ಹೆಂಗಸರ ಸುಖ ಬಲ್ಲವನೇ ಬಲ್ಲ ಪರ-
ಹೆಂಗಸರ ಸುಖ ಸವಿ ಕ್ಕರಿ ಬೆಲ್ಲ ||ಪ||

ಆರಿಗೆ ಬಿಡಲಿಲ್ಲ ಕಾಮನ ಹೊಯಿಲೆಲ್ಲ
ಇದರ ಇಂಗಿತ ಗಂಡಸರಿಗೆ ತಿಳಿದಿಲ್ಲ ||೧||

ಹೆಣ್ಣು ಜರಿದರೇನು ಬಿಟ್ಟಿಲ್ಲ ಅದಕೆ
ಮಣ್ಣುಗೂಡಿ ಮೈ ಕೆಟ್ಟಿಲ್ಲ ||೨||

ಇಳೆಯೊಳು ಈ ಮಾತು ಸುಳ್ಳಲ್ಲ
ಸುಳ್ಳೆ ಬಲು ವಿಷಯದೊಳು ನೀ ಕುಳಿತೆಲ್ಲ ||೩||

ಶಿಶುನಾಳಧೀಶಗ ಅರಿತಿಲ್ಲ ಬಲು –
ಕಸಿವಿಸಿ ಸೂಳೇರ ಮುರುಕೆಲ್ಲ ||೪||

*****