Jaraganahalli Shivashankar

ಸೈ

ಮಂಟಪಗಳ ಮುಂದೆ ಮೆರಗಾಗಿ ನಿಲ್ಲುವ ಸಿಂಗಾರದ ಬಾಳೆ ನೆರವಾಗಿ ನಿಲ್ಲಲಿಲ್ಲ ಯಾವ ಹಕ್ಕಿ ಪಿಕ್ಕಿ ಗೂಡಿಗು ಯಾರ ಮನೆಯ ಮಾಡಿಗು ಮೊನೆ ಮೊನೆ ಮುಳ್ಳಿನ ಬುರ ಬುರ […]

ಮಾತೃಛಾಯಾ

ತೊನೆಯದಿದ್ದರು ಹಣ್ಣು ಕಾಯಿ ಹೂಗಳನ್ನು ಬಿದಿರು ತೊಟ್ಟಿಲಾಗಿ ತೂಗುವುದು ಮಕ್ಕಳನ್ನು ಬುಟ್ಟಿಯಾಗಿ ಹೊರುವುದು ಹಣ್ಣು ಕಾಯಿ ಹೂಗಳನ್ನು *****

ತ್ಯಾಗ

ಮರಕ್ಕೆ ಇಲ್ಲದ ರುಚಿ ಹಣ್ಣಿಗೆ ಬಂತು ಗಿಡಕ್ಕೆ ಇಲ್ಲದ ಬಣ್ಣ ಹೂವಿಗೆ ಬಂತು ತಾವು ಉಣ್ಣದ ಸುಖವ ತಮ್ಮ ಸಂತಾನದ ಬೀಜಗಳ ಸುತ್ತ ಕೂಡಿಟ್ಟವು *****

ಬಾಳಿಕೆ

ಹತ್ತಾರು ವರುಷ ನೆರಳಾಗಿ ನಿಂತ ಮರ ತೊಲೆಯಾಗಿ ಉಳಿಯಿತು ನೂರಾರು ವರುಷ ನೂರು ವರುಷ ಆಳಿದ ಅರಸ ಹೆಣವಾಗಿ ಉಳಿಯಲಿಲ್ಲ ಮೂರು ದಿವಸ *****

ವೈದೇಹಿ-ಜರಗನಹಳ್ಳಿ

ವೈದೇಹಿ ಮತ್ತು ಜರಗನಹಳ್ಳಿ ಶಿವಶಂಕರ್‍ ಒಬ್ಬಳು ಭೂಜಾತೆ ಇನ್ನೊಬ್ಬ ಕೈಲಾಸಾಧಿಪತೆ ಅವರುಗಳಿಗಿದ್ದಷ್ಟು ಈ ಕವನಗಳಿಗೆ ಆಳ ಎತ್ತರವಿಲ್ಲ ವೈ? ಎಂದು ಕೇಳಿದರೆ, ಇದು ಬಿಟ್ಟು ಇನ್ನೇನು ಉತ್ತರ […]