ಬಲು ಕಾಲ ಸುತ್ತುತಲಿ ಬಳಲಿದೆನು
ಬಲು ದೂರ ಬಂದಿಹೆನು
ಎಡಹಿದೆನು ಎನಿತೆನಿತೊ ದಾರಿಯಲಿ
ಕೊನೆಗಿಲ್ಲಿ ನಿಂದಿಹೆನು!
ನಾಳೆ ಬಾಳೆಂತಹುದೋ ಅರಿಯೆನದ
ಇಂದೊಂದೆ ನಿಜವೆನಗೆ;
ಅದನೆನಗೆ ತೋರಿಸುತ ಬೆಳಗಿಸಿದ
ಉಷೆಯನ್ನ ಬಾಳ ನಗೆ!
*****
ಬಲು ಕಾಲ ಸುತ್ತುತಲಿ ಬಳಲಿದೆನು
ಬಲು ದೂರ ಬಂದಿಹೆನು
ಎಡಹಿದೆನು ಎನಿತೆನಿತೊ ದಾರಿಯಲಿ
ಕೊನೆಗಿಲ್ಲಿ ನಿಂದಿಹೆನು!
ನಾಳೆ ಬಾಳೆಂತಹುದೋ ಅರಿಯೆನದ
ಇಂದೊಂದೆ ನಿಜವೆನಗೆ;
ಅದನೆನಗೆ ತೋರಿಸುತ ಬೆಳಗಿಸಿದ
ಉಷೆಯನ್ನ ಬಾಳ ನಗೆ!
*****