮುಖ ತೋರದ ಮುಸುಗುಗಳು! ಗೋಡೆ ಮೇಲೊಂದು ಗೋಡೆ ಕಿರಿಗೋಡೆ, ಮರಿಗೋಡೆ ಬಾನಿನೆತ್ತರಕ್ಕೆ ಏರಿನಿಂತ ಹಿರಿಗೋಡೆಗಳು! ನನಗೆ...

ಎಕ್ಕಡಗಳು

ಎಷ್ಟೊಂದು ವರ್ಷಗಳಿಂದ ನನ್ನಲ್ಲಿಯೇ ಉಳಿದುಬಿಟ್ಟ ನನ್ನವಲ್ಲದ ಹಳೆಯ ಎಕ್ಕಡಗಳೂ! ದಂತದ ಕುಸುರಿ ಮಾಡಿದ ಗಮಗುಡುವ ಗಂಧದ ಪೆಟ್ಟಿಗೆಯಲ್ಲೇ ಅವುಗಳ ವಾಸ ಎಲ್ಲಿ ಹೋದರೂ ಎಲ್ಲಿ ಬಂದರೂ ಹಳೆಯ ಎಕ್ಕಡಗಳ ಗಂಧದ ಪೆಟ್ಟಿಗೆಯ ಬೆನ್ನಿನ ಮೇಲೆಯೇ...

ಬಂದು ಬಿಡಬಹುದೇ ಹೀಗೆ?

ಕಪ್ಪಡರಿದ ಕಂದೀಲು ನಾನಿನ್ನೂ ಉಜ್ಜಿ ಹೊಳಪೇರಿಸೇ ಇಲ್ಲ! ದೇವರ ಮುಂದಲ ನಂದಾದೀಪ ಯಾವಾಗಲೋ ಆರಿ ಬತ್ತಿ ಸುಟ್ಟು ಕರಕಾಗಿತ್ತಲ್ಲ! ಹೀಗೆ ಇದ್ದಕ್ಕಿದ್ದಂತೆ ಮೋಡ ಮುಸುಕಿ ಕತ್ತಲಾವರಿಸುತ್ತದೆಂದು ಯಾರಿಗೆ ಗೊತ್ತಿತ್ತು? ಗುಟ್ಟಾಗಿ ಬಸಿರಾದ ಮೋಡ ಯಾವ...

ಕನ್ನಡಿಗಳು ಬೇಕು

ಬದುಕಿನುದ್ದಕ್ಕೂ ಹೆಜ್ಜೆ ಹೆಜ್ಜೆಗೂ ಕನ್ನಡಿಗಳು ಬೇಕು! ಎಲ್ಲ ಎಲ್ಲವುಗಳ ಪ್ರತಿಬಿಂಬಿಸಲು ಎತ್ತರಗಳ ಅಳೆಯಲು ಬದಲಾದ ಕನಸುಗಳ ಗುರುತಿಸಲು ಕೈಗೆಟುಕುವುದೇ ಮುಗಿಲು? ತಿಳಿಯಲು ದಾರಿಗೆ ಹಿಡಿದಿದೆಯೇ ಗೆದ್ದಲು? ಇಲ್ಲವೇ ಗುರಿಯೆಂಬ ಪೂರ್ಣವಿರಾಮಕ್ಕೆ ಮಗ್ಗುಲು? ಸೋಲುಗಳ ಮೆಟ್ಟಿ...

ಸೂಜಿ ಹುಡುಕುವ ಅಜ್ಜಿ

ಕಳೆದು ಹೋಗಿಹ ಸಣ್ಣ ಕಣ್ಣಿನ ಸೂಜಿ ಹುಡುಕುತ್ತಿದ್ದಾಳೆ ಅರೆಗುರುಡಿನ ಅಜ್ಜಿ ಮೂಲೆ ಮೂಲೆ, ಸಂದಿ ಗೊಂದಿ ತಡವುತ್ತಾ, ಎಡವುತ್ತಾ ಅಸಂಬದ್ಧ ಗೊಣಗುತ್ತಾ ಅಪ್ರಚಲಿತ ಜಾನಪದ ಗೀತೆ ಗುನುಗುತ್ತಾ ಹರಿದ ಸೀರೆ ತುಂಡು ತೇಪೆಗೊಂದಿಷ್ಟು ಅರಿವೆ...

ಪ್ರಾಚೀನ

ಮಣ್ಣಿನ ಮಡಿಕೆ ಕುಡಿಕೆ ಕಲಾಯಿ ಇಲ್ಲದೇ ಅಟ್ಟಕ್ಕೇರಿದ ಹಿತ್ತಾಳೆ ತಾಮ್ರದ ಪಾತ್ರೆ ಮುತ್ತಜ್ಜ ಅಜ್ಜ ಅಪ್ಪ ಮತ್ತಿನ್ಯಾರೋ ಮಲಗೆದ್ದ ತೊಟ್ಟಿಲು ಉಯ್ಯಾಲೆ ಭೂತಾಕಾರದ ಮಂಚ ಮೂಲೆಯಲಿ ತೂಗುವ ಕಂದೀಲು, ಮುಖ ಕಾಣದ ಕನ್ನಡಿ ಪ್ರಾಚ್ಯ...

ನೀ ಬರಿಯ ನೀರಲ್ಲ!

ಹೇ ತಾಯಿ, ನೀ ಬರಿಯ ನೀರಲ್ಲ ನೀರೆಂಬ ಮಾಯೆ! ಹನಿಹನಿಯ ಬೊಗಸೆ ಬೊಗಸೆ ಹೀರಿದರೂ ಹಿಂಗಿತೇ ದಾಹ? ಮತ್ತೆ ಮತ್ತೆ ಬೇಕೆನಿಸುವ ತೀರದಾ ಮೋಹ! ಬರಿಯ ನೀರೆಂದು ಬೋಗುಣಿಯಲಿ ತುಂಬಿಸಿಡುವಾಗ ಥಟ್ಟನೆ ಘನೀಬವಿಸಿ ಮಂಜುಗಡ್ಡಯಾಗಿಬಿಡುವ...

ಬೋನ್ಸಾಯ್

ತಾಯಿ ನೆಲವ ಒಮ್ಮೆಯೂ ಸೋಕದೆ ಬಣ್ಣ ಬಣ್ಣದ ಬೋಗುಣಿಗಳಲ್ಲಿ ಬೆಳೆದು ಅಲ್ಲಲ್ಲ, ಷೋಕಿಗೆ ಶಿಸ್ತಿನಿಂದ ಬೆಳೆಸಲ್ಪಟ್ಟು ತಾಯಿಬೇರೂ ಕತ್ತರಿಸಿಕೊಂಡು ಅತ್ತಿತ್ತ ಎಲ್ಲೆಂದರಲ್ಲಿ ಕೊಂಬೆ ಚಾಚದೇ ಜೈಲಿನ ಖೈದಿಯಂತೆ ಇದ್ದೂ ತಿನ್ನಲಾಗದ ರೋಗಿಷ್ಟ ಶ್ರೀಮಂತನಂತೆ ಒಂದೇ...
cheap jordans|wholesale air max|wholesale jordans|wholesale jewelry|wholesale jerseys