Home / Raghava

Browsing Tag: Raghava

ನಾಡ ನಾಯಕನೊಡನೆ ನಾವ್ ಬೇಡುತಿಹೆವು: ನೀಡು ಬಿಡುಗಡೆ ನಾಡಿಗೆಲ್ಲರಿಗೆ ಶುಭವ. ನೂರಾರು ಪಂಥಗಳ ನುಗ್ಗುನುರಿ ಮಾಡು ಬೇರೆ ಬೇರಾದವರನೊಮ್ಮತಕೆ ಹೂಡು ದಾರಿ ತಿಳಿಯದೆಹೋದ ಜನಕೆ ಮತಿ ನೀಡು ಬೀರಿ ಶಾಂತಿಯನಿಳೆಗೆ, ದೇವ, ಕಾಪಾಡು. (ಆಗಸ್ಟ್ ೯,೧೯೪೪: ಕ್ವ...

ದೇವ ಕರುಣಿಸು ಜಯವ ನಾಡ ನಾಯಕಗೆ ಜೀವದಿಂದುಳುಹೆಮಗೆ ನಾಡ ಬಿಡುಗಡೆಗೆ. ಹಿಂಸೆಯನ್ನಡಗಿಸಲು, ಹಿಂಸಕರನೆದುರಿಸೆ, ಅ- ಹಿಂಸೆಯೆನ್ನುವ ಹಿರಿಯ ತತ್ವವನು ಸಾರಿ, ಧ್ವಂಸಕರ ಲೋಕದಲಿ ಶಾಂತಿ ಮೂಡಿಸೆ, ಪರಮ- ಹಂಸ ಸಂದೇಶವಾಚರಿಸುತಿಹ ಗಾಂಧಿಗೆ. (೬-೫-೧೯೪೪:...

ಅಂದು – ಋಷಿಗಳ್ ಯೋಗಿಗಳ ಪರಮ ದಾರ್ಶನಿಕರ್‍ ಭಕ್ತರ್‍ ವಿರಕ್ತರ್‍ ಕೀವಂದ್ರರ್‍ ದಿವ್ಯಚಕ್ಷುನಿನಿಂ ಅಣುವನೊಡೆದರ್‍ ಕಂಡರದ್ಭುತಮಂ, ಪೂರ್ಣ ದರ್ಶನಮಂ: ವ್ಯೋಮ ಭೂಮಿಗಳೊಳ್ ರವಿಯಾಗಿ ಶಶಿಯಾಗಿ ತಾರಾನಿಕರಮಾಗಿ ಸಿಡಿಲಾಗಿ ಮಿಂಚಾಗಿ ವೃಷ್ಟಿಯೆನ...

‘ಅಸ್ಪೃಶ್ಯ ಚಂಡಾಲ ಪಂಚಮ ಹೊಲೆಯ’ರೆಂದು ದೂರವಿಟ್ಟಿಹೆವಲ್ಲ ನಮ್ಮ ಸಮ ಸೋದರರ? ಅನ್ಯತ್ರವಿಲ್ಲದಿಹ ಹೊಲೆಯದೇನವರ? ನಾವೆ ಮಾಡಲು ಹೇಸುವೆಮ್ಮ ಸೇವೆಯನಿಂದು ಅವರು ಮಾಡುತಲಿಹುದೆ ಅವರಿಗಂಟಿದ ಹೊಲೆಯೆ? ಸಲ್ಲದಿಲ್ಲದ ಸತ್ತ ಶಾಸ್ತ್ರದಾಧಾರವನು ಕೊಟ್ಟು, ಅ...

ಹಸಿವು ಹಸಿವೆಲ್ಲೆಲ್ಲು ಹಸಿವು ಹಸಿವು ಎಲ್ಲರನು ಆಡಿಸಿ ಪೀಡಿಸುತಿಹುದು ಹಸಿವು. ರಾಷ್ಟ್ರನಾಯಕರಿಗೆ ರಾಜ್ಯಗಳಿಕೆಯ ಹಸಿವು ಸೇನಾಧಿಪತಿಗಳಿಗೆ ಸಮರಕೀರ್ತಿಯ ಹಸಿವು ವಣಿಕೆರಾಜರಿಗೆಲ್ಲ ಲಾಭಕೊಳ್ಳೆಯ ಹಸಿವು; -ಅದರಿಂದ ನಮಗೆ ಹಸಿವು! ಮಲಗಿದ್ದ ರಣಮಾರಿ...

ಎಂಥ ಬಾಳಿದು ಬಾಳು, ಚಿಂತೆಯೇ ತುಂಬಿ ನಿಂತು ನಿಟ್ಟಿಸೆ ವೇಳೆಯಿಲ್ಲದಿರೆ ನಮಗೆ. ಮರದ ಅಡಿಯಲಿ ನಿಂತು ಕುರಿ ಹಸುಗಳಂತೆ ಮರೆತು ಮೈಯನು, ನೋಡಲೆಮಗೆ ಹೊತ್ತಿಲ್ಲ. ಕಾಡಿನೆಡೆ ಸುಳಿದಂದು, ತಾವಾಯ್ದ ತಿನಿಸುಗಳ ಗೂಡಿಗೊಯ್ಯುವ ಅಳಿಲ ನೋಡೆ ಹೊತ್ತಿಲ್ಲ. ಇ...

ಶ್ರಾವಣದ ಶನಿವಾರ ನಮ್ಮ ತಂದೆಯು ನಾವು ಅಣ್ಣತಮ್ಮಂದಿರೆಲ್ಲ ಹಣೆಗೆ ನಾಮವ ತಿದ್ದಿ, ತಾಳ ತಂಬೂರಿ ಮದ್ದಲೆ ವಾದ್ಯಗಳ ಜೊತೆಗೆ ಎಲ್ಲ ದೇವರ ನಾಮಗಳ ಬಲ್ಲ ರೀತಿಯಲಿ ಹಾಡುತ್ತ, ‘ಸಂಚಾರ’ ಹೊರಟು, ಮನೆ ಮನೆಗೂ ಹೋಗಿ ಬಿಕ್ಕೆಯ ಬೇಡಿ ತಂದ ಬೀಯವನೆಲ್ಲ ಕಡೆಯ...

ಹಬ್ಬ ಬಂತು, ಓ ಹಬ್ಬ! ಕೆಳೆಯರೇ, ತೋರಣ ಕಟ್ಟೋಣ! ಹಬ್ಬ ಹಬ್ಬಕೂ ಮನೆಯ ಬಾಗಿಲಿಗೆ ತೋರಣ ಕಟ್ಟೋಣ! ಮಾವಿನ ತೋಪಿಗೆ ಬನ್ನಿರಿ, ಕೆಳೆಯರೆ, ತೋರಣ ಕಟ್ಟೋಣ; ಬೆಳಗಿನ ಜಾವ ಮುಗಿಯುವ ಮುನ್ನ ತೋರಣ ಕಟ್ಟೋಣ! ಚುಕ್ಕಿಯಾಗಸದೆ ಮಾಸುವ ಮುನ್ನ ತೋರಣ ಕಟ್ಟೋಣ; ...

ಸ್ವತಂತ್ರ ಭಾರತದರುಣೋದಯದ ಮುಂಗಿರಣವದೋ ಮೂಡುತಿದೆ; ಶತಮಾನದ ಮೇಲಿನ ಕಡು ದಾಸ್ಯದ ಭಂಗಗೈದ ತಮವೋಡುತಿದೆ. ಸ್ವಾತಂತ್ರ್‍ಯದ ಹರಿಕಾರರು ಮಲಗಿದ ಜನರನೆಚ್ಚರಿಸ ಬಂದಿಹರು; ಚಾತಕದೊಲು ಬಾಯ್ ಬಿಡುತಿಹ ಜನಕೆ ಒಸಗೆ ಭರವಸೆಯ ತಂದಿಹರು. ಇನ್ನೂ ಮಲಗಿರಲೇನು ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...