Home / Sharanagowda Eradettina

Browsing Tag: Sharanagowda Eradettina

ಜಂಭದ ಹುಂಜವು ಒಂದಿತ್ತು ನಿತ್ಯವು ಕೊ ಕೊ ಕೊ ಎನ್ನುತ್ತಿತ್ತು ಸೂರ್ಯ ಹುಟ್ಟುವುದೇ ನನ್ನಿಂದ ಎಂದೆನ್ನುತ್ತಿತ್ತು ಗರ್ವದಿಂದ ಜಗಳಗಂಟ ಹುಂಜವದು ಸದಾ ಜಗಳ ಕಾಯುತ್ತಿತ್ತು ಉಳಿದ ಕೋಳಿಗಳು ಹೆದರಿ ಪಾಪ ಹಾಕುತ್ತಿದ್ದವು ಹಿಡಿ ಹಿಡಿ ಶಾಪ ಈ ರಾಜ್ಯಕೆ ...

ಅಂದು ಶ್ವೇತಳ ಹುಟ್ಟು ಹಬ್ಬವು ಆದಳು ಅರಳಿದ ಗುಲಾಬಿ ಹೂವು ಸ್ನಾನವ ಮಾಡಿಸಿ ಹೂವನು ಮುಡಿಸಿ ಕುಂಕುಮ ಇಟ್ಟರು ನೊಸಲಲ್ಲಿ ಅವಳ ಗೆಳತಿಯರಿಗೆಲ್ಲ ಅವಳೇ ಸಡಗರ ಆಮಂತ್ರಣ ನೀಡಿದಳು ನೀರೂರಿಸುವ ವಿಧ ವಿಧ ತಿಂಡಿ ಜೋಡಿಸಿ ಇಟ್ಟಳು ತಯಾರು ಮಾಡಿ ಬಂಧು ಮಿತ...

ಗುಂಡನು ಆರು ಗಂಟೆಗೇ ಏಳುವ ಚಿಲಿಪಲಿ ಹಕ್ಕಿ ಕೂಗಿಗೆ ಮೈಕೊಡಹುವ ನಿದ್ದೆ ಬಿಟ್ಟು ಅಂಗೈ ನೊಡಿ ನಮಿಸುತಲಿ ದೇವರ ಮಂತ್ರ ಭಜಿಸುತಲಿ ಪೂರೈಸುವ ಬೆಳಗಿನ ಕೆಲಸವನು ಜಳಕವ ಮಾಡಿ ತಿನ್ನುವ ತಿಂಡಿ ಓದುವ ಕೊಠಡಿಗೈತಂದು ಅಂದಿನ ಪಾಠವ ಮುದದಲಿ ಓದುತ ಪುಸ್ತಕ ...

ಒಂದು ಒಂದು ಎರಡು ಸೇಬಿನ ತೋಟಕೆ ಹೊರಡು ಒಂದು ಎರಡು ಮೂರು ಹಾಕಲು ಹೆಜ್ಜೆ ನೂರು ಒಂದು ಮೂರು ನಾಲ್ಕು ಬೀರಲು ಹತ್ತು ಕಲ್ಲು ಒಂದು ನಾಲ್ಕು ಐದು ಮಾಲಿ ಓಡಿ ಬಂದು ಒಂದು ಐದು ಆರು ಬೇಲಿಯನು ಹಾರು ಒಂದು ಆರು ಏಳು ಮನೆ ಸೇರೋ ಗೀಳು ಒಂದು ಏಳು ಎಂಟು ಕಾ...

ಮೂರೊಂದ್ಲೇ ಮೂರು ಮೇಲೇಳು ಗಂಟೆ ಆರು ಮೂರೆರಡ್ಲೇ ಆರು ಜಳಕದ ಮನೆಗೆ ಹಾರು ಮೂರ್ ಮೂರ್ಲೆ ಒಂಭತ್ತು ತಿಂಡಿ ತಿನ್ನಲಿಕ್ಕೆ ಹತ್ತು ಮೂರ್ ನಾಕ್ಲೆ ಹನ್ನೆರಡು ಹಟವನು ಬಿಟ್ಟುಬಿಡು ಮೂರೈದ್ಲೆ ಹದಿನೈದು ರೆಡಿಮಾಡುವರು ಬೈದು ಮೂರಾರ್ಲೆ ಹದಿನೆಂಟು ಪುಸ್ತ...

ತಾತನೊಂದಿಗೆ ಆಡುವುದೆಂದರೆ ಮೈಮನ ಕುಣಿಯುವುದು ಅಪ್ಪ ಅಮ್ಮಂದಿರ ಮರೆತುಬಿಡುವೆನು ಬಿಟ್ಟೋಡುವೆನು ಓದು ನನ್ನನು ನೋಡಿ ಬಿಡುವನು ತಾತ ಸಂತಸದಲಿ ಬಾಯಿ ಹೆಡಕಿನ ಮೇಲೆ ಹೊತ್ತ ಆತನು ಆಗುವ ನನಗೆ ತಾಯಿ ಕುರಿಮರಿ ಮಾಡಿದ ತಾತನು ಹಿಗ್ಗುತ ಪೇಟೆಗೆ ಕರೆದೊಯ...

ಇರುವೆ ಇರುವೆ ಎಲ್ಲಿರುವೆ? ನೆಲದಲಿ ಹುತ್ತದಲಿ ನಾನಿರುವೆ ಸಣ್ಣನೆ ಕಪ್ಪನೆ ಇರುವೆ ನಿನಗೆ ಆಪರಿ ವೇಗವೇ? ಮೈಯಲಿ ಬುಳು ಬುಳು ಓಡುವೆ ಕಚ್ಚದೆ ಕರುಣೆಯ ತೋರುವೆ ರಾಜ ರಾಣಿ ಜೊತೆಗೆ ಸವಾರಿ ಅನ್ನವ ಅರಸುತ ಹೊರಡುವಿರಿ ಶಿಸ್ತಿನ ಶಿಪಾಯಿ ತರಹ ನಿಮ್ ಪರಿ...

ಹೋಳಿ ಹುಣ್ಣಿವೆ ದಿನದಂದು ಸೋಮ್ ವ್ಯೋಮಾದಿ ಸೇರಿ ಅಗೆದರು ಮನೆಯ ಮುಂದೊಂದು ಕಾಮ ದಹನದ ಗುಂಡಿಯೊಂದು ನೆಟ್ಟರು ನಾಲ್ಕು ಕೋಲು-ಗಳ ಹಚ್ಚಲು ಬಣ್ಣದ ಹಾಳೆಗಳ ಜಗಮಗ ಲೈಟನು ಹಾಕಿದರು ಸೌದೆ ಹೊರೆಗಳ ಒಟ್ಟಿದರು ಚಂದ್ರ ಜಗವನು ಬೆಳಗಿದನು ಸೌದೆಗೆ ಘಾಸಲೇಟ್...

ಪುಟ್ಟನ ಹಳ್ಳಿ ಜಾತ್ರೆಯಲಿ ಸಿಗುವವು ಬಗೆ ಬಗೆ ತಿನಿಸುಗಳು ಬೆಂಡು ಬತ್ತಾಸು ಜಿಲೇಬಿಗಳು ಒಣಮಂಡಕ್ಕಿಯ ಮೂಟೆಗಳು ದಾರದ ಉಂಡೆ ರಬ್ಬರ್ ಚೆಂಡು ರಿಬ್ಬನ್ ಟೇಪು ಗಾಜಿನ ಗುಂಡು ಹೇರ್‌ಪಿನ್ ಕನ್ನಡಿ ಬಾಚಣಿಗೆ ಕುಂಕುಮ ಟಿಕಳಿ ಬೀಸಣಿಗೆ ಭಜನೆ ಸನಾದಿ ಕರಡ...

ಬಂದಿತು ನಾಡಿಗೆ ಬೇಸಿಗೆಯು ಮುಗಿಯಿತು ವಾರ್ಷಿಕ ಪರೀಕ್ಷೆಯು ಮಕ್ಕಳಿಗಿದು ವಿಶ್ರಾಂತಿಯ ಕಾಲ ಆಟ ಕೂಟ ಬಿರು ಬಿಸಿಲಲ್ಲಿ ನೆಂಟರ ಊರಿಗೆ ತೆರಳುವರು ಹೊಸ ಹೊಸ ಸ್ಥಳಗಳ ನೋಡುವರು ಬಗೆ ಬಗೆ ಭಕ್ಷವ ಸವಿಯುವರು ನಂತರ ಊರಿಗೆ ಮರಳುವರು ಕೋಶವ ಓದು ದೇಶವ ನೋ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...