ಹನಿಗವನ ಭರವಸೆ ಪಟ್ಟಾಭಿ ಎ ಕೆ December 23, 2016October 16, 2016 ಮಂತ್ರಿಗಳು ಕೊಡುತ್ತಲೇ ಇರುತ್ತಾರೆ ಭರವಸೆ; ಇದೇ ಅವರ ವರಸೆ! ***** Read More
ಹನಿಗವನ ಒಗ್ಗಟ್ಟು ಪಟ್ಟಾಭಿ ಎ ಕೆ December 16, 2016October 16, 2016 ಒಗ್ಗರಣೆ ಭರಣಿಯಲ್ಲಿ ಒಟ್ಟಾಗಿ ಬಾಳುವ ಸಾಸಿವೆ ಜೀರಿಗೆ ಒಟ್ಟಾಗಿಯೇ ಸಾಯುತ್ತವೆ ಕಾದ ಬಾಣಲೆಯಲ್ಲಿ! ***** Read More
ಹನಿಗವನ ಬೆಂಗಳೂರು ಪಟ್ಟಾಭಿ ಎ ಕೆ December 9, 2016October 16, 2016 ಇದು ನಮ್ಮ ಸಿಟಿ ಕಾರ್ಪೊರೇಷನ್; ಇಲ್ಲಿ ಕಾರ್ ಪಾರ್ಕಿಗೂ ರೇಷನ್! ***** Read More
ಹನಿಗವನ ಮುನಿ ಪಟ್ಟಾಭಿ ಎ ಕೆ December 2, 2016October 16, 2016 ಮನಿ (Money) ಮತ್ತು ಮನೆ ಇಲ್ಲದವ ಆದ ಮುನಿ! ***** Read More
ಹನಿಗವನ ಎಚ್ಚರ ಪಟ್ಟಾಭಿ ಎ ಕೆ November 25, 2016October 16, 2016 ತಾಳಿ ಕಟ್ಟುವ ಗಂಡು ತಾಲೀಪಿಟ್ಟೂ ತಟ್ಟಬೇಕಾದೀತು ಎಚ್ಚರ! ***** Read More
ಹನಿಗವನ ಬೀಗಿತ್ತಿ ಪಟ್ಟಾಭಿ ಎ ಕೆ November 18, 2016October 16, 2016 ವರನ ತಾಯಿ ಬೀಗಿತ್ತಿ; ವಧುವಿನ ತಾಯಿ ತಲೆಬಾಗುತ್ತಿ! ***** Read More
ಹನಿಗವನ ರೇಡಿಯೋ ಪಟ್ಟಾಭಿ ಎ ಕೆ November 11, 2016October 16, 2016 ಎಲ್ಲಿಯದೋ ಹಾಡು ಯಾರದೋ ಹಾಡು ಗುಂಡಿ ಒತ್ತಿದಾಗ ಹಾಡು; ಅದೇ ರೇಡಿಯೋ ಅದೇನು ಮೋಡಿಯೋ? ***** Read More
ಹನಿಗವನ ಅತ್ತೆ ಪಟ್ಟಾಭಿ ಎ ಕೆ November 4, 2016October 16, 2016 ಗಂಡನ ಅಮ್ಮನ ಕಾಟದಿಂದ ಅತ್ತೂ, ಅತ್ತೂ, ಬೇಸತ್ತು ಸುಸ್ತಾದ ಸೊಸೆ ಕಾಟ ಕೊಟ್ಟವಳಿಗೆ ಇಟ್ಟ ಹೆಸರು - ಅತ್ತೆ! ***** Read More
ಹನಿಗವನ ಕನ್ಯೆ ಪಟ್ಟಾಭಿ ಎ ಕೆ October 28, 2016October 16, 2016 ಕನ್ಯೆ ಜೀರಿಗೆ ಬೆಲ್ಲ ಬಿದ್ದ ಮೇಲೆ ಆಗುವಳು ಅನ್ಯೆ! ***** Read More
ಹನಿಗವನ ತಂಬಾಕು ಪಟ್ಟಾಭಿ ಎ ಕೆ October 21, 2016October 16, 2016 ಉಂಡ ಬಾಯನ್ನೇ ಇರಿಯುವ ಈ ಬಾಕು, ತಂಬಾಕು! ***** Read More