
ನನ್ನೆದೆಯ ಬಾಗಿಲನು ಮುಚ್ಚಿ ನಿದ್ರಿಸುತಿದ್ದೆ ಜೀವನದಿ ತಿರುಳಿಲ್ಲವೆಂಬ ಭ್ರಮೆಯೊಳಗೆ ದೇವ ನೀನೈತಂದು ಬಾಗಿಲನು ಬಡಿಯೆ ನಾ ಸಿಡುಕಿನಿಂದಲೇ ಕೇಳ್ದೆ “ಯಾರು ಅದು” ಎಂದು! ೧ ಮೌನದಲಿ ಮತ್ತೊಮ್ಮೆ ಶಬ್ದ ಮಾಡಲು ನೀನು ನಾನೆದ್ದೆ ಕೋಪದ...
ನಾಲ್ಕು ವರ್ಷದ ಕಾಲ, ನಕ್ಕು ನಲಿದಾಡಿದೆವು ಕೂಡಿ ಕಲಿತೆವು, ಒಡನೆ ಕುಣಿದಾಡುತ ಕಂಡ ಕನಸುಗಳೇನು! ಆಡಿದಾಟಗಳೇನು! ಕೊನೆಯುಂಟೆ, ಮೊದಲುಂಟೆ, ಕನಸೆ ಜೀವ! ಉಗಿಯ ನಿಲ್ದಾಣದಲಿ ನೂರಾರು ಎಡೆಯಿಂದ ಜನರ ಜಂಗುಳಿ ನೆರೆದು ಚಣಗಳೆರಡು ಉರುಳೆ ಹಾದಿಯ ಹಿಡಿದು...
ನೆರಳನರಸುವ ಕೂಸು ತನ್ನ ಎಳೆ ಕೈಗಳಲಿ ಅದ ಹಿಡಿದು ತನ್ನೊಡನೆ ಆಟಕುಪಯೋಗಿಸುವ ಎಳೆ ಚಪಲಕೀಡಾಗಿ-ಹಿಗ್ಗಿನಲಿ ಓಡುತಲಿ ಅದರೆಡೆಗೆ ನಡೆದಾಗ, ನೆರಳು ಕೈಗಳ ಹಿಡಿತ ತಪ್ಪಿಸುತ ಜಾರಿರಲು, ಕಣ್ಣೀರ ಕರೆಯುತ್ತ ತಾಯ ಮಡಿಲಲಿ ತನ್ನ ದುಗುಡ ಹರಿಸುವ ಹಾಗೆ, ಸಂತ...
ಮನಸಿನಾಗಿನ ಭಾವಗಳಂತೆ ಮರದ ಮೇಲಿನ ಚಿಗುರೆಲೆಯೆಲ್ಲ ತೂರಿಬಂದ ಗಾಳಿಯಲ್ಲಿ ಕುಣಿಯುತಿತ್ತು-ಬಳುಕಿ ಬಳುಕಿ-ಕುಣಿಯುತಿತ್ತು. ತುಟಿಯ ಮೇಲಿನ ಮುಗುಳಿನ ಹಾಗೆ ಸುತ್ತ ಹಾಸಿದ ಹಸುರಿನ ಮೇಲೆ ಹಾರಿಬಂದ ಚಿಟ್ಟೆ ದಂಡು ಜಿಗಿಯುತಿತ್ತು-ನಲಿದು ನಲಿದು-ಜಿಗಿಯು...
(ಹುಡುಗಿಯರ ನಗು ಕೇಳಿ ಬರೆದುದು) ಮಲ್ಲಿಗೆಯ ಮೊಗ್ಗುಗಳ ರಾಸಿ ಅರಳಿರಲದರ ನಡುವೆ ಅರೆ ಎಚ್ಚರದಿ ಇರವನೇ ಅರೆಮರೆತು ಕಂಪಿನಿಂದಾತ್ಮವನು, ಹೃದಯವನು, ತುಂಬಿಸುತ ಬೇರೊಂದು ವಿಶ್ವವನೆ ಸೇರಿದಂತಾಗುವುದು ನಿಮ್ಮ ಕಿಲಕಿಲ ನಗುವು ದೂರದಿಂ ಗಾಳಿಯಲಿ ತುಂಬಿ ...
ಎಣ್ಣೆಗೆಂಪಿನ ಮೇಲೆ ಹಾಲ್ಕೆನೆಯ ಲೇಪನದ ಕೆನ್ನೆಯೇನಲ್ಲ, ಹೂ ಮೃದುತೆಯೇನಿಲ್ಲ! ತುಟಿ ಬಹಳ ಕೆಂಪಿಲ್ಲ! ಕಂಡೊಡನೆಯೇ ಸೆಳೆವ ಮೆಲುನಗುವು ಅದರ ಮೇಲ್ಸುಳಿದುದೇ ಇಲ್ಲ! ಮಾತುಗಳಲೇನಂಥ ಮಾಧುರ್ಯವೇನಿಲ್ಲ ಬೆಡಗು ಬಿನ್ನಾಣಗಳು ಚೆಲುವಿಕೆಯು ಇಲ್ಲ! ಕವಿಗಳ...
ಜಗವೊಂದು ಬಂದರೀ ಜೀವಸಾಗರದಲ್ಲಿ ಹಡಗುಗಳು ಐತಂದು ಕೂಡುವುವು ದಿನವು, ತೆರತೆರದ ಜನರಿಹರು-ವಿಧವಿಧದ ಭಾಷೆಗಳು ಚಣಕಾಲ ಸಂಧಿಸುತ ಮೆರೆವುವಲ್ಲಿ! ನಾಲ್ಕು ದಿನಗಳ ಜೀವ, ಒಂದಿರುಳ ಪ್ರೇಮ! ಮುಂದೆಲ್ಲಿಗೋ ಪಯಣ, ಎಂದೊ ಮಿಲನ? ಪಯಣದಲಿ ಸಾಗರದಿ ಕಡುತೆರೆದ ...
ಕನಸು ನನಸುಗಳೆಲ್ಲ ಯಾರಿಗೋ ಮುಡಿಪಾಗಿ ಹಾಡುಗಳಲೆಲ್ಲೆಲ್ಲು ಯಾರದೋ ಛಾಯೆಯೇ ಮೂಡಿರಲು “ಇದು ಯಾರೋ?” ಎನುತ ಕಾತರರಾಗಿ ಗೆಳೆಯರೆಲ್ಲರು ನನ್ನ ಕಾಡುತಿರೆ, ನಿನ್ನನ್ನೇ ಬಣ್ಣಿಸಲು ಹೊರಟಿಹೆನು – ನಿನ್ನ ನೆನವಿನಲೆನ್ನ ಮನದ ಮಾತುಗ...














