Home / ಕನ್ನಡ ಕಾದಂಬರಿ

Browsing Tag: ಕನ್ನಡ ಕಾದಂಬರಿ

ಶಾಬಯನು ಮರಳೆ ಬರುವ ನಿರೀಕ್ಷಣೆಯಿಂದೆ ಶಾದುಕೊಂಡಿರುವ ಕೊತ್ವಾಲನು ದಾರಿಯಲ್ಲಿ ಸಿಕ್ಕಿ ಉಭಯ ಮೂರ್ತಿಗಳು ಹಾಸ್ಯವದನರಾಗಿ ಮೆಲ್ಲಗೆ ಮಾತನಾಡುತ್ತಾ ನಡೆದರು. ಶಾಬಯ್ಯನ ಮನೆಯಲ್ಲಿ ಒಂದೆರಡು ಘಳಿಗೆ ಪರಿಯಂತರ ಇದ್ದು ಕೊತ್ವಾಲನು ತನ್ನ ಮನೆಗೆ ಬಂದ ಬಳಿ...

“ಆಹಾ! ಇಂತಾ ಅನ್ಯಾಯ ಈ ಊರಲ್ಲಿ ನಡೆಯುವದಾದರೆ ನಾನು ಮತ್ಯಾವ ಊರಿಗೆ ಹೋಗಲಿ! ಜೀವಧರಿಸಿ ನನ್ನ ಗಂಡನನ್ನು ಮಠದಲ್ಲಿ ಕೊಂದ ಮಾರೆಗಾರರ ಪಕ್ಷವನ್ನೇ ಸರ್ಕಾರದ ಜನರು ಹಿಡಿದ ಮೇಲೆ ಬಡ ವೆಯಾದ ನನ್ನ ಸಂಕಷ್ಟ ಯಾರಿಗೆ ಹೇಳಲಿ? ಭಗವಂತನೇ! ಹೇ ಜಿನೇಶ್ವರಾ!...

ನಡುರಾತ್ರಿ ಪರಿಯಂತರ ನೇಮರಾಜ ಸೆಟ್ಟಿಯು ಮನೆಗೆ ಬಾರದೆ ಇರುವದರ ಕಾರಣವನ್ನು ತಿಳಿಯದೆ ದಿಗ್ಭ್ರಾಂತಿಯಿಂದ ಅವನ ಸತಿಸುತರು ನೌಕರ ಜನರು ಖೇದಪಟ್ಟು ಊರು ಇಡೀ ಅವನನ್ನು ಹುಡುಕಿದರು. ಎಲ್ಲಿ ನೋಡಿದರೂ ಅವನು ಸಿಕ್ಶಲಿಲ್ಲ. ಯಾರ ಹತ್ತಿರ ಕೇಳಿದರೂ ತಾನರ...

ಸೂರ್ಯ ನಾರಾಯಣನ ಅವಗುಣಕ್ಕೆ ದ್ವಿತೀಯಾಶ್ರಮವಾಯಿತೆಂಬ ದುರ್ವಾರ್ತೆಯು ತಲಪಿ, ಸ್ವಾಮಿಗಳೂ ವಾಗ್ದೇವಿಯೂ ಏಕಾಂತ ಗೃಹದಲ್ಲಿ ಅನುವಾದಿಸಿಕೊಂಡಿರುವ ವೇಳೆಯಲ್ಲಿ ನೇಮರಾಜಸೆಟ್ಟಿಯು ಶೃಂಗಾರಿಯ ಸಂಗಡ ಸಂಭಾಷಣೆ ನಡಿಸುತ್ತಿದ್ದನು. ಇದನ್ನು ಹ್ಯಾಗೋ ತಿಳಿದ...

ಪತಿಯ ಮರಣದ ದೆಸೆಯಿಂದ ಮುಖವನ್ನು ತೋರಿಸಲಿಕ್ಕೆ ನಾಚುವ ವಾಗ್ದೇವಿಯು ಬಂಧನದಲ್ಲಿದ್ದಂತೆ ಮನೆಯ ಒಳಗೆ ಇದ್ದುಕೊಂಡಳು. ಕರು ಣಾಳುವಾದ ಭೀಮಾಜಿಯು ಅನಳನ್ನು ಆಗಾಗ್ಗೆ ಕಂಡು ಮಾತಾಡುವುದಕ್ಕೆ ಯಾವುದೊಂದು ಅಂತರಾಯವಿರಲಿಲ್ಲ. ಶಾಬಯ್ಯನ ಭೇಟಗೆ ಮಾತ್ರ ಕೊ...

ನೃಸಿಂಹಮಠದ ಪಾರುಪತ್ಯಗಾರನ ಅಳಿಯ ಶೋಣಭದ್ರ ಭಟ್ಟನು ಕುಮುದಪುರದಲ್ಲಿರುವ ಆ ಮಠಕ್ಕೆ ಇರುವ ಭೂಮಿಗಳಿಂದ ಅದರ ಜೀರ್ಣೋ ದ್ಧಾರಕ್ಕೋಸ್ಟರ ಕೆಲವು ಮರಗಳನ್ನು ಕಡಿಸುವುದಕ್ಕೆ ಬಂದವನು ಆಂಜನೇ ಯಾಲಯವದಲ್ಲಿ ಬಿಡಾರವಿದ್ದು ಮಾವನು ಕೊಟ್ಟ ಅಜ್ಞೆಗಳಂತೆ ಪ್ರವ...

ಆಶ್ರಮದ ವಿಶಿಷ್ಟ ವಹಿವಾಟು ಸಾಂಗನಾಗಿ ನಡೆದೆ ಮೇಲೆ ವೇದ ವ್ಯಾಸ ಉಪಾಧ್ಯನ ಹೊಟ್ಟೆಕಿಚ್ಚು ವೃದ್ಧಿಯಾಗುತ್ತಾ ಬಂತು ಹಾಗೆಯೇ ತನ್ನ ಮೇಲಿರುವ ಪ್ರಕರಣದಲ್ಲಿ ತನ್ನ ಗತಿ ಹ್ಯಾಗಾಗುವದೋ ಎಂಬ ಭಯವು ತುುಬಿ ಚಿಂತಾತುರನಾಗಿರುವದು ಅವನ ಮುಖಬಭಾವದಿಂದ ಪತ್ನ...

ಕನಕಸಭಾನಾಯಕನು ನ್ಯಾಯಸ್ಫಾ ನದಲ್ಲಿ ಸಾಕ್ಷಾತ್‌ ಯಮಧರ್ಮ ನಂತೆ ನಿಷ್ಠರುಣಿಯು ನೀತಿಧರ್ಮವನ್ನು ಪರಿಪಾಲಿಸುವದರಲ್ಲಿ ಸ್ವಂತಮಗ ನಿಗಾದರೂ ಲಕ್ಷ್ಯಮಾಡದ ಸ್ವಭಾವವುಳ್ಳನನು. ಪರಂತು ಕೊಂಚ ಸ್ತುತ್ಯಪ್ರಿಯನೂ ಚಾಡಿಮಾತುಗಳಿಗೆ ಕಿವಿಕೊಡುವ ದುರಭ್ಯಾಸದವನೂ...

ಶ್ರೀಕುಮುದಪ್ರರದ. ಮಠಾಧಿಪತಿ ಚಂಚಲನೇತ್ರ ಶ್ರೀಪಾದಂಗಳು ವೃದ್ಧಾಪ್ಯದದೆಸೆಯಿಂದ ತನಗೆ ಉತ್ತರಾಧಿಕಾರಿಯಾಗಿ ಸೂರ್ಯನಾರಾಯ ಣಾಚಾರ್ಯನೆಂಬ ಯೋಗ್ಯ ಹುಡುಗನನ್ನು ಆರಿಸಿ ಅವನಿಗೆ ವಾಡಿಕೆಯಿರುವ ಕ್ರಮದಲ್ಲಿ ಆಶ್ರಮಕೊಡುವುದಕ್ಕೆ ಮುಹೂರ್ತವನ್ನು ನೋಡಿರುತ...

ಕುಮುದಪುರದಲ್ಲಿರುವ ವೈಷ್ಣವ ಮಂಡಳಿಯು ಸಣ್ಣದಲ್ಲ. ಆ ಮತದ ಪ್ರಮುಖ ಗೃಹಸ್ತರಲ್ಲಿ ಮತಸಂಬಂಧವಾದ ವಿಚಾರಗಳಿಗೆ ಹೆಚ್ಚು ತಾತ್ಪರ್ಯ ಕೊಡುವ ರಂಗಾಚಾರ್ಯ, ಲಕ್ಷ್ಮಿಲೋಲಾಚಾರ್ಯ ಶಾರ್ಜ್ಗಧರೆ ಉಪಾಧ್ಯ, ಗರುಡಾಚಾರ್ಯ, ಖಗವಾಹನ ಭಟ್ಟ, ಜ್ಞಾನಸಾಗರರಾಯ, ಮೀನ...

1...1213141516...33

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...