Home / Kannada Poetry

Browsing Tag: Kannada Poetry

ನನ್ನ ಪ್ರೇಮದ ಕಡ ಎಷ್ಟು ದಿನ ಇಟ್ಟುಕೊಳ್ಳುವಿ ನೀ ಬಿದಿರಕೋಲಿನ ಸಖನೇ ನಾಳೆಗಾದರೂ ತೀರಿಸಿಬಿಡು ಹನಿಮುತ್ತಿದ ಕೆಂದಾವರೆಗಳು ನನ್ನ ತುಟಿಯಲ್ಲರಳಲಿ. ಬಿದಿರುಗಣೆ ಉಲಿತ ಸದ್ದಾಗದಂತೆ ನನ್ನಾತ್ಮವನ್ನೆ ಕಬಳಿಸುತ್ತಿದೆ. ಯಮುನೆ ತೀರದ ಕುಳಿರ್‍ಗಾಳಿ ತಣ...

ಎಲ್ಲ ಮುಗಿದ ಮೇಲೆ ಅವಳನ್ನು ಮಣ್ಣಿಗಿಟ್ಟರು. ಹೂ ಬೆಳೆದವು, ಚಿಟ್ಟೆ ಹಾರಿದವು ಅಲ್ಲಿ. ಹೆಣ ಮಣ್ಣಿಗಿಟ್ಟಾಗ ಗುರುತು ಕೂಡ ಬೀಳಲಿಲ್ಲ. ಅಷ್ಟು ಹಗುರವಾಗಲು ಅವಳೆಷ್ಟು ನೋವು ತಿಂದಿದ್ದಳೋ! ***** ಮೂಲ: ಬೆರ್ಟಾಲ್ಟ್ ಬ್ರೆಖ್ಟ್ / Bertolt Brecht...

ಇದು ಬುದ್ಧ ಪೂರ್ಣಮಿ ಇದು ಶುದ್ಧ ಪೂರ್ಣಮಿ ಎಲ್ಲ ಪೂರ್ಣಮಿಯಂತಲ್ಲ ಜಗವೆ ತೊಯ್ಪದಲ್ಲ! ಎಲ್ಲರ ಕಣ್ಗಳ ತೆರೆಸಿ ಲೋಕದ ಮಾಯೆಯ ಹರಿಸಿ ಬುದ್ಧ ಜನಿಸಿದಂದು ವೈಶಾಖ ಪೂರ್ಣಮಿಯಿಂದು ಜನ್ಮಾಂತರದಿಂದೆದ್ದ ದುಃಖದ ಮೂಲವ ಗೆದ್ದ ಬುದ್ಧ ಜನಿಸಿದಂದು ವೈಶಾಖ ಪೂ...

೧ ಸಮಯವಿದೆಯೆ ಪಪ್ಪಾ? ಆಚ ಗುಡ್ಡದಾಚೆ ಇದ ನದಿ ಆಹಾ! ಎಷ್ಟು ಚಂದ ಅದರ ತುದಿ ಅಬ್ಬಾ… ಎಷ್ಟು ದೊಡ್ಡ ಸುಳಿ ಹೇಗೋ ಪಾರಾದೆ ನುಸುಳಿ ಸರ್ರೆಂದು ಜಾರುವುದು ನುಣ್ಣನೆಯ ಹಾವು ಎದೆಯೆತ್ತರಕೂ ಹಾರುವುದು ಪುಟಾಣಿ ಮೀನು ಬಾ ಪಪ್ಪಾ ತೋರಿಸುವನು&#823...

ಎಷ್ಟು ಸವರಿದರೂ ಮತ್ತೆ ಮತ್ತೆ ಮುಟ್ಟಬೇಕೆನ್ನಿಸುವ ಆತನ ಕದಪುಗಳ ತಟ್ಟಿ ಮುತ್ತಿಕ್ಕಿದಾಗಲೆಲ್ಲ ಅಕ್ಷರಗಳು ನನ್ನೊಳಗಿನ ಆತ್ಮದಂತೆ ಹರಿದಾಡುತ್ತವೆ. ಆತನ ತುಟಿಗಳ ಮೇಲೆ ಬೆರಳಾಡಿಸಿದಾಗೆಲ್ಲ ಅನೂಹ್ಯವಾದ ಬೆಸುಗೆ ಕರುಳ ಕೊಂಡಿಯಂತೆ ಒಳಗೊಳಗೆ ಬಲಿಯುತ...

ಹದುಳವಿಲ್ಲದ ಬದುಕು ಬಹಳ ಕಂಡಿದ್ದೇನೆ. ನಗು ನಗುತ್ತ ಹರಿವ ನದಿಯ ಉಸಿರು ಕಟ್ಟಿ ಒಣಗಿತ್ತು, ನಳನಳಿಸುವ ಎಲೆ ವ್ಯರ್ಥ ಉದುರಿ ಬಿದ್ದು ಒಣಗಿತ್ತು, ಹುಮ್ಮಸ್ಸಿನ ಮಣಕದ ಕಾಲು ಮುರಿದಿತ್ತು, ನಿಶ್ಚಲ ಮಧ್ಯಾಹ್ನದ ತೂಕಡಿಕೆಯಲ್ಲಿ ಪ್ರತಿಮೆ ನಿಂತಿತ್ತು,...

ಎಲ್ಲಿ ಹೋದಳು ನಮ್ಮ ಅಡಗೂಲಜ್ಜಿ ಎಲ್ಲಿ ಗುರುತುಗಳನು ಒಮ್ಮಲೆ ಉಜ್ಜಿ ನಡೆದರು ಮುಗಿಯದ ಕಾಡಿನ ಹಾದಿ ಕಾಣಿಸಿತೊಂದು ಗುಡಿಸಲ ಬಿಡದಿ ಮೀಯಲು ಬೆಚ್ಚನೆ ಬಿಸಿ ನೀರಿತ್ತು ಕುಡಿಯಲು ಪನ್ನೀರಿನ ಷರಬತ್ತು ಒಲೆಯ ಮೇಲೊಂದು ಮಾಯಾ ಗಡಿಗೆ ಬಯಸಿದ ತಕ್ಷಣ ಪಾಯಸ...

ಸಂಭ್ರಮವಿಲ್ಲ, ಸಡಗರವಿಲ್ಲ ಮನೆಯೊಳಗೆ ಸೂತಕದ ವಾತಾವರಣ ಆಶೆಯಂತೆಯೆ ಬತ್ತಿ ಹೋಗಿದೆ ಎದೆ ಹಾಲು ಹಡೆದವ್ವ ಕೊರಗುವಳು ಜೋಲಿ ಏರಿಸಲು ಮೊಳೆಯೆ ಸಿಗಲೊಲ್ಲದು ಅಪ್ಪ ಗೊಣಗುವನು ಪೇಟೆಯಲ್ಲಿ ಮಿಠಾಯಿ ಇದ್ದಕ್ಕಿದ್ದ ಹಾಗೆಯೆ ತುಟ್ಟಿಯಾಗಿದೆ ಚಂದ ಮಾಡಿ ಪದ ...

ಜೊತೆಜೊತೆಯಲಿ ಕೈಯಲ್ಲಿ ಕೈಯಿಟ್ಟು ನಡೆವ ಅವರನ್ನೂ ಕಂಡಾಗಲೆಲ್ಲಾ, ಮುಂದೊಂದು ದಿನ ನಾನು ಹೀಗೆ, ಬರಿಯ ಹಾಗೇ ಅಂದುಕೊಂಡಿದ್ದೆ, ಅಷ್ಟೇ. ಪೇಟೆ ದಾರಿಯಲ್ಲಿ ಹೀಗೆ ಕೈ ಕೈ ಹಿಡಿದು ನಡೆದಾಡಿರಲೇ ಇಲ್ಲ ನಾವೆಂದೂ. ಹಾಗೆ ಇರಲಾಗಲೇ ಇಲ್ಲ ಎಂದುಕೊಳ್ಳುತ್ತ...

ಒರೆಸಿಬಿಡು ಬೇಕಾದರೆ ಗೋಳಿಡುವ ಈ ದುರ್ಬಲ ಬದುಕನ್ನು, ಬೋರ್ಡಿನ ಮೇಲೆ ಬರೆದ ಅಲ್ಪಾಯುಷಿ ಅಕ್ಷರಗಳನ್ನು ಡಸ್ಟರು ಸುಮ್ಮನೆ ಒರೆಸಿಬಿಡುವಂತೆ. ನಿನ್ನವರ್‍ತುಲಕ್ಕೆ ಮತ್ತೆ ಹೆಜ್ಜೆ ಇಡಲು ಕಾದಿದ್ದೇನೆ ನಾನು ಹೆಜ್ಜೆ ಇಟ್ಟು ನಡೆದು ಬಳಲಿದ ಹಾದಿಗಳೆಲ್...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...