ಪ್ರೀತಿಯ ಪಳಿಯುಳಿಕೆಯ ಮೇಲೆ ಸಣ್ಣ ಜೋಪಡಿ ಕಟ್ಟಿ ಸುತ್ತ ಗುಲಾಬಿ ಗಿಡ ನೆಟ್ಟಿದ್ದೇನೆ. ಎದೆಗನ್ನಡಿ ದೇವದಾರು ಚೌಕಟ್ಟಿಗೆ ಅವುಚಿಕೊಂಡಿದೆ.. ತಿಂಗಳ ಬೆಳಕಿಗೆ ಬರದಿರಲಿ ಬೆಂಕಿಯುಗುಳುವ ಖಯಾಲಿ. ಮಾತು ಕತೆ ಸತ್ತ ದಿನಗಳಲ್ಲೂ ದೇಹವೇ ದಾಸ್ತಾನಿನ...
ನನ್ನ ಪ್ರೇಮದ ಕಡ ಎಷ್ಟು ದಿನ ಇಟ್ಟುಕೊಳ್ಳುವಿ ನೀ ಬಿದಿರಕೋಲಿನ ಸಖನೇ ನಾಳೆಗಾದರೂ ತೀರಿಸಿಬಿಡು ಹನಿಮುತ್ತಿದ ಕೆಂದಾವರೆಗಳು ನನ್ನ ತುಟಿಯಲ್ಲರಳಲಿ. ಬಿದಿರುಗಣೆ ಉಲಿತ ಸದ್ದಾಗದಂತೆ ನನ್ನಾತ್ಮವನ್ನೆ ಕಬಳಿಸುತ್ತಿದೆ. ಯಮುನೆ ತೀರದ ಕುಳಿರ್‍ಗಾಳಿ ತಣ್ಣಗಿನ ಒಳಕೋಲಾಹಲಕ್ಕೆ...
ಎಷ್ಟು ಸವರಿದರೂ ಮತ್ತೆ ಮತ್ತೆ ಮುಟ್ಟಬೇಕೆನ್ನಿಸುವ ಆತನ ಕದಪುಗಳ ತಟ್ಟಿ ಮುತ್ತಿಕ್ಕಿದಾಗಲೆಲ್ಲ ಅಕ್ಷರಗಳು ನನ್ನೊಳಗಿನ ಆತ್ಮದಂತೆ ಹರಿದಾಡುತ್ತವೆ. ಆತನ ತುಟಿಗಳ ಮೇಲೆ ಬೆರಳಾಡಿಸಿದಾಗೆಲ್ಲ ಅನೂಹ್ಯವಾದ ಬೆಸುಗೆ ಕರುಳ ಕೊಂಡಿಯಂತೆ ಒಳಗೊಳಗೆ ಬಲಿಯುತ್ತದೆ. ನನ್ನೊಳಗಿನ ಆತ್ಮದ...
ಜೊತೆಜೊತೆಯಲಿ ಕೈಯಲ್ಲಿ ಕೈಯಿಟ್ಟು ನಡೆವ ಅವರನ್ನೂ ಕಂಡಾಗಲೆಲ್ಲಾ, ಮುಂದೊಂದು ದಿನ ನಾನು ಹೀಗೆ, ಬರಿಯ ಹಾಗೇ ಅಂದುಕೊಂಡಿದ್ದೆ, ಅಷ್ಟೇ. ಪೇಟೆ ದಾರಿಯಲ್ಲಿ ಹೀಗೆ ಕೈ ಕೈ ಹಿಡಿದು ನಡೆದಾಡಿರಲೇ ಇಲ್ಲ ನಾವೆಂದೂ. ಹಾಗೆ ಇರಲಾಗಲೇ...
ಅದೆಷ್ಟು ದಿನಗಳಾದವು ಕಸುವು ಹದಗೊಳ್ಳಲು ಕಾದು, ಬರುವ ನಿರೀಕ್ಷೆಗಳಲ್ಲಿಯೇ ನೆಟ್ಟ ಕಣ್ಣು ಬಿದಿರುಕೋಲಿನ ನಾದ ಕರ್‍ಣಕ್ಕಿಳಿಯದೇ ಕದಿರು ಕತ್ತರಿಸಿದ ಪೈರು ಆಕೆ ಆ ನೀಲಾಂಗನನ ಸುತ್ತ ನೆರೆದ ಗೋಪಿಕೆಯರ ಕಮಲದಳ ಕಣ್ಣುಗಳ ದಂತ ಕದಳಿ...
ಅವನ ನೆನಪಿನ ಕಿರು ಕಡತಗಳು ಹಾಗೆ ಇವೆ. ಸಂದೂಕದ ಅಡಿಯಲ್ಲಿ ಅಲ್ಲಲ್ಲಿ ಧೂಳಿನ ಲೇಪನಗೊಂಡು ಎಡತಾಕುವ ಬೆಕ್ಕಿನಂತೆ ಸದಾ ಹಿಂದೆ ಸುತ್ತುತ್ತಿದ್ದವ ಅಪರೂಪದ ಬಿಳಿ ಪಾರಿವಾಳವಾದ. ನನ್ನೆದೆಯ ಗೂಡಲ್ಲಿ ಕಾಪಿಡುವೆ ನಿನ್ನ ಎಂದವ ನನ್ನೊಡಲ...