ಧರ್ಮ ಬೇರೆ ಭಾಷೆ ಬೇರೆ
ರಾಜ್ಯ ಒಂದೇ ಕರ್ನಾಟಕ

ನಾಡು ಬೇರೆ ನುಡಿಯು ಬೇರೆ
ಜೀವಿಸುವ ಆತ್ಮ ಒಂದೇ

ದೇಶ ಬೇರೆ ರಾಜ್ಯ ಬೇರೆ
ದೇಶ ಒಂದೇ ಭಾರತ

ನಡೆದಾಡುವ ದಾರಿ ಬೇರೆ ವಾಸಿಸುವ ಸ್ಥಳ ಬೇರೆ
ವಿಶ್ವದಲ್ಲಿ ಭೂತಾಯಿ ಒಬ್ಬಳೆ

ನೀರು ದೊರೆಯುವ ರೀತಿ ಬೇರೆ
ಕುಡಿಯುವ ನೀರು ಒಂದೇ

ಭಾಷೆ ಬೇರೆ ಬರೆಯುವ ಶೈಲಿ ಬೇರೆ
ಅರ್ಥೈಸುವ ಅರ್ಥ ಒಂದೇ

ಮಾನವ ಜಾತಿಗಾಗಿ ಪ್ರಯತ್ನಿಸಿ
ಕೂಲಕೊಟ್ಟಿ ಮಾನವರಿಗೆ ರಕ್ಷಿಸಿ

ಕವಿತೆ ಬರೆಯುವ ಶೈಲಿ ಬೇರೆ
ನಾ ಬರೆಯುವ ಕವಿತೆ ಒಂದೇ
*****