ಅನ್ನದಾತನೆ ನಿನಗೆ
ನನ್ನ ಕೋಟಿ ನಮನ|
ನಿನ್ನೊಂದು ಬೆವರ ಹನಿಗೆ
ಸಮವಲ್ಲ ನನ್ನ ಈ ಜೀವನ||

ಬಿಸಿಲೆನ್ನದೆ ಗಾಳಿ ಎನ್ನದೆ
ದುಡಿದು ನಮ್ಮೆಲ್ಲರಿಗಾಗಿ
ಮುಡಿಪಾಗಿಟ್ಟಿಯೇ ನಿನ್ನಯ ಜೀವನ|
ಸದಾ ಪಂಚಭೂತಗಳನೇ
ಪೂಜೆಗೈಯುತ
ಅರ್ಪಿಸುವೆ ನಿನ್ನ
ತನು ಮನಗಳ ಶಾಶ್ವತ||

ನೆಲವ ಹದಮಾಡಿ ಬೀಜವ ಬಿತ್ತಿ
ಭೂತಾಯಿಯ ಸೇವೆಯ ಮಾಡುವೆ|
ಮಳೆಗಾಗಿ ಮುಗಿಲ ನೋಡುತ ನೀ
ವರುಣನಿಗೆ ಪ್ರಾರ್ಥನೆಯ ಸಲ್ಲಿಸುವೆ|
ಮಳೆ ಬಾರದೆ ಭೂತಾಯಿ
ಒಡಲು ಸುಡುತಿರೆ ನೀ ನೊಂದು
ಕಣ್ಣನೀರನು ಸುರಿಸುವೆ|
ಮಳೆ ಬಂದು ಬೆಳೆ ಬೆಳೆದರೆ
ಲೋಕಕೆ ಅನ್ನವ ನೀಡಿ ಸಂತಸಗೈಯುವೆ||

ಬರಗಾಲ ಇರಲಿ ಕ್ಷಾಮವೇ ಬರಲಿ
ಸಮಚಿತ್ತದಿಂದ ನೀ ಸ್ವೀಕರಿಸುವೆ|
ಶಾಂತಿ ಸಮಾನತೆಯಿಂದೆಲ್ಲರ ಕ್ಷಮಿಸಿ
ನೂರು ಕಾಲ ನೀ ಬಾಳುವೆ||

ಯಾವ ಪಾಪಕರ್ಮವ ಮಾಡದೆ
ಬರೀ ಪುಣ್ಯ ಜೀವನ ನಡೆಸಿ ಎಲ್ಲರಿಗೂ
ಆದರ್ಶ ಮಾರ್ಗದರ್ಶನಗೈಯುವೆ|
ದೇವಾದಿದೇವತೆಗಳಿಂದಲಿ
ಪ್ರಶಂಸೆಯ, ಋಷಿಮುನಿಗಳಿಂದಲೂ
ನೀ ಪೂಜೆಯ ಪಡೆವೆ||
*****

ಜಾನಕಿತನಯಾನಂದ
Latest posts by ಜಾನಕಿತನಯಾನಂದ (see all)