Home / Parvatidevi Hegade

Browsing Tag: Parvatidevi Hegade

ಕೊಳ್‌ತಾಯೆ ವಂದನೆಯ ಮಹಿಳೆಯರ ಕಣ್ಮಣಿಯೆ ತ್ಯಾಗದಿಂ ಜೀವನವ ನಂದನನ ಗೈದಿರುವೆ ನಿನ್ನ ಮಂಗಲನಾಮ ಕೊಂಡಾನು ಮನದಣಿಯೆ! ಬಾಳ ಮರದಲಿ ನೀನು ಫಲವಾಗಿ ಮಾಗಿರುವೆ ನಿನ್ನ ಜೀವನವೊಂದು ತಪದ ರೂಪದೊಳಿಹುದು ನಲುಮೆ ಒಲಮೆಗಳಿಂದ ನವನಾಕವಾಗಿಹುದು ನರಕದಲಿ ನಿಂತರ...

ತಪ್ಪೊ ಒಪ್ಪೊ ಹೇಳ್ವುದೆಂತು ? ಅಹಲ್ಯೆ ಜಾರಿಬಿದ್ದಳು ಸುರಪ ಮತಿಹೀನನಾದ ಅಳಲಿನಲ್ಲಿ ಬಿದ್ದಳು ಋಕ್ಷ ಜೀವನಕ್ಕೆ ನೊಂದ ಕುವರಿ ಬಾಯಿ ತೆರೆದಳು ಭೀರು ನೊಂದು ಬೆಂದು ಪಾಪ ಶಕ್ರನೊಡನೆ ಬೆರೆತಳು ಅತ್ತಳೇನು ಶಾಪಕವಳು? ನೊಂದಳಯ್ಯೊ ಪಾಪಕೆ ಎದೆಯನೊಡೆದು ...

ಏಕೆ ಗೋವರ್ಧನವೆ ಹೆಬ್ಬಾವಿನಂದದಲಿ ಮಬ್ಬಾಗಿ ಮಲಗಿರುವೆ ಚಿಂತೆಯಲ್ಲಿ ಮೈಗೆ ಸರಿಯಿರದೇನು? ಏಕೆ ಬಾಡಿಹೆ ಹೇಳು? ನೋವು ಮೂಡಿದೆ ನಿನ್ನ ಗೆಲುಮೊಗದಲಿ ಬಾಲ ಗೋಪಾಲಕರ ಕಳೆಯು ತಪ್ಪಿದುದೆಂದು ನಿಡುಸುಯ್ದು ಸೊಪ್ಪಾಗಿ ಸೊರಗಿರುವೆಯಾ? ಗೋಸಲೀಲೆಯಕಾಂಬ ಸೌಭ...

ನೂರುಬಣ್ಣಗಳ ಉಟ್ಟು ನಲಿಯುವವು ಮೋಡ ಹೊಳೆಯುಹಳ್ಳ ನಿನಗೆ ತಂದಿರಲು ಬಣ್ಣದಾಟಿಗೆಯ ಅಲ್ಲವೇನು ಕಳ್ಳ ಕಣ್ಣನೆಳೆವ ಬಣ್ಣಗಳು ಹೂವ ಮೆರು- ಗನ್ನು ಹೆಚ್ಚಿಸುವವು ಏಕೆ ಎಂಬುದನು ಬಲ್ಲೆ ಬಾಳಣ್ಣ ನಿನ್ನ ಮೆಚ್ಚಿಸುವವು ನಿನ್ನ ಕುಣಿಸಲೆಂದಾನು ಹಾಡುತಿರೆ ಎಲ...

ಇರುಳೆಲ್ಲ ಹಣ್ಣಾಗಿ ಬೆಟ್ಟಿಂಗಳಾದಂತೆ ಬೇಸಿಗೆಯ ಬಿಸಿ ಬಾನಬಸಿರಿನಲ್ಲಿ ಕಡಲೆದೆಯ ಉಪ್ಪುಂಡು ನೀರ ಮುತ್ತಾದಂತೆ ಚಿಗುರೇಳುವೊಲು ಮಣ್ಣ ಮಾಸಿನಲ್ಲಿ ನಂಜೆದೆಯ ಆಳದಲಿ ಮಡಗಿದ್ದ ಕಾರುಣ್ಯ ಝರಿಯೆದ್ದು ಮೇಲಕ್ಕೆ ಹರಿದಹಾಗೆ ಹೂವಗಲ್ಲಕೆ ಸೂಜಿದುಟಿಯು ತಾಕ...

“ಬಾರದಿರು ನಾನೂರು ಗೋವುಗಳು ಸಂಖ್ಯೆಯಲಿ ನಾಲ್ಕು ಸಾವಿರವಾಗಿ ನಲಿದಾಡುತಿರುವನಕ” ಎಂಬ ಗುರುವಾಣಿಯನು ನಿನ್ನ ತಲೆಯಲಿಹೊತ್ತು ಏಕೆ೦ದು ಏನೆಂದು ಮರುಮಾತನಾಡದೆಯೆ ಧೇನುಗಳ ಮುಂಕೊಂಡು ಹಿಂದುಮುಂದಿಲ್ಲದೆಯೆ ಗುರು ದೈವ ಸಮವೆಂದು ಅವನ ಒತ್...

ಕಳವಳದ ಮೂರ್ತಿ ತಾ ಕಂಗೆಟ್ಟು ನಿಂತಿಹುದು ತಳಮಳಕೆ ತೀರವೆಲ್ಲಿರುವದವನ ಹುಳುವು ಹುಪ್ಪಡಿಗಿಂತ ಕೀಳಾದಬಾಳುವೆಯ ಅಳುತಬಾಳುತ್ತಿಹನು ಸಾವಬಯಸಿ ಗೇಣು ಹೊಟ್ಟೆಯ ತುಂಬೆ ಬೊಟ್ಟು ಬಟ್ಟೆಯ ಹೂರೆಯೆ ಪ್ರಾಣವನೆ ಒಪ್ಪಿಸಿಹ ಸಿರಿವಂತಗೆ ಗಾಣದೊಳು ಸಿಕ್ಕಿರುವ ...

ಬಾಳ ಬಣವೆಯ ಕೆಳಗೆ ಮತ್ಸರದ ಕಿಡಿ ಹೊತ್ತಿ! ಸುಟ್ಟು ಹಾಕುವುದಯ್ಯೋ! ನಿರ್ಬುದ್ದ ಕಿಡಿಗೇಡಿ ದೌರ್‍ಮನಸ್ಯವು ಒಂದು ದುಡಿಯುತಿದೆ ಸಂತತವು ಆನಂದವನು ಕೆಡಿಸಿ ದುಮ್ಮಾನವನು ಬೆಳೆಸಿ ಸೈತಾನ ನೃತ್ಯವನು ಹಾಕುತಿದೆ ಧೀಂಕಿಟ್ಟು ಋತವೆಲ್ಲ ಕಾಲ್ದೆಗೆದು ಹಾಳ...

ಮೈ ತೊಳೆದು ಗಂಗೆಯಲಿ ಮನವೆಲ್ಲ ಮಡಿಯಾಗಿ ಅವಕಾಶವೆಲ್ಲವನು ತುಂಬಿದರು ದೇಗುಲದಿ ಸಾಕಾರ ನಾಗಿರುವ ವಿಶ್ವೇಶ ನಿನ್ನಡಿಗೆ ಶರಣಾಗಿ ಬಂದಿಹುದು ಈ ಜೀವ ಈ ಬಾಳ ನಿನ್ನಡಿಗೆ ಮುಡುಪಾಗಿ ನಿಲಿಸುವಂತಹ ಮನವ ನೀಡೆನೆಗೆ ಕಾರುಣ್ಯರೂಪನೇ! ತಾಮಸದ ಕಜ್ಜಳವ ಕಳೆದೊ...

ಯಾಕೆ? ಎಂದೆ ಕೇಳ್ವರೆಲ್ಲ ನೋವ ಮರೆಸರು ಎಂತು ಎಂದು ಮೂಗಮೇಲೆ ಬೆರಳನಿಡುವರು ಗುರುವೆ ನೀನು ಮಾತ್ರ ಎನಿತು ಕೇಳಲಿಲ್ಲವು ಪಾಪಿ , ಎಂದು ನಿನ್ನ ದಿಟ್ಟ ತೊರೆಯಲಿಲ್ಲವು ನಿನ್ನ ಮಮತೆ ನನ್ನ ಮೂಕ- ನನ್ನು ಮಾಡಿದೆ ಮನದ ಮುದುಡನೆಲ್ಲತಿದ್ದಿ ರೂಪ ನೀಡಿದೆ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...