ಗಳಿಗೆಬಟ್ಟಲ ತಿರುವುಗಳಲ್ಲಿ – ೫೧

ಮೂಕ ರೊಟ್ಟಿಗೆ ಆಸ್ಥೆಯಿಂದ ಹಾಡು ಕಲಿಸಿ ಸಂಭ್ರಮಿಸಿದ್ದ ಹಸಿವಿಗೀಗ ರೊಟ್ಟಿಯ ಸಂಗೀತ ಕೇಳಲು ಪುರುಸೊತ್ತಿಲ್ಲ. ಆಸಕ್ತಿಯೂ ಇಲ್ಲ. ಹಸಿವೆಗಾಗಿಯೇ ಕಲಿತ ಪದಗಳನ್ನು ಹಾಡಲೂ ಆಗದೇ ಬಿಡಲೂ ಆಗದೇ ರೊಟ್ಟಿಗೆ ತಳಮಳ. *****
ಕೃತಕತೆಯಂದ ನೈಜತೆಗೆ

ಕೃತಕತೆಯಂದ ನೈಜತೆಗೆ

ಪ್ರಿಯ ಸಖಿ ಕ್ಷಿಪ್ರಗತಿಯಲ್ಲಿ ಬದಲಾಗುತ್ತಿರುವ ಜೀವನ ವಿಧಾನದಿಂದ ನಿಧಾನಕ್ಕೆ ನಾವು ನೈಜತೆಯಿಂದ ಕೃತಕತೆಯೆಡೆಗೆ ಮುಖ ಮಾಡಿ ನಡೆಯುತ್ತಿದ್ದೇವೆ. ನಮ್ಮ ಒಂದು ದಿನದ ದಿನಚರಿಯನ್ನು ನಮ್ಮ ನಡವಳಿಕೆ, ಮಾತು ಕೃತಿಗಳನ್ನು ಗಮನಿಸಿದರೆ ನಾವೆಷ್ಟು ಕೃತಕವಾಗುತ್ತಿದ್ದೇವೆ ಎಂದು...

ಗಳಿಗೆಬಟ್ಟಲ ತಿರುವುಗಳಲ್ಲಿ – ೫೦

ರೊಟ್ಟಿ ಹಾಡುವುದು ತಪ್ಪಲ್ಲ ಹಸಿವೆಗೆ ಅರ್ಥವಾಗದಂತೆ..... ಅಲ್ಲಲ್ಲ ಅನುಭವಿಸಲಾಗದಂತೆ ಹಾಡುವುದು ತಪ್ಪು. ಹಸಿವು ಅಸೂಕ್ಷ್ಮವಾಗಿ ಸೃಷ್ಟಿಗೊಂಡ ಆ ಕ್ಷಣದ ತಪ್ಪು. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೪೯

ಹಸಿವಿನ ಅನಾರ್ಯ ಆದೇಶ ಒಂದು ದಾಸಾನುದಾಸ ಗುಲಾಮನದ್ದು. ರೊಟ್ಟಿಯ ತಹತಹಿಕೆ ಅಕ್ಕರೆ ಉಣಿಸುವ ಆರ್ದ್ರ ಮನದ್ದು. ಸಿಂಹಾಸನಾರೂಢ ದೊರೆಗೆ ಮಣ್ಣಿನಾಳದ ಪಿಸುಮಾತುಗಳು ಎಂದಿಗೂ ಅರ್ಥವಾಗಿಲ್ಲ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೪೮

ಹಸಿವಿನೆದುರು ದಂಗೆಯೇಳುತ್ತಲೇ ಇರುತ್ತದೆ ರೊಟ್ಟಿ. ಅದಕ್ಕೆ ಸುಮಧುರ ಹಾಡು ಕಲಿಸಲಾಗದೇ ಪ್ರತಿಸಲ ಸೋಲುತ್ತದೆ. ಶಾರೀರವಿರದ ಅಶರೀರ ಹಸಿವನ್ನು ಸುಮ್ಮನೆ ಕ್ಷಮಿಸುತ್ತದೆ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೪೭

ಪರಿಧಿ ವಿಸ್ತರಿಸಿದಂತೆಲ್ಲಾ ಹಸಿವೆಗೆ ಇಷ್ಟವಿಲ್ಲದಿದ್ದರೂ ಅದರ ಕರಾಳ ಮುಖಗಳು ರೊಟ್ಟಿಗೆ ತನ್ನಂತೆ ತಾನೇ ತೆರೆದುಕೊಳ್ಳುತ್ತಾ ಹೋಗುತ್ತದೆ. ನಾಚಬೇಕಿದ್ದ ಹಸಿವು ಆರ್ಭಟಿಸುತ್ತದೆ. ದನಿ ಕಳೆದುಕೊಂಡ ಅಸಹಾಯಕ ರೊಟ್ಟಿ ಬಾಯಿ ಮುಚ್ಚುತ್ತದೆ. *****
cheap jordans|wholesale air max|wholesale jordans|wholesale jewelry|wholesale jerseys