ಏಳೆನ್ನ ಮನದನ್ನೆ, ಏಳು ಚೆನ್ನಿಗ ಕನ್ನೆ ಏಳು ಮೂಡಲ ಕೆನ್ನೆ ಕೆಂಪಾಯಿತು. ಬಾಳ ಬೃಂದಾವನದಿ, ನಾಳೆಯೊಲವಿನ ರವದಿ, ಆಸೆ ಮರೆಯುತಲಿಹುದು ಕಳೆದ ನಿನ್ನೆ! ಕೊಳದ ನೀರಲಿ ಶಾಂತಿ ಮೂಡಿಹುದು, ರವಿ ಕಾಂತಿ ಬೆಳ್ಳಿಯಲೆಗಳ ಭ್ರಾಂತಿ...
ಸುಂದರತೆಯಾನಂದ ಅಮರವೆಂದನು ಅಂದು ಕವಿ ಕೀಟ್ಸು ಕಲ್ಪನೆಯ ಕನಸಿನಲಿ ಮೈಮರೆತು; ನನಸಿನಲಿ ತಾನೊಲಿದ ಸೌಂದರ್ಯದಲಿ ಬೆಂದು, ಅದು ತನಗೆ ದೊರಕದೆಯೆ ಸಾಗಿಹೋಗುವುದರಿತು ಸಾವ ಸುಖ ಬಯಸಿದನು ! ತಂಗಾಳಿ ಬೀಸುತಲಿ ಹೊತ್ತು ತರುವಂದದಲಿ ಹೊಸ...