ಮರುಳೆ ಮರೆತಿರಬೇಡ

ಮರುಳೆ ಮರೆತಿರಬೇಡ ಗುರುವಿನ
ಮಾಡೋ ಶ್ರೀ ಶಿವಭಜನ ನೇಮದಿ
ಮಾಡೋ ಶ್ರೀ ಶಿವಭಜನ ||ಪ||

ಅಳಿವುದು ಕಾಯ ಉಳಿವುದು ಕೀರ್ತಿ
ತಿಳಿದು ನೋಡೆಲೋ ರೀತಿ
ಬಿಡು ಅವಿಚಾರ ಮಾಡೋ ವಿಚಾರ
ಸ್ಥಿರವಲ್ಲೋ ಈ ಸಂಸಾರ ಮರುಳೇ
ಮಾಡೋ ಶ್ರೀ ಶಿವಭಜನ ||೧||

ಎಲ್ಲಿಯ ತನಕ ಹಂಬಲಿಸುವಿ ನೀ
ನಂದೇಶನ ಮರೆತು
ಕಂದ ನಿನಗೊಂದಿಲ್ಲ ಈ ಭವದಿ
ಸುಂದರ ಗುರುವಿನ ಪಾದಕ ಹೊಂದಿ
ಮಾಡೋ ಶ್ರೀ ಶಿವಭಜನ ||೨||

ಅಡಿಗಡಿಗೆ ಶಿವನಾಮವ ಸ್ಮರಿಸೋ
ದೃಢಭಕ್ತಿಯ ನಿಲ್ಲಿಸೋ
ಶಿಶುನಾಳಧೀಶ ಈಶ ಬಸವೇಶನ
ಮಾಡೋ ಶ್ರೀ ಶಿವಭಜನ ||೩||

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೧೮
Next post ನಗೆ ಡಂಗುರ – ೧೯

ಸಣ್ಣ ಕತೆ

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…