Home / Shishunala Sharief

Browsing Tag: Shishunala Sharief

ಜೋಗುಳ ಪಾಡಿರಮ್ಮಾ ಜಲಜಾಕ್ಷಿಯರೆಲ್ಲ ಜೋಗುಳ ಪಾಡಿರಮ್ಮಾ ||ಪ|| ಜೋಗುಳ ಪಾಡಿರಿ ಶ್ರೀ ಗುರುಯೆನುತಲಿ ಯೊಗಮಂದಿರದೊಳು ತೂಗುತ ಕಂದನ ||ಅ.ಪ.|| ಒಂದು ಹಿಡಿದು ಒಂಭತ್ತು ಬಾಗಿಲ ನಡು- ಹಂದರದಲಿ ಸಂಧಿಸಿದ ಮಂಟಪದೊಳು ಕುಂದಣ ಕೆಚ್ಚಿದ ತೊಟ್ಟಿಲೊಳಗೆ ಆ-...

ಶೀಗಿಹುಣ್ಣಿವೆದಿನ ಉಣ್ಣಲಿಕ್ಕೆ ಕರೆಯುವರೆಲ್ಲಾ ಕರೆದರೆ ಹೋಗದೆ ಬಿಡಲಿಲ್ಲಾ || ಪ || ಹುರಿಯಕ್ಕಿ ಹೋಳಿಗಿ ಹೂರಣಗಡಬು ಕಡಲೀ ಪಚ್ಚಡಿ ಕಟ್ಟಿನಾಂಬರಾ ಉಂಡಗಡಬು ಪುಂಡಿಯ ಪಲ್ಲೆ ಬುಟ್ಟಿಯೊಳಿಟ್ಟೆಲ್ಲಾ ಕೆಮ್ಮಣ್ಣು ಬುಟ್ಟಿಗೆ ಬಡದೆಲ್ಲಾ ಅದರನುಭವ ತಿಳ...

ನೋಡೋಣ ಬಾ ಗೆಳತಿ ನಾಡೋಳ್ ಹುಲಗೂರ ಸಂತಿ ಬಾಡ ಮಾರವಳ ಬಡಿವಾರ ಬಹಳೈತಿ ||ಪ|| ಜೋಡಬಿಲ್ಲಿ ದುಡ್ಡಿಗೊಂದು ಸಿವಡು ಕೋತಂಬರಿಯ ಕೊಡಲು ಬೇಡಿಕೊಳ್ಳುತ ನಿಂತರೆ ಮಾತಾಡಳೋ ಮುಖ ನೋಡಳೋ ||ಅ.ಪ.|| ಸರಸಾದ ಪ್ಯಾಟಿಯು ಮೆರೆವದು ಕೋಟಿಯು ವರ ರಸವರ್ಗ ಫಲಗಳು ಸ...

ಕುರುವರಿಯದ ಕುಂಬಾರಗ ಹೇಳಲು ಮಾರಿಗ್ಹೊಡದ ಮಾದಿಗರಣ್ಣಾ ||ಪ|| ಕಾರಹುಣ್ಣಿವಿ ದಿನ ಕೋರಿಯ ಹೊತಗೊಂಡು ಬೋರಗಲ್ಲಿಗೆ ಬಡದೀರಿ ಸುಣ್ಣಾ ||೧|| ಹುರಿಕಟ್ಟಿನ ಹೋರಿಗೆ ಗೊಟ್ಟವ ಹಾಕಲು ಕುಟ್ಟಿ ಉಪ್ಪು ಎಣ್ಣಿ ಅರಿಷಿಣ ||೨|| ಹುರಿಯಕ್ಕಿ ಹೋಳಿಗೆ ಕರಿದ ಕ...

ಕುಂಬಾರಕಿ ಈಕಿ ಕುಂಬಾರಕಿ ಈ ಬ್ರಹಾಂಡವೆಲ್ಲ ತುಂಬಿಕೊಂಡಿರುವ ||ಪ|| ಚಿನ್ನ ಎಂಬುವ ಮಣ್ಣನು ತರಸಿ ತನು ಎಂಬುವ ನೀರನು ಹಣಸಿ ಮನ ಎಂಬುವ ಹುದಲನು ಕಲಸಿ ಗುಣ ಎಂಬುವ ಸೂಸನು ಹಾಕಿ ||೧|| ಭಕ್ತಿ ಎಂಬುವ ತಿಗರಿಯ ಮಾಡಿ ಧ್ಯಾನ ಎಂಬುವ ಬಡಗಿಯ ಊರಿ ಮುನ್...

ಬಿದ್ದಿಯಬೇ ಮುದುಕಿ ನೀ ದಿನ ಹೋದಾಕಿ ಬಲು ಜೋಕಿ ಬಿದ್ದಿಯಬೇ ಮುದುಕಿ ||ಪ|| ಸಧ್ಯಕಿದು ಹುಲಗೂರ ಸಂತಿ ಗದ್ದಲದೊಳಗ ಯಾಕ ನಿಂತಿ ಬಿದ್ದು ಒದ್ದಾಡಿದರ ಎಬ್ಬಿಸುವರಿಲ್ಲಾ ಬುದ್ಧಿಗೇಡಿ ಮುದುಕಿ ನೀನು ಬಿದ್ದಿಯಬೇ ಮುದುಕಿ ||೧|| ಬುಟ್ಟಿಯೊಳು ಪಟ್ಟೇವನ...

ತಂಗಿ ನಮಗೆ ಕೊಡಿರೆಂದು ಕೊಟ್ಟಳ್ಹಂಗಿನರಕಿಯನು ||ಪ|| ಇಂಗಿತ ಅರಿದವ ಅಣ್ಣ ನೀ ಬಾರೆಂದು ಬಂಗಿ ಸೇದಿಸಿ ಬ್ರಹ್ಮಾಂಡದ ಬಯಲೊಳು ||ಅ.ಪ.|| ತನುತ್ರಯಕ್ಕೆ ತಾ ಬಾಧ್ಯಳೋ ಎನ್ನ ಘನ ಆತ್ಮಕ್ಕೆ ಪ್ರಸಿದ್ಧಳೋ ವನಜಾಕ್ಷಿಯು ತನ್ನ ಚಿನುಮಯ ರೂಪದಿ ಮನಮುಟ್ಟಿ...

ಸಣ್ಣಹುಡಗಿಯೆ ನಿನ್ನ ಬಣ್ಣಿಸಲಳವೆ ಮುನ್ನಾ ಆಣಿದ ಜಾಲಕೆ ನಿನ್ನಾ ಬೆನ್ನ ಹತ್ತಿ ಮುನಿ ಜನ ನುಣ್ಣಗ ಸಂದಾನ್ನವರು ಮನುಜರು ಚನ್ನಚಲ್ವಿಕೆಗೆ ಸೋತು ಅರಣ್ಯದಿ ರನ್ನ ಸಿದ್ಧ ಋಷಿಗಳನು ಕೆಣಕಿ ಬಲಗಣ್ಣು ಸೊನ್ನಿಮಾಡಿ ಕಾಮ ಪಾಶದಿ ಮಣ್ಣುಗೂಡಿಸಿದೆ ಬಿಡು ಮ...

ಗಿರಣಿ ವಿಸ್ತಾರ ನೋಡಮ್ಮಾ ಶರಣಿ ಕೂಡಮ್ಮ ||ಪ|| ಧರಣಿಪತಿಯು ರಾಣಿ ಕರುಣಾಕ ರಾಜ್ಯಕೆ ತರಿಸಿದ ಘನಚೋದ್ಯವೋ ಚೀನಾದ ವಿದ್ಯವೋ ||ಅ.ಪ.|| ಜಲ ಆಗ್ನಿ ವಾಯು ಒಂದಾಗಿ ಕಲೆತು ಚಂದಾಗಿ ಜಲ ಅಗ್ನಿ ವಾಯು ಒಂದಾಗಿ ನೆಲದಿಂದ ಗಗನಕ್ಕೆ ಮುಟ್ಟಿದಂತೆಸೆವುದು ಚಲ...

ಮಾನಿನಿ ಮಾತಾಡಬ್ಯಾಡಮ್ಮಾ ನೀ ಸುಮ್ಮನಿರು ಜಾಣ ಹೆಂಗಸರಾಟ ನೋಡಮ್ಮಾ || ಪ || ಕ್ಷೋಣಿಯೊಳಗತಿಗೇರಿ ಭಕ್ತರು ಪ್ರಾಣ ಮೂವರಿಗೊಬ್ಬ ಗುರು ಕಲ್ಯಾಣದಯ್ಯನ ಮಾಡಿಸಿದ ಪೌರಾಣದೊಳು ಪ್ರತಿ ಕಲಹವಾಯಿತು || ಅ. ಪ. || ಹರ ಶರಣ ಲೀಲಾಮೃತ ಕಥೆಯ ತೆರುದ್ಹೇಳುತಿ...

1...2223242526...41

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...