ಹಾಳು ಬೀದಿ ಬಸದಿಯಲಿ ಗೋಳು ಕ್ಷಯ ಹಿಡಿದ ಬಾಳಿಗೆ ದೊಂಗಾಲು ಬಿದ್ದು ಕ್ರಿಮಿಗಳೋಪಾದಿ ಕೊಳೆವ ನರ ನಾರಾಯಣರ ಬಾಳು ಬಾಳೆ? ನೋಡಿರೈ ಅವರ ಜೀವಂತ ಮರಣ ಗುರಿರಹಿತ ಪಯಣ ಉದಾಸೀನ ನಯನ, ನಿಶ್ಯಕ್ತ ಹರಣ...
"ನಿಶ್ಚಯಾಚೆ ಬಲ, ತುಕಾಮಣೆ ಹೇಚಿ ಸರ್‍ವಾಚೆ ಫಲ" ಸಾಧುಶ್ರೇಷ್ಠರಾದ ತುಕಾರಾಮಬುವಾನವರ ಈ ವಾಕ್ಯವು ದೃಢನಿಶ್ಚಯದ ಮಹತಿಯನ್ನು ವ್ಯಕ್ತಗೊಳಿಸುತ್ತದೆ. ದೃಢನಿಶ್ಚಯದಿಂದ ಜಗತ್ತಿನಲ್ಲಿ ಬೇಕಾದಂಥ ಪದನಿಗೇರಬಹುದಾಗಿದೆ. ಪೂರ್ವದಲ್ಲಿ ಆರ್ಯಾವರ್ತದಲ್ಲಿ ದೀಪಕನೆಂಬ ಒಬ್ಬ ಮಹಾದೃಢನರಿಶ್ಚಯಿಯು ಆಗಿಹೋದನು. ಅವನು ಒಂದು...