ಮಿತ್ರನಾಗಲಿ ಶತ್ರುವಾಗಲಿ ಗುರುತಿನವನಾಗಲಿ, ಗುರುತಿಲ್ಲದವನಾಗಲಿ ದೊಡ್ಡವನೆಂದು ತಿಳಿದವನ ಬಡವನೆಂದು ಒಪ್ಪಿದವನ ಮೇಲೆ ಯಾವದೇ ಕಾರಣದಿಂದ ಅಪಯಶದ ಧೂಳು ಹಾರಿದರೆ ನೀನು ಕಟುವಚನದಿಂದ ಅವನನ್ನು ದೂರುವ ತಪ್ಪು ಮಾಡದಿರು. ಇವನು ಹಾಗೇ ಇದ್ದನೆಂದು ನೂರಾರು ಪುರಾವೆಗಳ...
ಸಾವಿಗೆ ಸ್ವಾಮಿತ್ವವಿಲ್ಲ ಸತ್ತವರು ನಗ್ನರಾಗುವರು ಗಾಳಿಯಲೆಯಲಿ ಸುಳಿವ ಮನುಷ್ಯನಲಿ ಮತ್ತು ಪಶ್ಚಿಮ ಚಂದ್ರನಲಿ ಬೆರೆತು ಹೋಗುವರು. ಅವರ ಎಲುವನ್ನು ಸರಿಯಾಗಿ ಹೆಕ್ಕುವಾಗ ಶುದ್ಧ ಎಲುಬು ಮಾಯಾವಾಗುವುದು, ಅವರ ಮೊಣಕ್ಕೆ ಪಾದಗಳಲಿ ನಕ್ಷತ್ರ ಕಾಣುವುದು; ಹುಚ್ಚರಾಗಿಯು...
ಸೀಮಾಂತ ಪ್ರದೇಶದಲಿ ಕರಗುವ ಶಿಲ್ಪವ ಕಂಡೆ ನಾನು ಸರ್ವದೂರದಲಿ ಹಿಮ ಪ್ರತಿಮೆ ಯಾತನಾಮಯ ಹಿಮಗಂಧ ಸಂಗೀತ ಅಗಾಧ ಹಿಮ ಮಾಯಾ ಮಹಿಮೆ. ಉದುರುವ ಕಲೆ ಶಿಲ್ಪಕೆ ಸಿದ್ಧಿಸಿತೆಂತು ಶುಭ್ರವಿಭೋರ ಕಣ ಸ್ಪಂದನ ರೆಪ್ಪೆ ತೆರವಾದಾಗ...
ಒಂದು ದಿನ ಸಿಟ್ಟಿನ ಭರದಲ್ಲಿ ಪರಮೇಶ್ವರನಿಗೆ ನಾನು ತಾಯಿ ಮೇಲೆ ಬೈದೆ ಅವನುಲೋಕಾಭಿರಾಮವಾಗಿ ಚಕ್ಕನೆ ನಕ್ಕ ಪಕ್ಕದ ಮನೆಯ ಬೋರ ಮುಖವನು ಬರಿದೆ ಕುಗ್ಗಿಸಿ ಅಂಟು ಮೋರೆಯ ಗಂಟು ಹಾಕಿ ಸವಾಲು ಮಾಡಿದ ‘ಯಾಕಯ್ಯ...
ಬಯಲ ಮೇಲೆ ಮೋಡದ ನೆರಳು ಚಲಿಸತೊಡಗುವುದು ಕ್ಷೀಣವಾದ ಸಂಜೆ ಬೆಳಕು ಕ್ಷಿತಿಜದ ಹಿಂದೆ ಕಾಣುವುದು ಮುತ್ತ ಹೊತ್ತಿನ ದಣಿವ ನೆರಳು ಮೆಲ್ಲನೆ ಹುಲ್ಲ ಮೇಲಿಂದ ಸರಿಯುವುದು ಹಸಿ ತಂಗಾಳಿಯಲ್ಲಿ ನೀಲ ಘನದ ಆಭಾಸವಾಗುವುದು ಒಣ...
ನಡು ಹಗಲಿನ ಉರಿ ಬಿಸಿಲಿಗೆ ಬೀದಿಯ ಬದಿಯಲ್ಲಿ ನಾನು ನಿಂತಿರುವೆ ನನ್ನ ಹಿಂಬದಿಗೆ ಮರ ಅದರ ನೆರಳು ನನ್ನೆದುರು ನಿಂತಿದೆ ಮರದ ಕೊಂಬೆ ಕಪ್ಪು, ರೆಂಬೆ ಬೂದು ಕಪ್ಪು, ಎಲೆ ಹಸಿರು, ನೀಲ-ಶ್ಯಾಮಲ ಹೂವು...
ಇಂದಿನಿಂದ ನೂರು ವರ್ಷದ ನಂತರ ನನ್ನ ಕವಿತೆಯನ್ನು ಓದುವಾತ ನೀನು ಯಾರು.. ಹೃದಯದ ಒಲವಿನ ಲತೆಯಲ್ಲಿ ಚಿಗುರಿರುವ ವಸಂತದ ಬೆಳಗಿನ ಸರಳವಾದ ಸಖ್ಯವನ್ನು ನಿನಗೆ ಮುಟ್ಟಿಸಲು ಅನುವಾದದಲ್ಲಿ ಹೂವಿನ ಗಂಧ ಹಕ್ಕಿಯ ಹಾಡಿನ ಛಂದ...