Home / Hannerdumath

Browsing Tag: Hannerdumath

ದೂರ ದೂರ ದೂರ ಗುಡ್ಡ ಹಾರಿ ಹಾರಿ ಬರುತ್ತಿವೆ ಹಸಿರು ಹೊಗರು ಹಣ್ಣು ಹೂವು ತೂರಿ ತೂರಿ ತರುತಿವೆ ||೧|| ಅಗೊ ಅಲ್ಲಿ ತಗೊ ಇಲ್ಲಿ ನುಗ್ಗಿ ನುಗ್ಗಿ ಬಂದವು ದಿಗಿಲು ದಾಟಿ ಭುಗಿಲು ದಾಟಿ ಹಿಗ್ಗಿ ಹಿಗ್ಗಿ ನಿಂದವು ||೨|| ಯಾರು ಏನು ಎಂಬ ಚಿಂತೆ ಓಡಿ ಓ...

ಹನುಮಂತಣ್ಣಾ ಶನಿವಾರಣ್ಣಾ ಗುರುವಾರ್ ಶುಕ್ರಾರ್ ಬಾರಣ್ಣಾ ||ಪಲ್ಲ| ನಿನ್ನಾ ಮ್ಯಾಲೆ ಚಿನ್ನಾ ಚಲುವೇರ್ ಯಾಕೆ ಹಾಯ್ ಹಾಯ್ ಅಂತಾರೆ ಕಾಲೇಜ ಕಟ್ಟೀ ಹುಡುಗೂರ್ ಹುಡುಗೇರ್ ಬಾಯ್‍ಬಾಯ್ ಬಾಯ್‍ಬಾಯ್ ಬಿಡ್ತಾರೆ ||೧|| ದೇವ್ರೇ ಇಲ್ಲಾ ಅಂದಾ ಜಾನಿ ಜಾಯ್ಲ...

ಬಾರೆ ತಾರೆ ಚಂದ್ರ ನೀರೆ ಮುಗಿಲ ಮಂಚ ಕರೆದಿದೆ ನೂರು ನೂರು ಚುಕ್ಕೆ ಹೂವು ಎದೆಯ ಕಮಲ ತೆರೆದಿದೆ ||೧|| ಕುಣಿವುದೊಂದೆ ಗೊತ್ತು ನನಗೆ ಹೊತ್ತು ಗೊತ್ತು ಕಿತ್ತೆನೆ ಗೆಜ್ಜೆ ಝಣಣ ಹೆಜ್ಜೆ ಝನನ ಪ್ರೇಮ ಪೈಜೆ ಕುಣಿದೆನೆ ||೨|| ಕುಚದ ಕುತನಿ ಕಚದ ಕಮನಿ ...

ಗಂಡಲ್ಲೊ ನೀನೂ ಗಂಡಲ್ಲಾ ||ಪಲ್ಲ|| ಆಳಾಕ ಬರಲಿಲ್ಲ ವೇಳಾಕ ಬರಲಿಲ್ಲ ಹೇಳಾಕ ಬರಲಿಲ್ಲ ಹಳೆಗಂಡೊ ಪಡಿಗೋದಿ ಪರಮಾಶಿ ದಡಿಸೀರಿ ಮಕಮೀಸಿ ಎದಿಯಾಗ ಸಾರೋ ಹುಳಿಸಾರೊ ||೧|| ಕಪಲೀಯ ತ್ವಾಟಕ್ಕ ಮಕಮಾರಿ ಬಲುಸುದ್ದ ಉದ್ದುದ್ದ ತೆಂಗಾ ಮುಗಿಲುದ್ದೊ ಬಾಳ್ಯಾಗ...

ರಾಮ ಅತ್ತ ಸೀತೆ ಇತ್ತ ನಡುವೆ ರಾತ್ರಿ ಕೂಗಿತೆ ನಿನ್ನ ಬಿಲ್ಲು ಜಂಗು ತಿಂದು ಹುಲ್ಲು ಹುಡಿಯ ಮಲ್ಲಿತೆ ||೧|| ರಾಮ ರಾಮ ರಾಮ ಎನುತೆ ಕಾಮ ಕಾಮ ಎಂದೆನೆ ಸೀತೆ ಪ್ರೀತೆ ಪೂತೆ ಎನುತೆ ಕೋತಿ ದೂತೆ ಯಾದೆನೆ ||೨|| ಕಲಿಯ ಕೈಯ ಬಲಿಯು ಆದೆ ಸೀತೆ ಕೆಟ್ಟು ...

ಕಿರಿಕೆಟ್ಟ ಆಟಕ್ಕ ಟೊಕಟೊಕ್ಕ ತೆಲಿಕೆಟ್ಟ ತಿರಿಗ್ಯಾನ ತಿರುಮಲ್ಲಾ ಹುಚಮಲ್ಲಾ ||ಪಲ್ಲ|| ಛೀಮೂಳಾ ಅಂದಾರ ಇಂಗ್ಲೀಸು ನಕ್ಕಾನ ಇಂಗ್ಲಂಡು ಹ್ಯಾಟ್ನ್ಯಾಗ ಹೋಕ್ಕಾನ ಉತ್ತತ್ತಿ ತಿನ್ನಂದ್ರ ತತ್ತೀಯ ತಿಂದಾನ ಹೊಟ್ಯಾಗ ಕುಕ್ಕುಕ್ಕು ಕುಣಿಸ್ಯಾನ ||೧|| ಕ...

ಧನ್ಯ ಧನ್ಯ ಧನ್ಯ ಹೂವೆ ನಿನ್ನ ದಾನ ಪಾವನಂ ನಿನಗೆ ನನ್ನ ನಮನ ನಮನ ನೀನೆ ನನ್ನ ಜೀವನಂ ||೧|| ಮುಗಿಲ ತುಂಬ ರತ್ನ ಪಕ್ಷಿ ನೀನೆ ಅದರ ಕಾರಣಂ ನೆಲದ ತುಂಬ ಯಕ್ಷ ಯಕ್ಷಿ ನೀನೆ ರಸದ ತೋರಣಂ ||೨|| ಅವನೆ ನೀನು ವಿಮಲ ಧೇನು ಜೋಗ ಯೋಗ ಸಂಭ್ರಮಾ ನಿನ್ನ ಚರ...

ಚಲುವಿ ಚಲುವಿ ಚಂಪಕ್ಕಾ ಟೂವಿ ಟೂವಿ ಟಿಂವಕ್ಕಾ ||ಪಲ್ಲ|| ಹಳದಿ ಪತ್ಲಾ ಕೆಳದಿ ಕೊತ್ಲಾ ಕುಬ್ಸಾ ಕುಮಟಾ ಟೆಂಗಕ್ಕಾ ಟೊಂಕಾ ಟಾಂಗಾ ಬಿಂಕಾ ಬೋಂಗಾ ನೀನೀ ನೀನೀ ನಾಗಕ್ಕಾ ||೧|| ಎದಿಯಾ ಮ್ಯಾಗೆ ಕಳ್ಳೆ ಮಳ್ಳೆ ಒಳಗೆ ಹುಂಚಿ ಕಾಯಕ್ಕಾ ನಡದು ನಡದು ತೊಡಿ...

ಕಲ್ಲು ಕರಗಿತು ಮಣ್ಣು ಕರಗಿತು ಬಯಲು ಬಯಲೇ ಉಳಿಯಿತು ಎಲುವು ಕರಗಿತು ನರವು ಕರಗಿತು ಜ್ಯೋತಿ ಮಾತ್ರವೆ ಉಳಿಯಿತು ||೧|| ಮೌಢ್ಯ ಕರಗಿತು ಜಾಢ್ಯ ಕರಗಿತು ಹೂವು ಹೂವೆ ಅರಳಿತು ಮುಳ್ಳು ಕರಗಿತು ಸುಳ್ಳು ಕರಗಿತು ಆತ್ಮ ಪಕ್ಷಿಯು ಹಾರಿತು ||೨|| ಬಾನಿನ...

ಡಾಕ್ಟರಾ ನೀನೂ ಜೋಕುಮಾರಾ ನಿನನಂಬಿ ನಾನೂ ಬಕಬಾರಾ ||ಪಲ್ಲ|| ನರಕದಾ ಕುಣಿಕಂಡೆ ಕುಣಿತುಂಬ ಹೆಣಕಂಡೆ ಹೆಣದಾಗ ಡಾಕ್ಟರ್‍ನ ಮನೆಕಂಡೆ ಇದ್ದೋವು ಸಾತ್ತಾವು ಸತ್ತೋವು ಎದ್ದಾವು ಹೆಣದಾಗ ಡಾಕ್ಟರ್‍ನ ಹಣಕಂಡೆ ||೧|| ಗಮ್ಮೆಂದು ನಾರ್‍ಯಾವು ಪಡ್ಡೆಂದು ಒ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...