ಒಂದೆರಡು ಮಾಸಿದ ಬಳೆಗಳು

ಹತ್ತಾರು ರೂಪಾಯಿಗೆ ಸಿಗುವ ಇವು ಸೀದಾ ಸಾದಾ ಬಳೆಗಳು ಬರಿಯ ಬಳೆ ತೊಟ್ಟ ಕೈಗಳಲ್ಲಿ ದೇವ ದೇವಿಯರ ಕೂಡ ಯಕ್ಷ, ವಾನರರೂ ಹೇಗೆಲ್ಲಾ ಗಟ್ಟಿಗೊಳುತ್ತಾರೆ. ನೀರೆತ್ತುವ ಅದೇ ಕೈಗಳು ನೀರುಕ್ಕಿಸಿದವು, ನೀರು ಬಸಿದವು ಕೂಡ...

ಬಯಲ-ಪಾರಿಜಾತ

ಬೀದಿ ಗುಡಿಸುವ ಆ ಹುಡುಗಿ ಬಯಲಲ್ಲಿ ಬುಟ್ಟಿ ಕಟ್ಟುವ ಪಾರಿಜಾತ ಬೆಳ್ಳಂಬೆಳಿಗ್ಗೆ ಕಣ್ಣ ತುಂಬೆಲ್ಲಾ ಕನಸು ಹೊತ್ತು ಕಸವ ರಸ ಮಾಡುತ್ತಾ ಪಾದಕ್ಕೆ ಚುಚ್ಚಿದ ಪಿಂಗಾಣಿ ಗಾಜುಗಳ ಮೆಲ್ಲಗೆ ಸವರಿ, ಮುಖ ಕಿವಿಚಿ ಸರಕ್ಕನೇ...

ಒಲೆಗಳು ಬದಲಾಗಿವೆ

ಒಲೆಗಳು ಬದಲಾಗಿವೆ ಹೊಸ ರೂಪ, ಆಡಂಬರದ ಬಿಂಕ ಬಿನ್ನಾಣ ಮೈತೆತ್ತು ಉರಿ ಬದಲಾಗಿದೆಯೇ? ಜ್ವಾಲೆಗೆ ಹಳದಿ ಕೆಂಪು ಮಿಶ್ರಿತ ಹೊಳಪು ಕಂದಿದೆಯೇ? ಕಳೆಕುಂದಿದರೆ ಬೇಯಿಸುವ ಕೈಗಳು ಕೆಲಸ ಕಳೆದುಕೊಳ್ಳುತ್ತದೆ ಕೈಬಳೆಯ ನಿಟ್ಟುಸಿರ ಗಾಳಿಯೂ ದೀರ್ಘವಾಗುತ್ತದೆ....

ನೆಲಮಣ್ಣಿನ ಸ್ವಯಂ ಸ್ವಯಂವರ

ಅದೇ ಆ ಕೆಂಪುಮಣ್ಣಿನ ಗದ್ದೆಯ ತುಂಬಾ ಪ್ರತಿಸಲದಂತೆ ಈ ಸಲವೂ ಹೊಸ ಬೀಜಗಳದ್ದೇ ಬಿತ್ತು. ಮೋಹನ ರಾಗದ ಮಾಲಿಕೆಗಳ ಜೊತೆ ತರವೇಹಾರಿ ತಳಿಬೀಜಗಳ ಊರಿಹೋಗುವ ಆತನಿಗೋ ಪುರಸೊತ್ತಿಲ್ಲದ ದಣಿವು. ಸೀಮೆಗೆ ತಕ್ಕಂತಿರುವ ಮಣ್ಣಿನ ಹದಕ್ಕೆ...

ಮಿಡಿಗಾಯ ಮಹಿಮೆ

ಮಾವಿನ ಮಿಡಿ ಎಲ್ಲಿ ಸಿಗುತ್ತೋ? ಕಾಯುತ್ತಿದ್ದೆ. ಉಪ್ಪಿನ ಕಾಯಿಯ ಮಿಡಿ ಈ ಸಲಕ್ಕೆ ಹಾಕಿಡಬೇಕು. ಅದೇ ಮೊನ್ನೆ ಹಸಿಹಸಿರು ಮಿಡಿ ಗುಲಗುಂಜಿಗೆ ಸ್ವಲ್ಪವೇ ದೊಡ್ಡದು ಪೇಟೆ ಅಂಚಿಗೆ ನನಗೆ ಬೇಕಾದದ್ದು ಅವನೊಬ್ಬನಲ್ಲಿ ಮಾತ್ರ ಸುರಿದುಕೊಂಡಿದ್ದ....

ನಾನು ಹೆಂಡತಿಯಾಗಲಾರೆ

ಹೆಣ್ಣಿನ ಕುತ್ತಿಗೆಗೆ ಮಾತ್ರ ತೂಗು ಹಾಕುವ ಗುರುತಿನ ಕಾರ್‍ಡು ನೇಣು ಹಗ್ಗದಂತೆ ಕಾಣಿಸುತ್ತದೆ ನನಗೆ ನಾನು ಹೆಂಡತಿಯಾಗಲಾರೆ. ಸಂಕೇತಗಳ ಬೇಡಿಯನ್ನು ಅಂಗಾಂಗಗಳ ಮೇಲೆಲ್ಲಾ ಹೇರಿ ಕುಂಕುಮವ ನೆತ್ತಿಗೆ ಮೆತ್ತಿ, ಮುತೈದೆ ಮಂಗಳೆ ಎಂದೆಲ್ಲ ಊದುವ...

ಒಲವು ಬಂಧನವಲ್ಲ

ಹಿಂದೆಲ್ಲ ಬಣ್ಣಬಣ್ಣದ ನಾಜೂಕು ಬಳೆಗಳ ಕಂಡಾಗಲೆಲ್ಲಾ ಮನ ನವಿಲಾಗುತ್ತಿತ್ತು. ಕಿಣಿಕಿಣಿ ನಾದ ಕಿವಿ ತುಂಬುತ್ತಿತ್ತು. ಆದರೆ ಬಂಗಾರದ ಮಿನುಗು ಬಳೆಗಳು ಹಸಿರು ಗಾಜಿನ ಬಳೆಗಳು ದಿನಕಳೆದು ಗಡುಸಾದಂತೆ ಕೈಗಳು ಗಾಯಗೊಳಿಸುತ್ತವೆ ತೊಡುವಾಗಲೆಲ್ಲಾ.. ಸಂಕೋಲೆಯ ಕಂಕಣ...

ಹಾಲಾಹಲಕ್ಕೆ ನಿಮ್ಮಲ್ಲಿ ಮದ್ದುಂಟೇನು?

ನನ್ನೊಳಗೆ ನಿನ್ನ ಕಾಪಿಟ್ಟುಕೊಳ್ಳುದಕ್ಕೆ ಪಕ್ಕಾಗಿದ್ದೇನೆ. ಅನ್ಯಥಾ ನೀರಿನಲೆಗಳ ನಡುವೆ ಸುಳಿಯ ನರ್ತನಕೆ ಕುಣಿವ ತರಗಲೆಯಲ್ಲ ನಾನು ಗೋಣು ಅಲ್ಲಾಡಿಸುವುದ ಮರೆತುಬಿಟ್ಟವಳು. ಸೊಕ್ಕಿನವಳೆಂದು ಜರಿದು ಅನೇಕ ಮೂಗುತಿಗಳು ನನ್ನೊಂದಿಗೆ ಮಾತುಬಿಟ್ಟವು. ಆದರೂ ಬಯಲ ಗಾಳಿಗೆ ಬೇಲಿ...

ಹೇಂಟೆಯ ಕವಿತೆ

ಕವನಗಳ ಕಟ್ಟಿ ನವ್ಯ ನವೋದಯ ಪ್ರಗತಿಶೀಲದ ಅಂಗಿ ತೊಟ್ಟವರು ಸ್ತ್ರೀ ವಾದಿಯೆಂದೋ, ಬಂಡಾಯ ಎಂದೋ ದಲಿತನೆಂದೋ ಹಣೆಪಟ್ಟಿ ಹಚ್ಚಿಕೊಂಡು ಮೇಲೊಂದು ಜಾಕೀಟು ತೊಟ್ಟು ಮೈಕು ಹಿಡಿದು ಮೆರೆಯುತ್ತ ಅರೇ! ನಾನೇನು ಹೇಳುತ್ತಿದ್ದೇನೆ ಕವಿತೆ ಕಟ್ಟುವ...

ರಾತ್ರಿಯಲ್ಲಿ ಹಗಲಿನ ಪಾಳಿ

ಉರಿವ ಕೊಳ್ಳಿಯ ಭಾರಕ್ಕೆ ಸ್ನಾಯುಗಳು ಸಡಿಲವಾಗಿಲ್ಲ. ದೀಪದ ಮಾದಕ ಮತ್ತು ಆಫೀಮು ತುಂಬಿದ ಸೀಸೆ ಅಮೃತ ಶಿಲೆಯ ಕಣ್ಣುಗಳಲ್ಲೂ ಕಡುಕಪ್ಪು ಗೋಲ ನಿದ್ದೆ ಭರಿಸದ ಯಾವುದೋ ಮಾಯೆ. ರಾತ್ರಿ ಜಾಗರಣೆ ತೇಪೆ ಹಾಕಿದ ಸೀರೆಯ...
cheap jordans|wholesale air max|wholesale jordans|wholesale jewelry|wholesale jerseys