ಲಂಚ

ನಮ್ಮ ಬಾಜೂಮನಿ ಮುದುಕಿ ಯಾವತ್ತೂ
ತನ್ನ ಮಗಗಽ ಒಟಾ ಒಟಾ ಮಾಡಕೊಂತ
ಹೇಽಳ್ತಿತ್ತು.
ಯಪ್ಪಾ ಮಗನಽ ಮನಶ್ಯಾರಾಗ ಕೂಡುಕೋರೋ ಅಂತ
ಆದರೆ ಈ ಮಗ ಮುಖದ ಮ್ಯಾಲ
ನಗು ತೋರಿಸಿದ್ರೂ ಎದ್ಯಾಗ ನೂರೆಂಟ ಕ್ಯಾಕ್ಟಸ್‌
ತುಂಬಿಕೊಂಡ ಮತ್ತ ಮ್ಯಾಲ ಕುಡದ
ಕೆಕ್ಕರಿಸಿಕೊಂಡ
ನೀ ಸುಮ್ಮನಿರಬೆಽ ನಿನಗೆ ತಿಳಿಯಾಕಿಲ್ಲ ಅಂತ
ಹೆದರಿಸಿ ಸ್ಮಶಾನದ ತಗ್ಗಿನಾಗ ಮಲಕೊಂಡಿತ್ತು
ಅದರ ತಲಿಬುರುಡಿ ಎದ್ದು
ಚಹಾದಂಗಡಿ ಮುಂದ ಆಡ್ಡಾಡಕೊಂತ ಬಂದಾಗ
ಪುಕ್ಕಟೆ ಸುದ್ದಿ ಪೇಪರನಿಂದಲೇ
ಇಲ್ಲಾ ಮನಶ್ಯರಿಂದಲೇ ಕೇಳಿಕೊಂಡ
ನಾ ನಿಮ್ಮ ಏರಿಯೊ ಕಾಯೋ ಪೋಲೀಸ್ ಅಂತಾ
ಲಾಟಯಿಂದ ಚಟ್ ಚಟ್ ಬಡಕೊಂತ ಒಳಗ್ಹೋಗಿ
ಕುಂತ ದುಡ್ಡಕೊಡದ ಇಡ್ಲಿ – ಚಾ ಕುಡದ
ಅಡ್ಡಾಡಕೊಂತ
ಮಧ್ಯಾನ್ಹ ಬಸ್ಸಿನಾಗ ಹತ್ತಿ
ನಾ ಕಂಡಕ್ಟರ ಅಂತ ಹೇಳಿ ಉಳಿದ
ಚಿಲ್ಲರೆ ಕೊಡವ ಪಂಚ ಕಟ್‌ಕಟಿಸಿ
ಬಸ್ಸಿನ್ಯಾಗಿನ ದ್ಯಾಮಪ್ಪ ಲಗಮವ್ವರನ್ನ
ಅಂದಿಸಿ
ಲೊಳಗೆ ಕಾಲಹಾಕಿಕೊಂಡ ಕಾರ್ಪೋರೇಶನ್‌ದಾಗ
ಪಟ್ಟಾವಾಲಾ ಆಗಿ ಒಳಗ ಸಾಹೇಬರ ಮುಂದ
ನಾ ಮುಂಡ ಇಲ್ಲದ ರುಂಡ
ಅನನಕೋಂತ ಒಳಗ ಹೋಗುವಾಗ
ನಾ ನಿನ್ನ ಮುಂಡಽನ ಬಾರೋ
ಎಂದು ಎರಡೂ ಕೂಡಿ ಹಲ್ಲಕಿರೀತಾವು
ಸಮಾಧಿ ಬುಡದಾಗ ಗೊರಲಿ
ಹುಟ್ಟಕೊಳ್ತಾವನ್ನೋದ ಗೊತ್ತಾಗದಽ
ಗಾಡಿ ಏರಿಹೋಗಿ
ರಕ್ತ- ನರ ಇಲ್ಲದ ಈ ಬುರುಡೆಗಳೆರಡೂ
ಗೊರಲಿಗಳ ಮ್ಯಾಲ ಬಿದ್ದು ಏಳುವದರೊಳಗ
ಸಮಾಧಿಯಾಗಿದ್ದು
ಮುದುಕಿ ಡೊಗ್ಗಾಲೂರಿ ಮಗನ ಮುಖ
ನೋಡುವಾಗ
ಬುರುಡಿಯಿಂದ ಬಂದ ಒಂದೊಂದೇ
ಹುಳುಗಳು ಅವನ ಒಂದೊಂದೇ ಕಥೆ
ಹೇಳಿಕೊಂತ ಮುದುಕಿನ್ನ ಕ್ಯಾಕರಿಸಿ ನೋಡುವಾಗ
ಮುದುಕಿ ಜೀವಾಽನ ಹಾರಿಹೋಗಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅದರ ಮಾತಿನ್ನೇಕೆ
Next post ಲಿಂಗಮ್ಮನ ವಚನಗಳು – ೩೪

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…