Home / Anand Hebbalu

Browsing Tag: Anand Hebbalu

ಅಮ್ಮಾ ನಿನ್ನ ಮಾತಿನಲ್ಲಿ ಏನೋ ಮಧುರ ಮಮತೆ ತುಂಬಿದೆ| ಹೇಳಲಾರದ ಅದೇನೋ ಪ್ರೀತಿ ಕರುಣೆ ಸಹಾನುಭೂತಿ ಸೆಳೆದು ನಮ್ಮಿಬ್ಬರನು ಬಂಧಿಸಿ ನನ್ನ ಮಂತ್ರಮುಗ್ಧನಾಗಿಸಿದೆ|| ಅಮ್ಮಾ ನಿನ್ನಾ ಕೈಯಲೆಂತಹ ಮಂತ್ರಶಕ್ತಿ ಅಡಗಿದೆ| ನೀನು ಹರಸಿದರೆ ಅದೆಂತಹ ಕಷ್ಟ ...

ಬನ್ನಿ ಮೇಘಗಳೇ ಬನ್ನಿ ಜೀವನಾಡಿಗಳೇ| ನನ್ನ ತವರೂರಿಗೆ ನಾಲ್ಕು ಹನಿಯ ಸುರಿಸಿ| ನನ್ನ ಅಣ್ಣ ತಮ್ಮಂದಿರ ಉಣಿಸಿ ಮುಂದೆ ಪ್ರಯಾಣ ಬೆಳೆಸಿ|| ತಾಯಿ ಇರುವಳು ಅಲ್ಲಿ ನೀರಿಲ್ಲವಂತೆ ಅಣ್ಣಬೆಳೆದಿಹ ಪೈರು ಒಣಗುತಿದೆಯಂತೆ| ನನ್ನ ಸಾಕಿದ ಹಸುಕರುವಿಗೆ ಮೇವಿಲ...

ಎಚ್ಚರಿಸುತ್ತಿರು ನೀನು ಎನ್ನಂತರಾತ್ಮವೇ ನಾ ಎಡವುವಲ್ಲಿ, ನಡೆಯುವಾಗ ಹೆಜ್ಜೆ ತಪ್ಪಿದಲ್ಲಿ| ಅನ್ಯರ ಅಂತರಂಗ ಅರಿಯದೆ ಅವರ ಪ್ರಶ್ನಿಸುವಲ್ಲಿ ಅವರ ಆಳವ ತಿಳಿಯದೆ ಮೂರ್ಖತನದಿ ಅಳೆಯುವಲ್ಲಿ|| ಧೈರ್ಯ ತುಂಬುತ್ತಿರು ನೀನು ನಾ ಅಧೈರ್ಯನಾಗಿ ನಿಂತಲ್ಲಿ|...

ಪ್ರೀತಿಗೊಂದು ಹೆಸರು ಮಮತೆಗಿನ್ನೊಂದು ಹೆಸರು| ತ್ಯಾಗಕೂ ಅದೇನೆ ಹೆಸರು ಅಮ್ಮಾ ಎಂಬಾ ತಾಯಿದೇವರು|| ಕರುಣೆಗೊಂದು ಹೆಸರು ಅಮೃತಾಮಹಿಗೊಂದು ಹೆಸರು| ಮೊದಲಗುರುವಿಗೊಂದು ಹೆಸರು ಅದುವೇ ಅಮ್ಮಾ ಎಂಬಾ ತಾಯಿದೇವರು|| ಶಾಂತಿಗೊಂದು ಹೆಸರು ಸಹನೆಗಿನ್ನೊಂದ...

ಕನ್ನಡ ಕಲಿಯಿರಿ, ಕನ್ನಡ ಕಲಿಸಿರಿ ಕನ್ನಡ ಬೆಳೆಸುತಾ ಬಾಳಿರಿ| ಕನ್ನಡ ದೇವಿಗೆ ಕನ್ನಡ ದೀಪವ ಹಚ್ಚುತ ಬಾಳನು ಬೆಳಗಿರಿ| ಕನ್ನಡದಿಂದಲೇ ಎಲ್ಲವ ಕಾಣುತ ಕನ್ನಡ ದೀವಿಗೆ ಹಚ್ಚಿರಿ| ಕನ್ನಡ ಬಾವುಟ ಹಾರಿಸಿ ಕನ್ನಡ ಡಿಂಡಿಮ ಬಾರಿಸಿ|| ಕನ್ನಡವಲ್ಲವೇ ನಮ್...

ಅನ್ನದಾತನೆ ನಿನಗೆ ನನ್ನ ಕೋಟಿ ನಮನ| ನಿನ್ನೊಂದು ಬೆವರ ಹನಿಗೆ ಸಮವಲ್ಲ ನನ್ನ ಈ ಜೀವನ|| ಬಿಸಿಲೆನ್ನದೆ ಗಾಳಿ ಎನ್ನದೆ ದುಡಿದು ನಮ್ಮೆಲ್ಲರಿಗಾಗಿ ಮುಡಿಪಾಗಿಟ್ಟಿಯೇ ನಿನ್ನಯ ಜೀವನ| ಸದಾ ಪಂಚಭೂತಗಳನೇ ಪೂಜೆಗೈಯುತ ಅರ್ಪಿಸುವೆ ನಿನ್ನ ತನು ಮನಗಳ ಶಾಶ...

ಅದೆಷ್ಟು ಸಾರಿ ಕ್ಷಮಿಸೆನ್ನ ಜೀವ ಉಳಿಸಿರುವೆಯೋ ಕಾಣೆ, ದೇವಾ| ನಿನ್ನದಯೆ ಇರಲಿ ಸದಾ ಹೀಗೆ ಬದುಕಿ ಮತ್ತೆ ಮತ್ತೆ ಸ್ತುತಿಸಿ ನಿನ್ನ ನಮಿಸಿ ಸ್ಮರಿಸುತ್ತಿರುವೆ ಹೀಗೆ|| ಮತಿಗೆಟ್ಟು ನಾಲಿಗೆ ಎಡವಿ ಮಹಾ ಪ್ರಮಾದವಾಗಿಬಿಡಹುದು| ದೃಷ್ಟಿ ದೋಷ ಪೂರಿತನಾ...

ಬೆಳಕು ಬಂದಿದೆ ಬಾಗಿಲಿಗೆ ಬರಮಾಡಿಕೊಳ್ಳಿರಿ ಒಳಗೆ| ಹೃದಯ ಬಾಗಿಲತೆರೆದು ಮನಸೆಂಬ ಕಿಟಕಿಗಳ ಒಳತೆರೆದು|| ಬೆಳಕೆಂದರೆ ಬರಿಯ ಬೆಳಕಲ್ಲ ಇದುವೇ ಮಹಾಬೆಳಕು | ನಮ್ಮಬದುಕ ಬದಲಿಸುವ ಬೆಳಕು ನಮ್ಮಬಾಳ ಬೆಳಗುವಾ ಬೆಳಕು|| ಕೋಟಿ ಸೂರ್ಯ ಸಮವೀಬೆಳಕು ಸರ್ವಕಾ...

ಯಾರೂ ತಿಳಿಯರು ನಿನ್ನ ಮನದ ಮಾಯ ಜಾಲ | ಮಾಧವ ನಿನಗಲ್ಲದೇ ಇನ್ನಾರಿಗಿದೆ ಈ ಪರಿಯ ಪ್ರಭೆಯು|| ಪಂಚಪಾಂಡವರಿಗೆ ನೀನೊಲಿದು ಧರ್ಮವನು ಕೈ ಹಿಡಿದೆ| ಸೋದರಿ ದ್ರೌಪದಿಯ ಮಾನಾಪಮಾನವನು ಕಾಯ್ದೆ| ದರ್ಪ ದುರಾಂಕಾರ ದುರ್ಬುದ್ಧೀಯ ನೀನಳಿಸಿ ಅಧರ್ಮವ ಅಡಗಿಸಿ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...