
ಕಂದಾ! ನಿನ್ನ ಮುಖದ ಮುದ್ರಾಕೃತಿಯು ನನ್ನಂತಿದೆ; ಆದರೆ ದೇಹದ ಭದ್ರಾಕೃತಿಯು ಅವರಂತಿದೆ. ಕಂದಾ! ನಿನ್ನ ಕಣೊಳಗಿನ ಕರುಣೆ ನನ್ನಂತಿದೆ; ಆದರೆ ನೋಟದೊಳಗಿನ ಸರಣಿ ಅವರಂತಿದೆ. ಕಂದಾ! ನಿನ್ನ ಗದ್ದದ ಮೇಲಣ ಕುಣಿಯು ನನ್ನಂತಿದೆ; ಆದರೆ ಮೂಗಿನ ಕೆಳಗಣ ಮಣ...
ಮಕ್ಕಳಿಲ್ಲದಿದ್ದರೆ ಒಂದು ಚಿಂತೆಯಂತೆ, ಇದ್ದರೆ ನೂರೊಂದು ಚಿಂತೆಯಂತೆ; ಅನ್ನುವವರೇನು ಬಲ್ಲರು? ನನ್ನ ಚಿಂತಾಪಹಾರಕ ಚಿಂತಾಮಣಿ! ಚಿಂತೆಯ ಪಂಚಾಗ್ನಿಯಲ್ಲಿ ತಪಮಾಡಿಸಿ ತಪಸ್ವಿನಿಯ ಮಾಡಿಸಿದೆ; ಮಕ್ಕಳೆಂದರೆ ನೊಣದ ಪಾಯಸವೆಂತೆ, ಕೊರಳಿಗುರುಲೆಂತೆ; ಅನ...














