ಹಸಿದ ಹೊಟ್ಟೆಯ ಹೇರ ಹೊರಲಾರದಿಹ ಜನರ ಕಾಸಿನಾಸೆಯ ತೋರಿ ಹೇಸಿಗೆಯ ನರಕದಲಿ ದೂಡಿದುಡಿಸುವ ದುಡ್ಡಿನಪ್ಪಗಳ ವಿಶ್ವವನು, ನಾಗರಿಕ ಜೀವನದ ಮೇಲ್ಮುಸುಕ ಮರೆಯಲ್ಲಿ ಬಚ್ಚಿಟ್ಟ ಬ್ರಹ್ಮಾಂಡ ಬಯಲು ಮಾಡಿದ ಬ್ರಹ್ಮ ೫ ಸಿಂಕ್ಲೇರ ಅಪ್ಟನನೆ ನಿನಗೆ...
ನನ್ನ ಜೀವನ ನದಿಯ ಎದೆ ಮೊರೆತ ಶಾಂತತೆಯ ಕಡಲಿನಲಿ ಮರೆಯಾಗಿ, ಕಲ್ಪನೆಯ ಕನಸುಗಳು ವಿಶ್ರಾಂತಿಗಾಗೊರಲಿ ವಿರಹಿಯಾಗಿಹ ಮನವ ಬಿಸಿ ಮುಳ್ಳುಗಳ ಹಾಗೆ ಒತ್ತೊತ್ತಿ ಕಾಡುವುದು ನಿಲ್ಲಿಸಿದ ದಿನದಂದು ಈ ಎಡೆಗೆ ಸಾಗುವೆಯ? ಹೃದಯದಲಿ ಹಾವಿಟ್ಟು...