ತಾರಾ

'ಭವತಿ ಭಿಕ್ಷಾಂದೇಹಿ' ಭಿಕ್ಷಾಪಾತ್ರೆ ಹಿಡಿದು ಮನೆ ಮನೆಯಿಂದಲೂ ಬೇಡಿ ತಂದಿದ್ದು ಕರಗದ ದಾರುಣ ಸಂಕಟವನ್ನೇ ಅಗಿದು ಜಗಿದರೂ ತೀರದ ನೋವು ಸುಮ್ಮನೇ ಪಚನವಾದೀತೇ? ಬೊಗಸೆಯಲಿ ಆಪೋಷಿಸಿ ನೀಗಿಕೊಂಡ ಬೋಧಿಸತ್ವನೇನೋ ಬುದ್ಧನಾಗಿಹೋದ! ಆದರೆ ಒಳಗಿಳಿದದ್ದು ಸುಮ್ಮನುಳಿದೀತೆ?...

ಕಣ್ಣೀರ ಹನಿಯುದುರಿದ್ದಕ್ಕೆ….

ಬುದ್ಧ ಪಾದದ ಮೇಲೆ ಕಣ್ಣೀರ ಹನಿಯುದುರಿದ್ದಕ್ಕೇ ಅದು ಮಳೆಯಾಗಿಹೋಯ್ತು. ಮಿಂದ ತೇವಕ್ಕೇ ಪಾದವೆಲ್ಲಾ ಮಿಡುಕಿ ಹಸಿ ಮಣ್ಣಾಗಿಹೋಯ್ತು. ಆ ಹಸಿಮಣ್ಣ ಬುಡಕ್ಕೆ ಕಣ್ಣುಗಳೂರಿದ್ದೇ ತಡ ಮೊಳಕೆಯೊಡೆದುಬಿಡುವುದೇ!? ಬುದ್ಧ ಪಾದದ ಮೇಲೆ ಗಿಡವರಳಿ ಟೊಂಗೆ ಟೊಂಗೆಯ...

ಜೋಗಿಣಿ ಹಕ್ಕಿ ತಾವು ಹುಡುಕುತ್ತಾ…..

ಈ ಗೋಡೆಯಿಂದ ಆ ಗೋಡೆಗೆ ಕಪಾಟಿನಿಂದ ಷೋಕೇಸಿಗೆ ಮುಚ್ಚಿದ ಈ ಬಾಗಿಲಿನಿಂದ ತೆರೆಯದ ಆ ಕಿಟಕಿಯವರೆಗೆ ಹಾರಾಟ ವಿಹ್ವಲ ತುಡಿತ ಮನೆ ಹೊಕ್ಕ ಜೋಗಿಣಿ ಹಕ್ಕಿಯ ತಬ್ಬಲಿ ಅಲೆದಾಟ. ಸುತ್ತ ಸುತ್ತಿ ಸುಳಿದು ಒತ್ತಿ...

ಕವಿತೆ ಹುಟ್ಟಿತೇ?

'ಕವಿತೆ ಹುಟ್ಟಿತೇ?' ಜೀವ ಬಾಯಾಗಿ ಕಾತರದ ಕಣ್ಣಾಗಿ ಸುಕೋಮಲ ರೇಷಿಮೆಯ ಹುಳು ಒದ್ದಾಡುತ್ತಿದೆ ಮುಲುಗುಟ್ಟುತ್ತಾ ನಿರ್ವಾತದ ಗೂಡಿನೊಳಗೇ ಸುಡು ನೀರ ಕಾವಿಗೆ. ದಾರದೆಳೆ ಎಳೆ ಮೂಡಲು, ಬೇರ್ಪಡಬೇಕು ತನುವಿಗಂಟಿದ ತೊಗಲು, ಇನ್ನೆಷ್ಟು ಕುದಿಯಲೇರಿಳಿಯಬೇಕೋ ಜೀವ...

ಬಾಗಿಲು ಬೀದಿಗಳ ನಡುವೆ

ಮುಚ್ಚಿದ ಗೂಡಿನ ಬಾಗಿಲು, ಬಾಗಿಲಿಲ್ಲದ ಬೀದಿ ನಡುವೆ ಲೋಕವ್ಯಾಪಾರಕ್ಕೆ ಸಾಕ್ಷಿ ಒಂದು ಅಬ್ಬೇಪಾರಿ ಹೊಸಿಲು. * ಅತ್ತ ಬಾಯ್ದೆರೆದು ಬಿದ್ದುಕೊಂಡಿರುವ ಬಿನ್ನಾಣಗಿತ್ತಿ ಬೀದಿ ಆಹ್ವಾನಕ್ಕೆ ಕ್ಷಣ ಕ್ಷಣವೂ ಮರುಳಾಗಿ ಬೀಳುವ ಅಸಂಖ್ಯ ಬಡಪಾಯಿ ಜೀವಗಳು...

ಕೊನೆಗೀಗ ನೋವೆಂದರೆ…..

ಈ ನೋವು ಸಪಾಟು ಬಯಲಿನಲಿ ತಣ್ಣಗೆ ಹರಿವ ನದಿಯಲ್ಲ ಸೂಜಿ ಕಣ್ಣಿನಲಿ ಬಳುಕುತ್ತಾ ಮೈಕೈ ನೆಗ್ಗಿಸಿ ಹಾದು ತೊಟ್ಟು ತೊಟ್ಟಾಗಿ ಆವರಿಸುತ್ತದೆ ಮಳೆ ನೀರು ಹನಿಹನಿಯಾಗಿ ಭೂಮಿಯಾಳಕ್ಕೆ ಇಳಿಯುತ್ತಾ ಒಳಗನ್ನೇ ಆವರಿಸಿದಂತೆ ಈ ತೇವ...

ಒರೆಸಿಹೋಗುತ್ತವೆ

ಉಸಿರು ತುಂಬಿದ ಕ್ಷಣದಿಂದ ಯಾಚನೆಗೊಡ್ಡಿದ ಅನಾಥ ಬೊಗಸೆ ಬಿಕ್ಕಳಿಸುತ್ತಲೇ ಇದೆ ಕೊಚ್ಚಿ ಬಂದ ಮಹಾಪೂರ ತುಂಬಿಟ್ಟುಕೊಳಲಾಗದೇ ಅದಕ್ಕೆ ಬರಿದೇ ಮುಳುಗಿ ಮೀಯುವ ಸಂಭ್ರಮ ಉಕ್ಕುವ ನೀರಿನಲ್ಲೂ ಕರಗಿಸುವ ಆರ್ದ್ರತೆ! ಆ ಸೆಳೆತಕ್ಕೆ ಪುಟ್ಟ ಬೊಗಸೆಯೇ...

ನನಗೋ ಇಂಥ ಹೆಳವು…

ಅಯ್ಯೋ...ನೋಡಲ್ಲಿ ಕಂದನನ್ನು ಅದೇನು ಹೀಗೆ ಏರುತ್ತಿದೆ ಮೆಟ್ಟಿಲಿನಂತೆ? ಮರಕ್ಕಾತು ಜಡವಾಗಿ ಕೂತಿದ್ದಕ್ಕೇ ಅವನನ್ನೇನು ಕೊರಡೆಂದುಕೊಂಡಿದೆಯೋ? ಕಾಲುಚಕ್ರ ಸೋತ ಹೊತ್ತಲ್ಲಿ ಮರಕ್ಕೊರಗುತ್ತಾನೆ ಕುಸಿದು ಅವನೊಂದಿಗೇ ಮರಕ್ಕೂ ಅದರ ಮೇಲಿನ ಸಕಲೆಂಟು ಜೀವಜಂತುಗಳಿಗೂ ಗಾಢ ಮೈಮರೆವಿನ ವಿಸ್ಮೃತಿ....

ನನ್ನೊಳಗಿನ ನಾನು…

ಅವ್ವಾ ಅವರು ಕತ್ತಿ ಮೊನೆ ಕೊರಳಿಗೆ ಚುಚ್ಚಿ ತಮಗೆ ಬೇಕೆನಿಸಿದ ನುಡಿ ಅರುಹಲು ಆಗ್ರಹಿಸುತ್ತಿದ್ದಾರೆ ಇವರು ನಾಲಿಗೆಗೇ ಭರ್ಜಿ ನೆಟ್ಟು ತಮಗೊಲ್ಲದ ನುಡಿ ಅರಳದಂತೆ ಕಡಿವಾಣ ಹಾಕಿದ್ದಾರೆ ಅವ್ವಾ.... ಎಂದಿಗೂ ನನ್ನ ನುಡಿಗಳಲ್ಲಿ ನನ್ನೊಳಗಿನ...

ಕಲಾಕೃತಿಯೊಂದು

ಮುಚ್ಚಿಡುವುದಾಗದಿದ್ದಾಗ ಬಿಕರಿಗಿಡಬಹುದಷ್ಟೆ ಬೀದಿಯಲ್ಲಿ ಅಳೆದು ತೂಗಿ ಏರಿಳಿಯುವ ತಕ್ಕಡಿ ಬೆಲೆಕಟ್ಟುತ್ತಾರೆ ಯಾರೋ ಕೂಗುತ್ತಾರೆ ಹರಾಜು ಮತ್ತಿನ್ಯಾರೋ ಪ್ರದರ್ಶನಕ್ಕಿಡುತ್ತಾರೆ ಕಟ್ಟು ಹಾಕಿಸಿ ಮಗದೊಬ್ಬರು ಕೈಯಿಂದ ಕೈಗಳ ದಾಟಿ ಇದುವರೆಗೆ ಮುಚ್ಚಿಟ್ಟ ದುಬಾರಿ ನಿಟ್ಟುಸಿರುಗಳು. ಬೆನ್ನಿಗೆ ತಾಗಿದ...
cheap jordans|wholesale air max|wholesale jordans|wholesale jewelry|wholesale jerseys