ಎಂಟು ಬೇಡರು

ಮಗುವೆ, ನಿನ್ನಯ ಮೈಗೆ ಗುರಿ ಇಟ್ಟು ಹೊಡೆವಾ ಬಗೆ ಬಗೆಯ ಬೇಡರಿಂದಲಿ ದೂರವಾಗು. ಹೊತ್ತನ್ನು ತಿಂಬ ಸೋಮಾರಿತನ ಬೇಡ! ಮತ್ತು ಹಿಡಿಸುತ ಮೈ ಕೊಲುವ ಕಳ್ಳು ಬೇಡ! ಕತ್ತು ಕೊಯ್ಕರ ಕೂಡೆ ನಂಟುಬೇಡತನ! ಉತ್ತಮೋತ್ತಮರಲ್ಲಿ...

ಆಡಿನಾ ಮರೀ!

ಆಡಿನಾ ಮರೀ, ಆಡ ಬಾರೆಲೆ! ಓಡ ಬೇಡೆಲೆ, ನೋಡಿ ನನ್ನನು! ಅರಳಿ ಎಲೆಯನೂ, ಹಲಸಿನೆಲೆಯನೂ, ಹುರುಳಿ ಕಡಲೆಯಾ, ಕಲಸಿ ಕೊಡುವೆನು. ಮಾತನಾಡದೇ, ನನ್ನ ನೋಡದೆ, ಏತಕ್ಹೋಗುವೆ? ಆಡಿನಾ ಮಗೂ! ***** (ಕವಿಶಿಷ್ಯ)

ಸಂಜೆಯ ಹಾಡು

ಹಗಲೆಲ್ಲಾ ಕಳೆಯಿತು ಸೂರ್ಯನು ಮುಳುಗೆ; ಖಗ ಹಾರಿತು ಗೂಡಿನ ಒಳಗೆ; ಜಗವೆಲ್ಲಾ ಬೆಳಗಿತು ದೀಪವು ಬೆಳಗೆ, ಗಗನಾಂಗಣದಲ್ಲಿ ಉಡು ತೊಳಗೆ; ಮೃಗವೆಲ್ಲಾ ಅಲೆವವು ಬೆಟ್ಟದ ಕೆಳಗೆ; ಹೊಗುತಿರುವುದು ಕತ್ತಲೆ ಇಳೆಗೆ. ಓ-ಮಗುವೇ, ನೀ ಸಂಜೆಯ...

ಜೋಗುಳ ಹಾಡು

ಜೋಗುಳ ಹಾಡನ್ನು ಲಾಲಿಸು, ಜೋ! ಜೋ! ತೂಗುವೆ ತೊಟ್ಟಿಲ, ಮಲಗಿರು, ಜೋ! ಜೋ! ಸುಮಲತೆಗಳ ಪರಿಮಳವ ಬಿತ್ತರಿಸಿ, ಕಮಲದ ಕೋಮಲ ಗಂಧವ ಬೆರಸಿ, ಮಂದ ಮಾರುತವು ಬೀಸುತ್ತಿರಲಿನಿಸು, ತಂದೆ, ತಂದಿಹೆನೊಂದು ಮುದ್ದಿನ ಕನಸು. ಮೊದಲೆವೆಗಳನು...

ಜೋಗುಳ

ಚಂದ್ರ ಬಿಂಬದ ಮೇಲೆ ಕಂದು ಕಾಣುತಲಿಹುದು, ಕಂದ ಮುದ್ದನ ಅಚ್ಚ ನಿಡು ಹಣೆಗೆ ಜೋ! ಕಂದ ಮುದ್ದನ ಅಚ್ಚ ನಿಡು ಹಣೆಗೆ ತಾಯ್ತರಳೆ ಚಂದದಿಂ ಬೊಟ್ಟಿಟ್ಟ ಕತ್ತುರಿಗೆ, ಜೋ! ಹೂವು ಹೆಚ್ಚಿನದಾಯ್ತು, ಮಾವು ಮೆಚ್ಚಿನದಾಯ್ತು,...

ತೂಗುವೆ ತೊಟ್ಟಿಲ

ತೂಗುವ ತೊಟ್ಟಿಲ ಜೋಗುಳ ಹಾಡಿ, ಕೂಗದೆ ಮಲಗೆನ್ನ ಮುದ್ದಿನ ಮೋಡಿ, ಜೋ ಜೋ ತುಂಬಿ ಪವಡಿಸಿತು ಎಸಳ ಹೂಗಳಲಿ, ಗೊಂಬೆ! ನಿನ್ನಯ ಕಣ್ಣಿನೆವೆ ಸೆರೆಗೊಳಲಿ, ರೆಂಬೆ ಚಿಗುರೊಳಡಗಿತು ಪಿಕದುಲಿಯು, ಸೋಂಬನಾಗಲಿ ನಿನ್ನ ತುಟಿ ಚಿಲಿಪಿಲಿಯು....
ನನ್ನ ಚಿಕ್ಕ ತಂದೆ

ನನ್ನ ಚಿಕ್ಕ ತಂದೆ

ನನ್ನ ಚಿಕ್ಕತಾಯಿ ನಮ್ಮಿಬ್ಬರನ್ನು ತನ್ನ ಮನೆಯಲ್ಲಿ ಬಿಟ್ಟು ಈ ಲೋಕದಿಂದ ದೂರಳಾದಳು. ಅವಳು ಸ್ಪರ್ಗಕ್ಕೆ ಹೋದಳೋ ನರಕಕ್ಕೆ ಬಿದ್ದಳೋ ನನ್ನಿಂದ ಹೇಳಲು ಸಾಧ್ಯವಿಲ್ಲ. ಸ್ವರ್‍ಗದ ಸೋಪಾನಗಳು ಸಾವಿರವಾದರೆ, ಅವನ್ನೆಲ್ಲಾ ಹತ್ತುವಷ್ಟು ದೇಹಶಕ್ತಿ ಅವಳಲ್ಲಿ ಇರಲಿಲ್ಲ....
ನನ್ನ ಚಿಕ್ಕ ತಾಯಿ

ನನ್ನ ಚಿಕ್ಕ ತಾಯಿ

ನನ್ನ ತಂದಗೆ ನಾನೊಬ್ಬನೇ ಮಗನು. ನನ್ನ ತಂದೆ ತಾಯಿಗಳು ನನ್ನನ್ನು ಮದುವೆ ಮಾಡದೆ ತೀರಿಹೋದರು. ಆ ದಿನ ಮೊದಲ್ಗೊಂಡು. ನಾನು ನನ್ನ ಚಿಕ್ಕಪ್ಪನ ಮನೆಯಲ್ಲಿದ್ದೆನು. ನನ್ನ ಚಿಕ್ಕತಾಯಿಯನ್ನು ನೋಡಿದರ, ನನಗೆ ಮೈಯೆಲ್ಲ ಉರಿಯುತ್ತಿತ್ತು. ಆದರೆ...
ಹಮ್ ನಹಿಂ ಗದ್ಧಾ

ಹಮ್ ನಹಿಂ ಗದ್ಧಾ

ಕೆಲವು ವರ್ಷಗಳ ಹಿಂದ ಲಕ್ಷಣಾವತಿಯಲ್ಲಿ ೧೭ನೆಯ ವರ್ಗದ ದೇಶೀಯ ಸಿಪಾಯರ ದಂಡು ಇದ್ದಿತು. ಸಿಪಾಯರ ಮನೆಗಳು ‘ಮೈದಾನಿನಲ್ಲಿ’ ಕಟ್ಟಿದ್ದುವು; ಹಾಗೂ ಸೈನ್ಯದ ಅಧಿಕಾರಿಗಳ ‘ಬಂಗ್ಲೆಗಳು’ ಜನರಲ್ ಸಾಹೇಬರ ಮತ್ತು ಕರ್ನಲ್ ಸಾಹೇಬರ ‘ಬಂಗ್ಲೆಗಳು’ ‘ಲೆಫೆನೆಂಟ್’...
ವೈದ್ಯರ ಒಗ್ಗರಣೆ

ವೈದ್ಯರ ಒಗ್ಗರಣೆ

ವಲ್ಲಭಾಚಾರ್ಯರು ೧೮೬೨ರಲ್ಲ ಕಮಲಪುರದ ಅಮಲ್ದಾರರಾಗಿದ್ದರು. ಆ ಕಾಲದಲ್ಲಿ ಜನಗಳಿಗೆ ಕುಂಪಣಿ ಸರಕಾರದಲ್ಲಿ ಹುದ್ದೆ ದೊರಕುವುದಕ್ಕೆ ಅಷ್ಟೊಂದು ತೊಂದರ ಇರಲಿಲ್ಲ. ಜನಗಳಲ್ಲಿ ಸಾಕಷ್ಟು ಅನುಕೂಲತೆ ಇದ್ದಿತ್ತು; ಹೊಟ್ಟೆ ತುಂಬಾ ಉಂಡು ಕೂತುಕೊಳ್ಳಬಹುದಾದಷ್ಟು ಇದ್ದಿತ್ತು. ಸರಕಾರಿ ಹುದ್ದಗಳಿಗೋಸ್ಕರ...