
ಸ್ಮಶಾನದ ಕೆಲಸದಲ್ಲಿ ತೊಡಗಿದ್ದ ಆತನ ಸಂಸಾರ ಎಲ್ಲರಂತೆ ಹಬ್ಬ ಹುಣ್ಣಿವೆ ಮಾಡುತ್ತಿದ್ದರು. ಹೆಣಗಳನ್ನು ಹೂಳಿಡುವ ಕಾಯಕ ಕೈ ತುಂಬ ಹಣ ಕೊಡುತಿತ್ತು. ಕೈ ತೊಳೆದು ಗೋರಿಕಲ್ಲಿನ ದೈವಕ್ಕೆ ಕೈಮುಗಿದು ಪಾಯಸ ಮಾಡಿ ಮೆಲ್ಲುತ್ತಿದ್ದರು. ಇವರ ಸ್ಮಶಾನ ಸಂಸ...
ಆ ಮುದುಕ ಐವತ್ತು ವರ್‍ಷ ಸ್ಮಶಾನದಲ್ಲಿ ಹೆಣಗಳನ್ನು ಹೂಳಿಡುತ್ತಿದ್ದ. ತನ್ನ ಮಗ ಓದಿ ಆಫೀಸರ್ ಆಗಲಿ ಎಂದು ಕನಸು ಕಂಡ. ನಿರುದ್ಯೋಗಿ ಮಗನಿತ್ತ ಅರ್ಜಿಗಳಿಗೆ ಯಾರೂ ಕೆಲಸ ಕೊಡಲಿಲ್ಲ. ಮತ್ತೆ ಹೆಣಗಳೇ ಅವನಿಗೆ ಅಪಾಯಿಂಟ್ಮೆಂಟ್ ಆರ್ಡರ್ ಕಳಿಸಿದ್ದವು. ...
ಮಸಣದಲ್ಲಿ ಅವರು ಎಷ್ಟೋ ಕಲ್ಲುಗಳನ್ನು ನೆಟ್ಟಿದ್ದರು. ಅವರ ಕುಟುಂಬಕ್ಕೆ ಆಧಾರ ಸ್ತಂಭಗಳಂತೆ ಗೋರಿಕಲ್ಲುಗಳೊಂದಿಗೆ ಬಾಂಧವ್ಯ, ಬಂಧುತ್ವ ಇವರ ಬಾಳಿಗೆ ಬೆಸುಗೆಯಾಗಿತ್ತು. ಇವರ ಮುದ್ದು ಮಕ್ಕಳು ಗೋರಿಕಲ್ಲಿನ ಹಿಂಭಾಗದಲ್ಲಿ ಕಣ್ಣುಮುಚ್ಚಾಲೆ ಆಡುತ್ತ ...
ಪರಿಸರ ಪ್ರೇಮಿಯಾದ ಆತ ಮನೆಯ ಮುಂದಿನ ಜಾಗದಲ್ಲಿ ಹೊಂಗೆ ಸಸಿ ನೆಟ್ಟು, ಅದನ್ನು ಕಾಪಾಡಲು ಇಟ್ಟಿಗೆ ಗೂಡು ಕಟ್ಟಿಸಿ ನೀರೆರೆಯುತ್ತಾನೆ. ಅದು ಹೆಮ್ಮರವಾಗಿ ಅದರ ತಂಪು ನೆರಳಿನ ಕನಸನ್ನು ಕಾಣುತ್ತಾನೆ. ಧಿಡೀರನೆ ಹದನೈದು ದಿನ ಊರ ಬಿಟ್ಟು ಹಳ್ಳಿಗೆ ಹೋ...
ಮನೆಯ ಮುಂದೆ ಬೃಹದಾಕಾರವಾಗಿ ಬೆಳದ ಮರದಿಂದ ಉದುರುವ ಒಣಗಿದ ಎಲೆ, ಕಡ್ಡಿ ಕಸ, ಹುಳು ಹುಪ್ಪಟ್ಟೆ ಸಹಿಸಲಾರದೆ ಮನೆಯ ಗಂಡು ಮಕ್ಕಳು, ತಂದೆ ಎಷ್ಟು ಬೇಡವೆಂದರು ಕೇಳದೆ ಕಡಿಸಿ ಹಾಕಿದರು. ಶಾಕೋಪ ಶಾಕೆಯಾಗಿ ಹರಡಿ ಹಸಿರು ತಂಪನ್ನು ನೀಡುತ್ತಿದ್ದ ಮರವನ್...
ಒಂದು ಮಳೆಯ ಹನಿ ತನ್ನ ಪಕ್ಕದಲ್ಲಿದ್ದ ಇನ್ನೊಂದು ಮಳೆ ಹನಿಯನ್ನು ಕೇಳಿತು “ದೇವರು ಎದುರಿಗೆ ಬಂದರೆ ನೀನು ಏನು ವರ ಕೇಳುವೆ?” ಎಂದು. ಮೊದಲ ಮಳೆ ಹನಿ ಹೇಳಿತು- “ಸಾಗರ ಸೇರುವವರೆಗೂ ನನ್ನ ಹನಿ ದೇಹ ಉಳಿಸು” ಎಂದು. ...














