ನಾ…. ಬರುತ್ತೇನೆ ಕೇಳು!

ಒಂದಲ್ಲ ಒಂದು ದಿನ ನಿನ್ನ ಕನಸಿನಲ್ಲಿ ಸದ್ದಿಲ್ಲದೆ ಸುಳಿದು ಬರುವವಳೇ…. ನಾನು ಜಾಡಿಸಿ ಒದ್ದೋಡಿಸಿದರೆ ಬಾಗಿಲ ಕಟಕಟಾಯಿಸಿವೆನು. ನಿನ್ನ ಪೊಗರು ಮಾತೆಲ್ಲ ಗಾಳಿಯಲ್ಲಿ ತೂರಿ ಹೋಗುವ ಹಾಗೆ ಗೆಜ್ಜೆ- ಝಣಗುಟ್ಟಿಸುವೆನು, ಕಣ್- ತಪ್ಪಿಸಿಯಾದರೂ ಒಳನುಗ್ಗುವೆನು....

ಯಾಕೆ ಬರಲಿಲ್ಲ?

ತುಂಬ ತಡವಾಯಿತು ಗೆಳೆಯಾ ಈ ತನಕ ಇದ್ದೆ ಇನ್ನಿಲ್ಲ. ಬರುತ್ತೇನೆ ಎಂದು ಹೇಳಿದ್ದೆಯಲ್ಲ? ಯಾಕೆ ಬರಲಿಲ್ಲ? ನಾನು ಕಾದಿದ್ದೆ. ಚುಕ್ಕಿಗಳ ಎಣಿಸುತ್ತ ಇರುಳುಗಳ ಗುಣಿಸುತ್ತ. ನಾನು ಕಾದಿದ್ದೆ, ನನ್ನದೇನೂ ತಪ್ಪಿಲ್ಲ. ಹೌದು ನಾನು ಕಾದಿದ್ದೆ,...

ಇರುಳಿನಲ್ಲಿ ಬೆಳಗು

೧ ಸರಿರಾತ್ರಿಯಲ್ಲಿ ಹುಡುಗಿ ಕನಸು ಕಾಣುತ್ತಿದ್ದಾಳೆ. ಅವಳ ಕನಸು ಹೀಗಿದೆ: ಪೇಪರಿನವನ ಚರಪರ ಚಪ್ಪಲಿ ಸದ್ದಿನಲ್ಲಿ ಹಾಲಿನವನ ಅವಸರದ ಗುದ್ದಿನಲ್ಲಿ ಇಬ್ಬನಿಯಲ್ಲಿ ತೊಯ್ದ ಹೂವಿನೊಡತಿಯ ದನಿಯಲ್ಲಿ ಬೆಳಗಾಗಿದೆ ಮುಲ್ಲ ಅಲ್ಲಾನಿಗಾಗಿ ತುಟಿ ಬಿಚ್ಚಿದ್ದಾನೆ ಮೈಕಾಸುರ...

ಸ್ವಗತ

ಮುಂಜಾವದ ತಂಪೊತ್ತಿನಲ್ಲಿ ಕೆಂಪು ಹೃದಯದ ಹುಡುಗಿ ರಸ್ತೆಯಂಚಿನಲ್ಲಿ ನಿಂತಿದ್ದಾಳೆ. ಯಾಕೆ? ಎಂದು ಕೇಳಬೇಕು, ಹೇಗೆ ಕೇಳುವುದು? ನೆಲವನ್ನು ಜಗ್ಗಿ ಹಿಡಿದಿರುವ ಕಾಲು. ಸೋತು ತೂಗುತ್ತಿರುವ ಕೈಗಳು. ದಿಟ್ಟಿಸಿ ದಿಟ್ಟಿಸಿ ಆಳಕ್ಕಿಳಿದಿರುವ ಕಣ್ಣು ಇವಳನ್ನು ಸಂತೈಸಬೇಕು,...

ಪ್ರತೀಕ್ಷೆ

ಅವೊತ್ತು ಆಗಸದ ತುಂಬ ಮೋಡಗಳು ನೇತಾಡುತ್ತಿದ್ದವು. ಕಪ್ಪು ಹೊದ್ದು ಮಲಗಿದ್ದ ರಸ್ತೆಗಳಷ್ಟೇ ಕೈ ಬೀಸುತ್ತಿದ್ದವು. ನಿನ್ನ ಹೆಜ್ಜೆ ಹಾರಿಸಿದ ಧೂಳೊಂದಿಗೆ ಮಸುಕಾಗಿ ಮರೆಯಾದ ಬೆನ್ನ ಕಣ್ತುಂಬಿಕೊಂಡು ನಿಂತಿದ್ದೆ, ಮಾತು ಮರೆತವಳಂತೆ. ಇವೊತ್ತು ಮೈ ತುಂಬ...

ಬಿಡಿ ನನ್ನ ಪಾಡಿಗೆ ನನ್ನನ್ನು

೧ ನೀವು ಕೇಳಿದ್ದು ಒಳ್ಳೆಯದೆ ಆಯಿತು. ನನಗೀಗ ಎಲ್ಲವೂ ಅರ್ಥವಾಯಿತು. ನೋಡಿ - ಹಿಂಡುಹಿಂಡಾಗಿ ಅಲೆಯುವ ಮೋಡಗಳಲ್ಲೊಂದು ತುಣುಕೆಂದೊ… ಆಕಾಶದ ಕ್ಯಾನ್‌ವಾಸಿನಲ್ಲಿ ಬಳಿದ ಬಣ್ಣಗಳಲ್ಲೊಂದು ಎಳೆಯೆಂದೊ… ಕಣ್ಣಾಮುಚ್ಚಾಲೆಯಾಡುವ ಮಿಂಚಿನೊಳಗೊಂದು ಕಿಡಿಯೆಂದೊ… ಒರಟಾಗಿ ಬೀಸುವ ಗಾಳಿಯಲ್ಲೊಂದು...

ನೀವೇಕೆ ಬೇಕು?

ತಾರೆಯರೇ ಮಿಣುಮಿಣುಕಿ ಅಣಕಿಸಿದ್ದು ಸಾಕು. ಚಂದ್ರಮನೇ, ನಿನ್ನ ನಗುವಿಗೆ ಮೂರು ಕಾಸು. ಕೋಲ್ಮಿಂಚುಗಳೇ ಎಷ್ಟು ಬಗೆಯ ಚಿತ್ತಾರ ಬರೆಯುತ್ತೀರಿ ನೀವು? ಚಣಕೊಮ್ಮೆ ವೇಷ ಬದಲಾಯಿಸಲೇಬೇಕೆ, ಮೋಡಗಳೇ? ಕಲಕಲಿಸದಿದ್ದರೆ ನಿದ್ದೆ ಬರುವುದಿಲ್ಲವೆ, ಜಲವೆ? ಕುಹೂ -...

ಕೊಡು ನಿನ್ನ ದುಃಖ

ನನ್ನ ಸೌಂದರ್ಯವನ್ನು ಮೆಚ್ಚಿಕೊಂಡ ಜನ ನನ್ನ ಸರಳತೆಯನ್ನು ಮೆಚ್ಚಿಕೊಂಡ ಜನ ನನ್ನ ದುಃಖ ಎಷ್ಟೆಂದು ಕೇಳಲಿಲ್ಲ. ನನ್ನನ್ನು ಪ್ರೀತಿಸಿದ ತಂದೆ ನನ್ನನ್ನು ಸಲಹಿದ ತಾಯಿ ನನ್ನ ಆಸೆಗಳೇನು ಎಂದು ಕೇಳಲಿಲ್ಲ. ನಾನು ನೀಲಿ ನಕಾಶೆಯೊಳಗೆ...