Home / Kaviya Solu

Browsing Tag: Kaviya Solu

ಕಾಲವಾಹಿನಿಯಲ್ಲಿ ಸಿಕ್ಕಿ ನಾವೆಲ್ಲಿಗೋ ತೆರಳುತಿಹ ಭೀತಿಯಿಹುದು ; ಮೇಲ್ಮೇಲೆ ವಿಷವೀಚಿ ಮಾಲೆಗಳು ನುಗ್ಗುತ್ತ ಬರುತಿಹವು ಕೊಚ್ಚುತಿಹವು. ಕುರುಡಾದ ನಿಯಮವೊ ಕುಂಟಾದ ವಿಧಿಗಳೋ ಈವರೆಗೆ ಪೊರೆದುವಯ್ಯ; ಹರಿದು ಹೋಗಿಹವೀಗ ರಕ್ಷಣೆಯ ಬಂಧಗಳು ಕಾವುದನು ಕ...

ಕಲ್ಲು ತಂದು ರೂಪುಮಾಡಿ ದೇವನೆಂದು ಕರೆದು ನಿನ್ನ ಎಲ್ಲ ಜಗದ ಒಡೆಯನಾಗಿ ಕಾವುದೆಂದೆನು. ಮೆಯ್ಯ ತೊಳೆದು ಹಾಲನೆರೆದು ಹೂವು ಮುಡಿಸಿ ಗಂಧವಿಕ್ಕಿ ತುಯ್ಯಲಿಟ್ಟು ದೀಪವಿಟ್ಟು “ದೇವ” ಎಂದೆನು. ನಾನು ಮಾಡೆ ನೀನು ಆದೆ ನಾನು ಕಟ್ಟೆ ನಿನಗೆ...

ಮರದ ನೆಳಲ ತಂಪಿನಲ್ಲಿ ಮೆಲ್ಲ ಮೆಲ್ಲನೇರುತಾ ಗಿರಿಯ ಕಳೆದು ಸಂಜೆಯಲ್ಲಿ ಕಚನ ಮನದಿ ಬಯಸುತಾ ನಡೆದಳವಳು ದೇವಯಾನಿ ಪ್ರಣಯ ಭರದಿ ಕುಗ್ಗುತಾ ಬಿನದ ಬನದ ನಡುವೆ ನಿಂದು ಕಣ್ಣನೀರು ಸುರಿಸುತಾ ಸಂಜೆಗೆಂಪ ತಳಿರುಗೆಂಪ ತುಟಿಯ ಕೆಂಪು ಮೀರಲು ಅಲರ ಕಂಸ ಎಲರ ...

ಮೇರುಗಿರಿಯೊಂದು ದಿನ ಗರ್ವದಿಂ ತಲೆಯೆತ್ತಿ ಕೆಂಗದಿರ ಹೊಂಗದಿರ ಜಿಹ್ವೆಯಲಿ ನುಡಿಯಿತ್ತು “ಈರೇಳು ಲೋಕಗಳಿಗಾಧಾರವಾಗಿಹೆನು, ಎಲ್ಲಮಂ ಧರಿಸಿಹೆನು ; ಸೂರ್ಯತಾರೆಗಳೆನ್ನ ಬಳಿವಿಡಿದು ಸಂಚರಿಸಿ ನಾನಿಟ್ಟ ಶಾಸನವ ಎಳ್ಳನಿತು ಲಂಘಿಸವು”. ಈ...

ನಾವು ಬಡಜೀವಿಗಳು ನೀವು ಮಾತಪಸ್ವಿಗಳು ದೃಷ್ಟವನ್ನು ತೋರಿರಯ್ಯ ; ಕಣ್ಕಟ್ಟು ಮಾಯೆಯೋ ಸೃಷ್ಟಿ ಸಾಮರ್ಥ್ಯವೋ ಒಂದನ್ನು ತೋರಿರಯ್ಯ. ಹಿರಿಯ ಮರಗಳನಾಳ್ವ ಯತಿವರರು ಕೆಲರುಂಟು ಡಂಬದಲಿ ಮೆರೆವರುಂಟು; ಉಪವಾಸ ನಿಯಮದಲಿ ಜಗವ ಜಯಿಸುವರುಂಟು ಒಳಬೆಳಗ ಕಾಣ್ಬ...

ಜಟಕಾ ಹೊಡೆಯುವ ಕೆಲಸವ ಬಿಟ್ಟು, ಹೆಂಡಿರ ಮಕ್ಕಳ ಎಲ್ಲರ ಬಿಟ್ಟು ತಟ್ಟನೆ ಬಲು ವೈರಾಗ್ಯವ ತೊಟ್ಟು ನಡೆದೇ ನಡೆದನು ಜಟಕಾ ಸಾಬಿ ಸಾಬಿಯ ಜನರಲಿ ರಂಗು ಗುಲಾಬಿ. ಹೆಂಡಿರು ಮಕ್ಕಳು ಹುಡುಕಾಡಿದರು ಪೇಟೆಯ ಸಾಬಿಗಳಲೆದಾಡಿದರು. “ಅಯ್ಯೋ ! ಹೋದನೆ ನ...

ಅಂತರಂಗದ ಶಕ್ತಿ ವಿಶ್ವನಾಳುವ ಶಕ್ತಿ; ಅಂತರಂಗದ ದೀಪ್ತಿ ವಿಶ್ವ ಬೆಳಗುವ ದೀಪ್ತಿ- ನಡುವಿರುವ ಮಾಯೆಮೋಹವನೆಲ್ಲ ಕಳಚಯ್ಯ. ಸ್ಥೂಲ ಸೂಕ್ಷ್ಮದ ಭಾರ ಪಂಚಭೂತದ ಭಾರ, ಕಾಲಪಾಶದ ಉರುಲು ಪಂಚೇಂದ್ರಿಯಗಳುರುಲು- ಆತ್ಮ ಪಕ್ಷಿಯ ಕಾಲ್ಗಳಿಂ ತೆಗೆದು ಬಿಸುಡಯ್ಯ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...