
ಮಳೆ ಸುರಿದು ಎಲೆಗಳಿಂದ ಹನಿಹನಿ ನಿನ್ನ ನೆನಪಿನ ಬಾಷ್ಪ. ಈ ತಿಳಿ ಸಂಜೆ ಆಲಿಸುತ್ತಿದೆ ಹಕ್ಕಿ ಇಳಿ ಹೊತ್ತಿನ ಹಾಡು. ಹೂವರಳಿ ಸುವಾಸನೆಯ ಗಾಳಿ ಬೀಸು. ದೇವರ ಮನೆಯಲ್ಲಿ ನಂದಾದೀಪದ ಬೆಳಕು. ಹನಿಯುವ ಆಳ ನಿರಾಳದ ಸಿಂಚನಕೆ ಅವನ ಮೃದು ಸ್ಪರ್ಶ ಸೋಕಿ ಒದ...
ಇಳಿ ಬಿಸಿಲಿನ ಎಲೆಯ ಮೇಲೆ ಕಿರಣಗಳು ಮೂಡಿ ನಂದಾದೀಪ ಅರಳಿದೆ. ಕಂಬ ಬಳಸಿದ ಬಳ್ಳಿಯ ತುಂಬ ಬಿಳಿ ಮೊಗ್ಗು ಬಿರಿದು, ಶಬ್ದಗಳು ಹಸನಾದ ಬೀದಿಯ ತುಂಬ ಹರಡಿದೆ. ಅಲ್ಲಿ ಕವಿಯ ಪರೀಕ್ಷೆ ನಡೆದಿದೆ. ಹೊಲದಲ್ಲಿ ಹಸಿ ಜೋಳದ ತೆನೆಯಲಿ ಹಾಲು ಚಿಮ್ಮುತ್ತಿದೆ. ಮ...
ಈ ಮೌನ ಸಂಜೆ ಬೀದಿಯಲ್ಲಿ ಹೊರಟಿವೆ ಇರುವೆಗಳ ಮೆರವಣಿಗೆ, ಮರದ ಕೆಳಗೆ, ಒಳಗೆ ಪೋರ ಚೆಂಡು ಹುಡುಕುತ್ತಿದ್ದಾನೆ, ಮತ್ತೆ ಚಿಟ್ಟೆ ಹರಿದಾಡದೇ ಕುಳಿತಿದೆ ಹೂವಿನ ಮೇಲೆ. ಖಾಲಿ ಹಾಳಿಯಲಿ ಅರಳಿವೆ ಕವಿಯ ನೀಲಿ ಅಕ್ಷರಗಳು, ಮುಗಿಲ ತುಂಬ ಬೆಳ್ಳಕ್ಕಿ ಸಾಲು ...
ಈ ಸಂಜೆಯ ಕೌನೆರಳು, ಬಾಗಿಲ ಬಳಿ ಅವನ ಕಾಲ ಸಪ್ಪಳ, ದೇವರ ಮುಂದಿನ ನೀಲಾಂಜನದಲಿ ಬೆಳಕು ಮಂದವಾಗಿ ಹಾಸಿ, ಯಾರು ಶುರುವಿಟ್ಟುಕೊಂಡಿದ್ದಾರೆ ಭಜನೆಯ ಧ್ಯಾನ, ಮಳೆ ಇಲ್ಲದೇ ಬಿರಿದ ನೆಲದ ಮಣ್ಣಿನ ವಾಸನೆ ಹರಡಿ, ಅಂವ ಬಂದ ಹೊತ್ತು, ಅವಳ ಕಣ್ಣುಗಳಲಿ ನೀರ ...
ಮನೆ ಸಣ್ಣದಾಗಿ ಅಕ್ಕ ಅಣ್ಣ ತಮ್ಮ ತಂಗಿ, ಬಳಗ ದೊಡ್ಡದಾಗಿ ಸರಳವಾದ ಬಾಲ್ಯ, ಯಾವ ಅಂಜಿಕೆಯೂ ಸುಳಿಯದ ಯೌವನ, ಅಮ್ಮ ಅಪ್ಪನ ಬೆಚ್ಚನೆಯ ಭರವಸೆಯ ನುಡಿ, ಕೈ ಹಿಡಿದು ನಡೆದ ದಾರಿ ತುಂಬ ಪಾರಿಜಾತಗಳು. ಗಿಡವಾಗಿದ್ದು ಮರವಾಗಲು ತಡವಾಗಲಿಲ್ಲ. ಬಯಲ ಗಾಳಿ ಹ...
ಒಂದು ದೀರ್ಘ ಮಳೆಗಾಲದ ಸಂಜೆ ಹೆದ್ದಾರಿ ಹಾವಿನಂತೆ ಫಳಫಳ ಹೊಳೆಯುತ್ತಲಿದೆ. ಒಂದು ಖಚಿತ ಧ್ವನಿಯಲ್ಲಿ ಕತ್ತಲೆ ನನ್ನ ಕಿಟಕಿಯ ಹಾಯ್ದು ಬಂದಿದೆ. ಮೈ ಕೊರೆಯುವ ಚಳಿಯ ಮಬ್ಬಿನಲಿ ಒಲೆಯು ನೀಲಿ ಜ್ವಾಲೆಯ ಉಗುಳುತ್ತಿದೆ. ಮತ್ತು ಚಹಾ ಕುದಿಯುತ್ತಿದೆ. ಆಗ...
ಎಲ್ಲಾ ಸ್ವಚ್ಛಂದದ ಸೆಳವು ಒಳಗೊಳಗೆ ಇಳಿದ ತಂಗಾಳಿ, ಮೈ ಹಗುರಾಗುವ ನಿನ್ನ ಸ್ಪರ್ಶ, ಹರವು ದಾಟಿದ ಒಂದು ನದಿ ಬಯಲು. ಘಮ ಘಮಿಸಿದ ಮುಂಜಾನೆ, ಕಿರಣಗಳ ಸೋಕಿ ಉಮೇದಗೊಂಡ ಭಾವಗಳು ಹೊಸ ಹಾಡು ಹಕ್ಕಿ ಕೊರಳು, ಒಡಲ ತುಂಬ ಹಸಿರು ಚಿಮ್ಮುವ ಹವಣಿಕೆ. ನಡೆಯು...














