ಗೊಂಚಲಲಿ ಹೂವೊಂದು ನಸುನಗುತಲಿತ್ತು ಹಂತದಲ್ಲಿ ಸ್ಮಿತವನ್ನು ಇಡಲು ಬಯಸಿತ್ತು. ಆ ಹೂವ ಹೊಂಬಣ್ಣ ಆ ಹೂವ ಕಂಪನ್ನ – ನೋಡಿತೈ ಬೆಡಗದರ ದೂರಿದ್ದ ಭ್ರಮರ, ಕಾಡಿತ್ಯೆ ಬಳಿ ಬರಲು ಅತಿ ಆಶೆ ಅದರ. ನಸುನಗುವ ವದನವನು ತುಸು ಬಿರಿದ ಅಧರವನು ನಯವಾದ ಗ...

ದೇಹವೆಂಬ ಹಣತೆಯಲ್ಲಿ ಎಣ್ಣೆ ಎಂಬ ಚೇತನದಲಿ ಬತ್ತಿ ಎಂಬ ಭಕ್ತಿ ಇಟ್ಟು ದೀಪ ಹಚ್ಚಿರಿ ನೀವು ದೀಪ ಹಚ್ಚಿರಿ || ಸತ್ಯ ಧರ್ಮ ಬೆಳಕಿಗಾಗಿ ನಿತ್ಯ ಶಾಂತಿ ತೃಪ್ತಿಗಾಗಿ ಬಾಳ ಬದುಕು, ಸುಗಮಕ್ಕಾಗಿ ದೀಪ ಹಚ್ಚಿರಿ ನೀವು ದೀಪ ಹಚ್ಚಿರಿ || ಹಲವು ಮೌಢ್ಯ ಸಂ...

ಲೋಕದಲ್ಲಿ ಪ್ರತಿಯೊಂದು ವಸ್ತುವು ಕ್ಷಣಶಃ ಪ್ರಗತಿಯನ್ನು ಹೊಂದುತ್ತಲಿದೆ. ಭೂಮಿಯಂಥ ಅತಿದೊಡ್ಡ ಗೋಲವೂ, ನೊರಜಿನಂಥ ತೀರ ಕ್ಷುದ್ರಪ್ರಾಣಿಯೂ ಕ್ರಮೇಣ ಪ್ರಗತಿಹೊಂದಿವೆ. ಎಷ್ಟೊ ವರ್ಷಗಳ ಪೂರ್ವದಲ್ಲಿ ರಸರೂಪದಲ್ಲಿ ಕಾದು ಪ್ರಶಾಶ ಗೊಂಡಿದ್ದ ಭೂಗೋಲವು,...

ಹರಿಯೆ ನನ್ನ ಅರಿಸಿಕೊಂಡು ಬಂತು ಮತ್ತೊಮ್ಮೆ ಈಗ ಹೊಸ ವರುಷ ವರುಷಗಳು ಹೀಗೆ ಉರುಳುತ್ತಿವೆ ನಿನ್ನ ನೆನೆಯದ ಮತ್ತೇನು ಹರುಷ ಮೋಜ ಕುಣಿತಗಳಿಂದ ಸ್ವಾಗತಿಸಿ ತನು ಮನವ ಹೀಗೆ ಘಾಸಿಗೊಂಡಿದೆ ಆಯಸ್ಸು ತನ್ನೊಂದು ಎಳೆ ಕಳೆದುಕೊಂಡು ಬಡುಕಲಾಗಿ ತಾನು ಘಾಸಿಗ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....