
ಹ್ಯಾಂಗ ಬಳಕಿ ಮಾಡಬೇಕಣ್ಣಾ ಹೀಂಗಾದಮ್ಯಾಲಿನ್ಹ್ಯಾಂಗ ಬಳಕಿ ಮಾಡಬೇಕಣ್ಣಾ ||ಪ|| ಹ್ಯಾಂಗ ಬಳಕಿ ಮಾಡಬೇಕು ಹಂಗು ಹರಿದು ನಿಂತ ಮೇಲೆ ಬಂಗಿ ತಂಬಾಕ ಸೇದುವ ಮರುಳ ಮಂಗ್ಯಾಗಂಜಿದ ಮೇಲೆ ||೧|| ಪಡೆದ ತಂದೆ ತಾಯಿ ಯಾರಣ್ಣಾ ದುಡಿದುಡಿದು ಸತ್ತರೆ ಮಡದಿ ಮಕ...
ಮರುಳೆ ಮರೆತಿರಬೇಡ ಗುರುವಿನ ಮಾಡೋ ಶ್ರೀ ಶಿವಭಜನ ನೇಮದಿ ಮಾಡೋ ಶ್ರೀ ಶಿವಭಜನ ||ಪ|| ಅಳಿವುದು ಕಾಯ ಉಳಿವುದು ಕೀರ್ತಿ ತಿಳಿದು ನೋಡೆಲೋ ರೀತಿ ಬಿಡು ಅವಿಚಾರ ಮಾಡೋ ವಿಚಾರ ಸ್ಥಿರವಲ್ಲೋ ಈ ಸಂಸಾರ ಮರುಳೇ ಮಾಡೋ ಶ್ರೀ ಶಿವಭಜನ ||೧|| ಎಲ್ಲಿಯ ತನಕ ಹಂ...
ಬಲುನಾತಾ ಬಲುನಾತಾ ಮನ ಮಲಿನ ತೊಳಿಯದಿರೆ ಹೊಲಸಾಯ್ತವ್ವಾ ನಾತಾ ||ಪ|| ನಾಯಿ ಸತ್ತು ಕೊಳೆತರೆ ನಾತಲ್ಲಾ ಕಾಯಿ ಕೆಟ್ಟು ಹುಳಿತರೆ ನಾತಲ್ಲಾ ಬಾಯಿ ಕಚ್ಚಿ ಕಂಡ ಹೆಂಡ ತಿಂಬುವಾ ಪಾಯಗಟ್ಟಿ ಮನುಜರು ನಾತಲ್ಲಾ ||೧|| ಉಂಡುಬ್ಬಳಿಸುವದು ನಾತಲ್ಲಾ ಕುಂಡ್ಯ...
ದಿನವು ಸಂಧಿಸಿ ಹೋಗುತದೆ ಮರುಳೆ ಘನಮೂರ್ತಿನಾಮವನು ನೆನಹಿಕೋ ಮೂರ್ಖಾ ಕನಸಿನಂತೆ ಶರೀರ ಮನವೆಂಬ ಆಲಯದಿ ಅನುದಿನ ಜೀವನೇಶ್ವರನಿರುವತನಕಾ ||ಪ|| ಧರೆಯೊಳಗೆ ನರದೇಹ ಸ್ಥಿರವಲ್ಲ ಸಹಜವಿದು ಇರುತಿಹುದು ನೀರಮೇಲಿನ ಗುಳ್ಳೆಯಂತೆ ಕರಗಿಹೋದರೆ ಬರುವದು ಈ ಪರ...
ಹೆಂಗಸರ ಸುಖ ಬಲ್ಲವನೇ ಬಲ್ಲ ಪರ- ಹೆಂಗಸರ ಸುಖ ಸವಿ ಕ್ಕರಿ ಬೆಲ್ಲ ||ಪ|| ಆರಿಗೆ ಬಿಡಲಿಲ್ಲ ಕಾಮನ ಹೊಯಿಲೆಲ್ಲ ಇದರ ಇಂಗಿತ ಗಂಡಸರಿಗೆ ತಿಳಿದಿಲ್ಲ ||೧|| ಹೆಣ್ಣು ಜರಿದರೇನು ಬಿಟ್ಟಿಲ್ಲ ಅದಕೆ ಮಣ್ಣುಗೂಡಿ ಮೈ ಕೆಟ್ಟಿಲ್ಲ ||೨|| ಇಳೆಯೊಳು ಈ ಮಾತು...
ದುಡ್ಡು ಕೆಟ್ಟದ್ದೊ ಮನುಜಾ ಈ ಲೋಕದಿ ದುಡ್ಡು ಕೆಟ್ಟದ್ದೊ ಮನುಜಾ ||ಪ|| ಹೆಡ್ಡ ಮೂಢಾತ್ಮನೆ ದೊಡ್ಡ ದೊಡ್ಡವರನು ಮಡ್ಡು ಇಳಿಸುತ್ತಲೀ ಅಡ್ಡಬೀಳಿಸುವದು ||ಅ.ಪ|| ಹರನ ಪೂಜೆಯ ಕೆಡಿಸಿ ಸದ್ಗುರುವಿನ ವರಮಂತ್ರವನು ಬಿಡಿಸಿ ಗುರುಶಿಷ್ಯಭಾವವನರುಹಿ ಲಕ್ಷ...
ಒಳ್ಳೇ ನಾರಿ ಕಂಡೆ ಈಗಲೇ ಒಳ್ಳೇ ನಾರಿ ಕಂಡೆ ||ಪ|| ಇಳೆಯ ತಳದಿ ಕಳೆವರ ಭಲೆ ಋಷಿಗಳ ಮರುಳು ಮಾಡುವ ||ಅ.ಪ.|| ಕೈಯು ಕಾಲು ಇಲ್ಲಾ ಮೈಯೊಳು ಉಸುರು ಅಡಗಿತಲ್ಲಾ ವಿಷಯಸುಖದ ಪರಮಾತ್ಮ ಬ್ರಹ್ಮೋದಯ ನಿಶಿಕರದೊಳು ನಲಿದಾಡುತಿಹಳೋ ||೧|| ಮುಟ್ಟಲು ಕೊಲ್ಲು...
ನರಿ ಸತ್ತು ಹೋಯ್ತು ಬೇಡಿ ಹುಲಿಯ ಬಣ್ಣಾ ನೀರೊಳಗೆ ಕರಗಿ ಸುಟ್ಟು ಹೋಯ್ತು ಸುಣ್ಣಾ ||ಪ|| ಸತ್ಯವಿದು ಮಿಥ್ಯವಲ್ಲ ತಿಳಿಯೋ ಕಾಮಣ್ಣಾ ||ಅ.ಪ|| ಹೊನ್ನು ಹೆಣ್ಣು ಮಣ್ಣು ಈ ಮೂರು ಸುಳ್ಳಣ್ಣಾ ತಿಳಿದುನೋಡು ಗುರುವು ಕೊಟ್ಟ ಅವು ಮೂರು ಕಣ್ಣಾ ||೧|| ಕಳ...
ನಡೆನುಡಿಯಿಂದ ನಾವು ನಡೆಯಬೇಕಣ್ಣಾ ದೇಹವಿದು ತಮ ನಡುವೆ ಬಿದ್ದು ಹೋಗತೈತಣ್ಣಾ ||ಪ|| ಭಜನೆಯ ಮಾಡ್ವಾಗ ಭೇದಭಾವ ಬಿಟ್ಟು ಭಜಿಸಬೇಕಣ್ಣಾ ಅಣ್ಣತಮ್ಮರೆಂದು ತಿಳಿಯಬೇಕಣ್ಣಾ ||೧|| ಪರ ಹೆಣ್ಣು ಮಕ...
ಮೂಕನಾಗಿರಬೇಕೋ ಜಗದೊಳು ಜೋಕ್ಯಾಗಿರಬೇಕೋ ||ಪ|| ಕಾಕು ಕುಹಕರ ಸಂಗ ನೂಕಿರಬೇಕೋ ಲೋಕೇಶನೊಳಗೇಕಾಗಿರಬೇಕೋ ||ಅ.ಪ|| ಕಚ್ಚುವ ನಾಯಿಯಂತೆ ಬೊಗಳ್ವರೋ ಹುಚ್ಚರಂದದೊಳಿಹರೊ ಎಚ್ಚರಿಲ್ಲದವರೋ ಲುಚ್ಚೇರು ನಾಚಿಕಿ ತೊರದಿಹರೋ ಮುಚ್ಚಿದಾ ಸುದ್ದಿಯ ಬಚ್ಚಿಡದಂಥಾ...














