Home / Letters

Browsing Tag: Letters

ಪ್ರಿಯೆ ಈಸೂರಿನಿಂದ ಬರೆದ ಪತ್ರ ನಿನಗೆ ತಲುಪಿರಬಹುದು. ಅವಸರದಲ್ಲಿ ಬರೆದೆ. ಇದೀಗ ವಿವರಯುತ ಪತ್ರವನ್ನು ಹಂಸಭಾವಿಯಲ್ಲಿ ಮರದಡಿಯಲ್ಲಿ ನಿಂತಿರುವ ಕಾರಿನ ಒಳಗಡೆ ದಿಂಬಿಗೆ ಆತುಕುಳಿತು ಬರೆಯುತಿರುವೆನು, ಊಟದ ಹೊತ್ತಿನ ವರೆಗೂ ಬರೆಯುವನು.ಈಗ ಮುಂಜಾನ...

ಪ್ರಿಯ ಸಖಿ, ಮುಂಜಾನೆ ಒಂದು ಪತ್ರವನ್ನು ಬರೆದೆನು. ಆದರೆ ಇಂದು ಸಂಜೆಯೇ ಈ ಪತ್ರ ಪುನಃ ಬರೆಯುತ್ತಿರುವನು. ಅದೂ ಪ್ರಿಯಸಖಿ ಎಂದು ಸಂಬೋಧಿಸಿ ಈ ಸಂಬೋಧನೆಯು ಬಹು ಅಮೂಲ್ಯ ಪವಿತ್ರ ಪ್ರೇಮದಿಂದ ಹೊರಹೊರಟಿದೆ. ‘ಗೀತಗೋವಿಂದ’ ಚಿತ್ರನೋಡಿ...

ಜೀವ ಸ್ನೇಹಿತೆ, ಇಂದೇನು ಬರೆಯಬೇಕೆಂದು ತಲೆಕೆರೆದುಕೊಂಡಾಗ, ನೀನು ಒಂದೆರಡು ವರುಷಗಳ ಹಿಂದೆ, ಕಾಲೇಜಿನ ವಿದ್ಯಾರ್ಥಿನಿಯಾಗಿ ಜೊತೆಗೆ ಮಕ್ಕಳ ತಾಯಿಯಾಗಿ ಓದುತ್ತಿದ್ದಾಗ ಮೈಸೂರಿನಿಂದ ಬರೆಯುತ್ತಿದ್ದ ಪತ್ರದ ರಾಶಿಯನ್ನು ಹರವಿಕೊಂಡೆನು. ಕೈಗೆ ಸಿಕ್ಕ...

ನಿನಗೆ ಮತ್ತೊಂದು ಪತ್ರ ಬರೆಯಬೇಕೆಂದು ನಾನು ದಿನದ ಕೆಲಸದಿಂದ ಬಿಡುವು ಮಾಡಿಕೊಂಡು ಕುಳಿತು ಕೊಳ್ಳಬೇಕೆಂದಿದ್ದೆ. ಅಂದು ಬೆಂಗಳೂರಿನಲ್ಲಿ ಸಾಲು ಸಾಲಾಗಿ ನೆತ್ತಿಗೇರಿದ್ದ ಚಿತ್ರಗಳನ್ನು ಅರ್ಧ ಚಿತ್ರಿಸಿ ಮುಗಿಸಿದ್ದ ಪತ್ರವನ್ನೇ ಇಂದು ಮುಂದುವರಿಸಲು...

ಪೂರ‍್ಣೀ, ನಾನು ನಿನಗೆ ತಿಳಿಸದೆ, ನನ್ನ ವಿಷಯವಾಗಿಯೇ ನೀನು ನಿನ್ನ ಚಿನ್ನ ತಂಗಿ ಆಶಾಳೊಂದಿಗೆ ಮಾತನಾಡುತ್ತಿರುವಾಗಲೇ ನಾನು ಇಳಿದು ಬಂದು ನಿನ್ನ ಮುಂದೆ ಸಾಕ್ಷಾತ್ಕಾರವಾದುದು ನಿನಗೆ ಆಶ್ಚರ್ಯ-ಸಂತೋಷ ಇವೆರಡನ್ನು ಒಮ್ಮೆಲೆ ತುಂಬ ತೀವಿತಲ್ಲವೆ? ಬನ...

ಪ್ರಿಯೆ, ಪ್ರಿಯದರ್ಶಿನಿ, ನಾನು ನಿನ್ನ ಪತ್ರಗಳಿಂದ ನಿರೀಕ್ಷಿಸುತ್ತಿರುವುದು ಸಮಸ್ಯೆಯ ಮೇಲೆ ಸಮಸ್ಯೆಗಳನ್ನಲ್ಲ. ನಿಜವಾದ ಸುಖದ ವ್ಯಾಖ್ಯೆಯನ್ನು ಕೇಳಿ ಅದಕ್ಕೆ ಉತ್ತರ ಪಡೆದ ಮರು ಪತ್ರದಲ್ಲೇ ಮತ್ತೊಂದು ಮಹಾಸಮಸ್ಯೆಯನ್ನು ನನ್ನ ಮುಂದೆ ತಂದೊಡ್ಡಿರ...

ನಳಿನ ನಯನೆ, ಎಲ್ಲವೂ ತಿಳಿಯಿತು. ಸ್ವಲ್ಪ ಸಮಾಧಾನದಿಂದ ಪತ್ರವನ್ನು ಬರೆದಿರುವಂತಿದೆ. ರಘು ನಗುತ್ತಿರಬಹುದು? ಲೀಲ ಹಠಮಾಡಿ ಮೋರೆಯುಬ್ಬಿಸಿ ಗೊಂಡಿಲ್ಲದಿರಬಹುದು? ಉದಯ ಸರಿಯಾಗಿ ಶಾಲೆಗೆ ಹೋಗುತ್ತಿದ್ದಿರಬಹುದು? ಇವೆಲ್ಲವೂ ಸರಿಯಾಗಿದ್ದಾಗ ಕುಳಿತು ...

ಒಲುವಿನ ಚಿಲುಮೆ, ನಿನ್ನ ಪತ್ರ ಬಂದು ತಲುಪಿತು. “ನೀವಾದರೂ ರಸವತ್ತಾದ ಪತ್ರ ಬರೆದು ನನ್ನ ಮನಸ್ಸನ್ನು ಶಾಂತಪಡಿಸಿರಿ.” ಎಂದು ಕೇಳಿಕೊಂಡಿರುವಿ. ನೀನಿಲ್ಲದ ನನ್ನ ಜೀವನದಲ್ಲಿ ರಸ ಒಸರುವುದೆಂತು? ಪತ್ರಗಳು ರಸವತ್ತಾಗ ಬಲ್ಲವೆಂತು? ದುಂಬಿ ಝೇ...

ಏಕೆ ನನ್ನೊಡತಿ, ಮನಸ್ಸಿಗೆ ಬಹುವಾಗಿ ಹಚ್ಚಿಕೊಂಡಂತಿದೆ? ನಿನ್ನ ಪತ್ರವನ್ನು ನೋಡಿದರೆ ಗಾಬರಿ, ದುಃಖ, ಕಷ್ಟ ಎಲ್ಲವನ್ನೂ ಮೇಳವಿಸಿಕೊಂಡು ಬರೆದಂತಿರುವುದು. ಹೋಗುವಾಗ ನೀನು ನನಗೆ ಕೊಟ್ಟ ಅಭಯದಾನವನ್ನು ಮರೆತೆಯೇನು? “ನನ್ನ ಸೀರೆಯನ್ನು ವೀರಗ...

ಹೃದಯೇಶ್ವರಿ. ಏಕಾಕಿಯಾಗಿರುವೆ, ಹೆದರಬೇಡ, ಧೈರ್ಯವಾಗಿರು ಎಂದು ಒಂದು ಮಾತನ್ನೂ ನಿನಗೆ ಬರೆಯದೆ ನಾನು ಮತ್ತು ನನ್ನ ಕೆಲಸ ಇಷ್ಟನ್ನೇ ಕುರಿತು ಬರೆಯುತ್ತಿದ್ದರೆ ನಿನಗೆ ಕೋಪ ಬಂದಿರಬಹುದು. ಅದರಿಂದಲೆ ಒಂದು ವಾರವಾಗಿದ್ದರೂ ನೀನು ಪತ್ರವನ್ನೇ ಬರೆದಿ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...