ಅಮ್ಮ ಹೇಳಿದ್ದು

ರಾತ್ರಿ ಸೂರ್ಯ ಎಲ್ಲಿಗೆ ಹೋಗ್ತಾನೆ? ಅಪ್ಪ ಎಲ್ಲಿಗೆ ಹೋತ್ತಾನೆ? ಅದೆಲ್ಲಾ ಕೇಳ್ಬೇಡಾ ಸುಮ್ಮನೆ ಕಣ್ಮುಚ್ಚಿ ಮಲಕ್ಕೋ ಪುಟ್ಟು ಅದೆಲ್ಲಾ ನಿನಗೆ ಅರ್ಥವಾಗೋದಿಲ್ಲ ನೀನಿನ್ನು ಸಣ್ಣವನು. *****

ದಾರಿ ಬಿಡಿರೋ

ದಾರಿ ಬಿಡಿರೋ ಇವನಿಗೆ, ಉಸಿರು ಕಟ್ಟಬೇಡಿ, ದಾರಿ ಕಟ್ಟಬೇಡಿ ಹುಲಿಕರಡಿಗಳಂತೆ ಹೆದರಿಸಬೇಡಿ ಮರಿಗಿಳಿಯಂತಿವನು ಕತ್ತಿ ಬಡಿಗೆಗಳನಾಡಿಸಬೇಡಿ ಬಳ್ಳಿ ಚಿಗುರಿನಂತಿವನು ಮುಳ್ಳು ಕಲ್ಲುಗಳ ಹರವಬೇಡಿ, ಹೂಪಾದ ಇವನವು ಕೋಲಾಹಲದಲೆಯಪ್ಪಳಿಸಬೇಡಿ ಆಶ್ರಮ ಶಾಂತಿಯಲ್ಲರಳಿದ ಕಿವಿಯಿವನವು ಉರಿಮಾರಿಯ ಮೆರವಣಿಗೆ...

ಹೆದ್ದಾರಿಗುಂಟ

"ಹೆದ್ದಾರಿಗುಂಟ ರಾತ್ರಿ ಏನೆಲ್ಲ ನಡೆಯಬಹುದೆಂದು ಹೆದರಿಕೊಂಡೇ ‘ಹಗಲಿನಲ್ಲಿಯೇ ಹೊರಟಿದ್ದೇನೆ’ safe ಆಗಿ ನನ್ನೂರು ತಲುಪಲು" ಊರಿಂದೂರಿನ ಸರಪಳಿ ರಸ್ತೆಗಳ ಏರಿಳಿತ ನೋಡಲು ವಿಶಾಲ ವಿಹಂಗಮ ನಿಸರ್ಗಕಾಣಲು ಅಷ್ಟೇ ಅಲ್ಲ ಅಗಾಗ ತೂಕಡಿಕೆ ಬಂದರೂ ಸ್ವಲ್ಪ...

ಯಾರದೀ ಮಗು?

ಮಗು, ನೀನು ಹುಟ್ಟುವ ಮೊದಲು ನಾನಿನ್ನು ಹಾಲುಗಲ್ಲದ ಹುಡುಗಿ! ಆಡುತ್ತ ಸಂಜೆಯ ನೆರಳಾಗಿ ಬೆಳೆದೆ ದಂಡಗೆ ಮೂಡುವ ಸೂರ್ಯ ನಿಂತು ನೋಡಿ ಬೆರಗಾದ ನಾಚಿ ಕೆಂಪಾದ ಒಂದು ದಿನ ‘ದೊಡ್ಡವಳಾದೆ’ ದೇವರ ಹೆಸರಲ್ಲಿ ‘ದಾಸಿಯಾದೆ’....

ನಿನಗಾಗೇ ಕಾಯುತಿರುವೆ

ನಿನಗಾಗೇ ಕಾಯುತಿರುವೆ ನೀನಿಲ್ಲದೆ ನೋಯುತಿರುವೆ ಮರಳಿ ಮರಳಿ ಬೇಯುತಿರುವೆ ಓ ಬೆಳಕೇ ಬಾ; ಬೇರಿಲ್ಲದೆ ಹೂವೆಲ್ಲಿದೆ ಹೂವಿಲ್ಲದೆ ಫಲವೆಲ್ಲಿದೆ ನಾನಿರುವೆನೆ ನೀನಿಲ್ಲದೆ ನಿಜದೊಲವೇ ಬಾ. ನಿನ್ನನುಳಿದು ಬಾಳೆ ಬರಿದು ಖಾಲಿ ಮುಗಿಲು ಜಲವೆ ಸುರಿದು...

ಗಜಲ್

ಕೋಟಿ ದೀಪಗಳ ಹಚ್ಚಿಟ್ಟರೇನು? ಒಳಗಿನ ಅಂಧಕಾರ ನೀಗಲಿಲ್ಲ! * ಎಷ್ಟೂದ್ದ ಪದವಿ, ಪ್ರಶಸ್ತಿ ಗಳಿಸಿದರೇನು? ಒಳಗಿನ ತಿಳುವಳಿಕೆ ವಿಸ್ತರಿಸಲಿಲ್ಲ! * ಎಷ್ಟೊಂದು ದೇಶ, ವಿದೇಶಗಳ ಸುತ್ತಿದರೇನು? ತನ್ನ ತಾನು ಅರಿತಿಲ್ಲ...! * ಮಣಗಟ್ಟಲೆ... ಭಾಷಣ...

ಅರ್‍ಲಿ ಟು ಬೆಡ್ – ಅರ್‍ಲಿ ಟು ರೈಸ್

ಸೂರ್ಯ ನೋಡು ಸಂಜೆಯಾಗ್ತಿದ್ಹಾಂಗೆ ಹೋಗಿ ಮಲಕ್ಕೊಂಡುಬಿಡ್ತಾನೆ ಬೆಳಿಗ್ಗೆ ಹೊತ್ತಿಗೆ ಮುಂಚೆ ಎದ್ದು ಬಿಡ್ತಾನೆ ನೀನೂ ಹಾಗೇ ಮಾಡ್ಬೇಕು ಪುಟ್ಟು ಪ್ಲೀಸ್ ಅರ್‍ಲಿ ಟು ಬೆಡ್ ಎಂಡ್ ಅರ್‍ಲಿ ಟು ರೈಸ್ *****

ದೌರ್ಬಲ್ಯ

ತಾಯಿ ಸೊಟಕ್ಕಂಟಿದ್ದ ದೌರ್ಬಲ್ಯವು ಬೆಳೆಬೆಳೆದು ಹೆಮ್ಮರವಾಗಿ ಬಳ್ಳಿ ನಡು ಬಳಸುವುದು ಕಾಲ ಬಳಸಿದ್ದೀಗ ಕೈಯ ಟಳಕುವುದು ಜೊಲ್ಲು ಸುರಿಸುತ್ತಾ ನಿಂತ ನಾಯಿಯ ಕಾಲಕೆಳಗೇ ಅದರ ಸೆರೆ ಬಿಡಿಸಿಕೊಳ್ಳಲು ಹವಣಿಸುತ್ತದೆ ನೆರಳು ಪ್ರಾಬಲ್ಯ ಬದುಕು ರಥವನ್ನೆಳೆವ...

ಕ್ಯಾಟ್‌ವಾಕ್ ಹುಡುಗಿ (Model Girl)

ಹೊಟ್ಟೆಪಾಡು ನೋಡಿ ಅಗೊಮ್ಮೆ ಈಗೊಮ್ಮೆ ಬೆಕ್ಕಿನ ಹೆಜ್ಜೆ ಇಡಬೇಕಾದ ಪ್ರಸಂಗ ಹದಿನೆಂಟರ ಸುಂದರಿ ನಗು ಮಾತು ಅಷ್ಟಕ್ಕಷ್ಟೇ ಕುಹಕಿಗಳು ಇದು ಸೈಕಿಕ್ ಇರಬೇಕಂದದಷ್ಟೆ. ಯಾರಿಗೂ ಗೊತ್ತಿಲ್ಲ ಅವಳು ಯಾರು! ರಾಜಕುಮಾರಿ ಗಂಭೀರವದನೆ ಮದವೇರಿದ ಕಣ್ಣುಗಳಿಗೆ...

ದಾರಿಯಾವುದಯ್ಯಾ ಮುಂದೆ?

ಆಕಾಶವೇ ನೀಲಿ ಪರದೆ ಹಿಂದೆ ಖಾಲಿ ಕುರ್ಚಿಗಳ ಸಾಲು ಮುಂದೆ ಭಾಷಣದ ವಸ್ತು ‘ದಾರಿಯಾವುದಯ್ಯಾ ಮುಂದೆ?’ ಭಾಷಣಕಾರ: ಶ್ರೀಮಂತ ದಲಿತ ಕವಿ! ರಾಜಕಾರಣಿಯೊಬ್ಬ ‘ಸಾಹಿತ್ಯವೆಲ್ಲಾ ಬೂಸ’ ಎಂದು ಕರೆದದ್ದು ನೆನಪಿತ್ತು ಕೇಳುತ್ತ ಕುಳಿತೆ ‘ಕಾವ್ಯವೆಂದರೆ?’...
cheap jordans|wholesale air max|wholesale jordans|wholesale jewelry|wholesale jerseys