“ಬಾರದಿರು ನಾನೂರು ಗೋವುಗಳು ಸಂಖ್ಯೆಯಲಿ
ನಾಲ್ಕು ಸಾವಿರವಾಗಿ ನಲಿದಾಡುತಿರುವನಕ”
ಎಂಬ ಗುರುವಾಣಿಯನು ನಿನ್ನ ತಲೆಯಲಿಹೊತ್ತು
ಏಕೆ೦ದು ಏನೆಂದು ಮರುಮಾತನಾಡದೆಯೆ

ಧೇನುಗಳ ಮುಂಕೊಂಡು ಹಿಂದುಮುಂದಿಲ್ಲದೆಯೆ
ಗುರು ದೈವ ಸಮವೆಂದು ಅವನ ಒತ್ತಾಸೆಯಲಿ
ಅಚಲ ಶ್ರದ್ದೆಯನಿಟ್ಟು ಸತ್ಯಕಾಮನು ಆಗಿ
ಪೂರ್ಣ ಸತ್ಯವನರಿದ ಹಿರಿದುಸಾಧಕ ನೀನು

ನಿನ್ನ ಬೈ ಜಾಬಾಲೆ ಸಾಮಾನ್ಯದವಳಲ್ಲ
ನಿನ್ನ ಹೂತ್ತದರಿಂದ ಆಯ್ತವಳ ಗರ್ಭಶುಚಿ
ಸತ್ಯಕಾಮನು ಮೊದಲು ಸತ್ಯನಾಗಿರಬೇಕು
ಎಂದು ನುಡಿಯದೆ ನಡೆದು ತೋರಿಸಿದ ಋಷಿವರ್ಯ

ಋಷಿಮೂಲ ಅರಸುವದು ಹೊಲ್ಲವೆನುವದು ಇದಕೆ
ಸತ್ಯವನ್ನುಂಡುಣಿಸಿದವ ನೀನು ಹೀನನೇ?
*****