
ಹಸಿವಿನ ನಿರಂಕುಶಕ್ಕೆ ಭಾಷೆ ಇಲ್ಲ ಅರ್ಥವಿಲ್ಲ ವಿವರಣೆಯೂ ಇಲ್ಲ ಅನುಭವ ವೇದ್ಯ. ರೊಟ್ಟಿಯ ಘನತೆಗೆ ಬೆಲೆಯಿಲ್ಲ ಅಳತೆಯಿಲ್ಲ ಅಸ್ತಿತ್ವವೇ ನಗಣ್ಯ. *****...
ಬಾಳಲಾಗದ ಬಾಳಬಾರದ ವೇದಾಂತ ಸಿದ್ಧಾಂತ ಮೂಗಿನ ನೇರದ ತತ್ವಜ್ಞಾನ ಅವರಿವರ ಉಪದೇಶಾಮೃತ ಕೇಳಿ ಕೇಳಿಯೇ ರೊಟ್ಟಿ ಹಸಿವಿನ ಜಗಳ ಜೀವಂತ. *****...
ರೊಟ್ಟಿ ಹಸಿವಿನ ನಡುವೆ ಒಂದು ನಿಗೂಢ ಕಾಲುವೆ. ಗುಪ್ತಗಾಮಿನಿಯೊಡಲಲ್ಲಿ ಹಾಗೇ ಸುಪ್ತವಾಗಿದೆ ಖಾಸಗಿ ಕ್ಷಣಗಳು. ಅವರು ಸಾಕ್ಷಿ ಕೇಳುತ್ತಾರೆ ರೊಟ್ಟಿ ಹಸಿವು ಒಳಗೇ ನಗುತ್ತವೆ. *****...
ಹಸಿವು ತಣಿಯಲು ರೊಟ್ಟಿ ರೊಟ್ಟಿ ಅರಳಲು ಹಸಿವು ಕಾರ್ಯಕಾರಣ ಸಂಬಂಧ ಸೃಷ್ಟಿ ನಿಯಮ. ರೊಟ್ಟಿ ಹಸಿವಿನ ಹಾದಿ ಪ್ರತ್ಯೇಕವಾಗಿಯೂ ಏಕ. *****...
ಸಾಮಾನ್ಯರು ಹೇಳುತ್ತಾರೆ ನನಗಾಗಿ ಜಗತ್ತು ಅಸಾಮಾನ್ಯರು ಹೇಳುತ್ತಾರೆ ಜಗವೆಲ್ಲಾ ನಮ್ಮದು *****...
ಹಸಿವು ಸೋಲುವುದಿಲ್ಲ ರೊಟ್ಟಿ ಗೆಲ್ಲುವುದಿಲ್ಲ ಪಂದ್ಯವೆಂಬ ಭ್ರಮೆ ಹಸಿವು ರೊಟ್ಟಿಗೆ. ಆದರಿಲ್ಲಿ ಸೋಲು ಗೆಲುವುಗಳಿಲ್ಲ ದಾಖಲಾಗುವುದಿಲ್ಲ ಚಕ್ರ ತಿರುಗುತ್ತದೆ ರೊಟ್ಟಿ ಹಸಿವು ಕೈ ಹಿಡಿದು ಸುತ್ತಬೇಕಿದೆ ಜೊತೆ ಜೊತೆಗೇ. *****...













