Home / ನಿರಂತರ

Browsing Tag: ನಿರಂತರ

ಮಿತ್ರನಾಗಲಿ ಶತ್ರುವಾಗಲಿ ಗುರುತಿನವನಾಗಲಿ, ಗುರುತಿಲ್ಲದವನಾಗಲಿ ದೊಡ್ಡವನೆಂದು ತಿಳಿದವನ ಬಡವನೆಂದು ಒಪ್ಪದವನ ಮೇಲೆ ಯಾವದೇ ಕಾರಣದಿಂದ ಅಪಯಶದ ಧೂಳು ಹಾರಿದರೆ ನೀನು ಕಟುವಚನದಿಂದ ಅವನನ್ನು ದೂರುವ ತಪ್ಪು ಮಾಡದಿರು ಇವನು ಹಾಗೇ ಇದ್ದನೆಂದು ನೂರಾರು...

ಹಚ್ಚಿಟ್ಟ ಹಣತೆ ಆರಿ ಹೋಗುವುದು ಗಾಳಿಯ ಸೋಂಕಿಗೆ ಉಸಿರಿನ ಉಫ್‌ಗೆ ನೀರೆಯರ ಸೀರೆಯಂಚಿನ ಸ್ಪರ್ಶಕೆ ದಾರಿದೀಪವಾಗುವ ಹಮ್ಮನು ಬಿಟ್ಟು ಬಯಲಾದಾಗ ನಾನು ಉರಿದು ಬೂದಿಯಾಗುತ್ತೇನೆ ‘ಹಚ್ಚೇವು ಕನ್ನಡದ ದೀಪ’ ಎಂಬ ಹಾಡನ್ನು ಕೇಳುತ್ತ ಕ್ಷಣದಷ್ಟು ತಮದ ಅಲೆ...

ನನ್ನ ಮನದ ಭಾವ ನಿನಗೆಂದು ತಿಳಿವುದು ಗುರುತಿಸುವೆ ಎಂದು ಅಂತರಾಳದ ಪ್ರೇಮ ಗೆಳತಿಯರ ಗುಂಪಿನಲ್ಲಿ ನಿತ್ಯ ನೋಡುವೆ ನಿನ್ನ ದೂರದಿಂದಲೆ, ಮನ ಮಾತ್ರ ನಿನ್ನ ಬಳಿ ಬಳಿಯೆ ಸುಳಿವುದು ಪ್ರಿಯೆ ನನ್ನ ಸ್ವರದ ನೋವೆಂದು ತಿಳಿದು ಸುಳಿಯಗೊಡು ಹತ್ತಿರ ದೂರಗೊಳ...

ನಿನ್ನಳವಿನರಿವು ನನಗಿಲ್ಲ ಹೊನ್ನ ಬಣ್ಣವನು ತಿಳಿಯ ಬೇಕೆಂದಿಲ್ಲ ಚಿನ್ನ! ನಿರಂತರವಾದ ಸ್ವಭಾವ ಗುಣವನು ಪರತಂತ್ರನಾದ ಹುಲು ಮನುಜ ಎಂತು ಬಲ್ಲನು ಹೇಳು. ಅಂದು ಒಂದೆ ನೋಟಕೆ ಬಂದೆ ನನ್ನ ಬದುಕಿಗೆ ನಿನ್ನ ಬಯಕೆ ಅದೇನೋ ನನ್ನ ಬಯಕೆ ನೀನಲ್ಲ…&#8...

ಹಾಳು ಬೀದಿ ಬಸದಿಯಲಿ ಗೋಳು ಕ್ಷಯ ಹಿಡಿದ ಬಾಳಿಗೆ ದೊಂಗಾಲು ಬಿದ್ದು ಕ್ರಿಮಿಗಳೋಪಾದಿ ಕೊಳೆವ ನರ ನಾರಾಯಣರ ಬಾಳು ಬಾಳೆ? ನೋಡಿರೈ ಅವರ ಜೀವಂತ ಮರಣ ಗುರಿರಹಿತ ಪಯಣ ಉದಾಸೀನ ನಯನ, ನಿಶ್ಯಕ್ತ ಹರಣ ಜೀವನದ ಅಲೆದಾಟ ರೇಗಾಟ, ಕೂಗಾಟ, ನಿಜವನ್ನೆ ಸುಳಿವಾಟ...

ಹಾರು ಹಾರೆಲೆ ಚೆಲುವಕ್ಕಿ ಹಾರು, ಬದುಕಿನ ದಿನಗಳ….. ಮರೆತು ಮುಗಿದಿತು ಕಾಲವು ಚೆಲುವಿನ ಕ್ಷಣಗಳ ಮಾಗಿಹ ಮಾವಿನ ಕೊಂಬೆಗಳ, ಊರಿಂದೂರಿಗೆ ಅಲೆಯುವ ಬವಣೆಯ ಅರಿಯಲು ಜೀವನ ಸೆಳಕುಗಳ ಹೆರವರ ಊರಿದು ತಿಳಿಯೆಲೆ ಹಕ್ಕಿಯೆ! ಎರವಿನ ಬಾಳಿದು ತಾಸುಗಳ...

ಗೊಂಚಲಲಿ ಹೂವೊಂದು ನಸುನಗುತಲಿತ್ತು ಹಂತದಲ್ಲಿ ಸ್ಮಿತವನ್ನು ಇಡಲು ಬಯಸಿತ್ತು. ಆ ಹೂವ ಹೊಂಬಣ್ಣ ಆ ಹೂವ ಕಂಪನ್ನ – ನೋಡಿತೈ ಬೆಡಗದರ ದೂರಿದ್ದ ಭ್ರಮರ, ಕಾಡಿತ್ಯೆ ಬಳಿ ಬರಲು ಅತಿ ಆಶೆ ಅದರ. ನಸುನಗುವ ವದನವನು ತುಸು ಬಿರಿದ ಅಧರವನು ನಯವಾದ ಗ...

ಜೋಲು ಮೋರೆಯ ಮಾಡಿ ಕಲ್ಲ ಮೇಲೆಯೆ ಕುಳಿತ ನಲ್ಲೆಯೊಬ್ಬಳು – ಬಳಿಯೆ ಹೂವು ಚೆಲ್ಲಿತ್ತು. ಯಾರಿಲ್ಲ ಬಳಿಯಲ್ಲಿ, ಮೇರು ವ್ಯಥೆ ಮನದಲ್ಲಿ ಯಾರದೋ ವ್ಯಸನ, ಆವದೋ ಚಿಂತನ ಮಾರುತನ ಮಂದ ಅಲೆ ತುಂಬುತಿದೆ ಮನ ಜಾರುತಿದೆ ಸೆರಗು, ಏರುತಿದೆ ಮೆರಗು-ಅರಿ...

ಏನು ಲೋಕ ಏನು ಜನ, ಏನು ಶೋಕ ಏನು ಮನ ತಾನು-ತನ್ನದೆಂದು ಜನ, ನೇಹವಿಲ್ಲವಿಂದು ಹಣ! ನೇಹವ ಬಯಸಿತು ತನು ಮನ ಗೇಯವ ಹಾಡಿತು ಅನುದಿನ ಭವದಲಿ ವ್ಯರ್ಥವೆ ಹೋಯಿತು ತವ ತವೆಯುತ ಬಾಳು ಗೋಳಾಯಿತು ಏನದು ಮನದಾ ಮಹದಾಶೆಯು ಮೇಣದು ಮಮತೆಯ ಸುಖದಿಂಗಿತವು ಯಾಕದು...

ನಿನಗೆಂದು ಕವಿತೆಯನು ಬರೆದೆ ಸರಿದ ಮಧು ಚಣದ ರಸ ಸುರಿದೆ ನೀನು ಓದಬೇಕೆಂದು ಓದಿ ತಿಳಿಯಬೇಕೆಂದು ತಿಳಿದು ಉಳಿಸಬೇಕೆಂದು ಉಳಿಸಿ ನಲ್ನುಡಿಯ ಕಳಿಸಬೇಕೆಂದು ಮನಸಿನಲೆ ಬಗೆದು ಕೊರಗಿನಲಿ ಮರೆಯಲಾಗದೆ ಬರೆದೆ ಅದರೊಳಗೆ – ನಮ್ಮೊಲವಿನ ಕಥೆ ಸುಖದ ಸ...

1234...7

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...